Health: ಮನಸಿಗೆ ತಿಳಿದಂತೆ ನೀರು ಕುಡಿಯೋ ಹಾಗಿಲ್ಲ!

Water : ವಾತ, ಪಿತ್ತ ಮತ್ತು ಕಫ ಇವುಗಳಲ್ಲಿ ನಿಮ್ಮದು ಯಾವ ಪ್ರಕೃತಿ? ನೀವು ನೀರನ್ನು ಹೇಗೆ ಸೇವಿಸುತ್ತೀರಿ ಎಂಬುದಕ್ಕೂ ನಿಮ್ಮ ದೇಹದಲ್ಲಾಗುವ ಏರುಪೇರುಗಳಿಗೂ ಸಂಬಂಧವಿದೆ.

Health: ಮನಸಿಗೆ ತಿಳಿದಂತೆ ನೀರು ಕುಡಿಯೋ ಹಾಗಿಲ್ಲ!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 22, 2022 | 1:27 PM

Water: ನೀವು ಪ್ರತಿದಿನ 8 ಲೋಟ ನೀರು ಕುಡಿಯುತ್ತಿದ್ದೀರಾ? ಇಲ್ಲದಿದ್ದರೆ, ಈಗಿನಿಂದಲೇ ಪ್ರಾರಂಭಿಸಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದಲ್ಲಿ ಅನೇಕ ಅಡ್ಡ-ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ಲಾಸ್ಮಾ, ಸೈಟೋಪ್ಲಾಸಂ, ಸೀರಮ್, ಲಾಲಾರಸ, ಮೂಗಿನ ಸ್ರವಿಸುವಿಕೆ, ಸೆರೆಬ್ರೊಸ್ಪೈನಲ್ ದ್ರವ, ಮೂತ್ರ ಮತ್ತು ಬೆವರು ರೂಪದಲ್ಲಿ ನೀರು ನಮ್ಮ ದೇಹದಲ್ಲಿ ಅಸ್ತಿತ್ವದಲ್ಲಿರುತ್ತದೆ. ಇವೆಲ್ಲವೂಗಳು ಇದ್ದಿದ್ದಕ್ಕೇ ಜೀವಕೋಶಗಳು ದೇಹದಲ್ಲಿ ಜೀವಂತವಾಗಿರುವುದು. ಎಷ್ಟೋ ಸಲ ಎಷ್ಟು ನೀರು ಕುಡಿಯಬೇಕು ಎಂಬ ಅರಿವಿದ್ದರೂ ಕೆಲಸದ ಒತ್ತಡದಲ್ಲಿ ಮರೆಯುತ್ತಿರುತ್ತೇವೆ. ಅದರಿಂದಾಗಿಯೇ ದೇಹ ನಿರ್ಜಲೀಕರಣಗೊಂಡು ಏನೆಲ್ಲ ರೋಗಗಳಿಗೆ ಒಡ್ಡಿಕೊಳ್ಳಲಾರಂಭಿಸುತ್ತದೆ. ಕೊನೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪರೀಕ್ಷೆ ಚಿಕಿತ್ಸೆ ಎಂದು ಬೆನ್ನು ಹತ್ತಬೇಕಾಗುತ್ತದೆ. ಆದರೆ, ಮನುಷ್ಯನ ದೇಹಕ್ಕೆ ನೀರು ಎಷ್ಟು ಅವಶ್ಯ ಎಂಬುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ. ಇಲ್ಲಿರುವ ಕೆಲವು ಸಲಹೆಗಳನ್ನು ಗಮನಿಸಿ.

ನೀರು ಕುಡಿಯುವಾಗ ನಿಂತು ಕುಡಿಯಬೇಡಿ, ಕುಳಿತು ಕುಡಿಯಿರಿ. ನಿಂತು ಕುಡಿದರೆ ದೇಹದಲ್ಲಿರುವ ದ್ರವಗಳು ಅಸಮತೋಲನಗೊಂಡು ಸಂಧಿವಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕುಳಿತು ಕುಡಿದರೆ, ಸ್ನಾಯುಗಳು,  ನರಮಂಡಲವು ಹೆಚ್ಚು ವಿಶ್ರಾಂತಿ ಪಡೆಯುತ್ತವೆ ಮತ್ತು ಆಹಾರ ಮತ್ತು ಇತರ ದ್ರವಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನರಗಳಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಮೂತ್ರಪಿಂಡಗಳು ಶೋಧನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ.

ಇದನ್ನೂ ಓದಿ : Health : ಮಧುಮೇಹಿಗಳೀಗ ‘ಸೈಕಲ್​ದೇವೋಭವ’ ಎನ್ನುತ್ತಿದ್ದಾರೆ

ಇದನ್ನೂ ಓದಿ
Image
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Image
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ಒಂದೇ ಉಸಿರಿಗೆ ಗಟಗಟನೆ ಎಲ್ಲಾ ನೀರನ್ನು ಕುಡಿಯುವುದು ಸರಿಯಲ್ಲ. ಸ್ವಲ್ಪಸ್ವಲ್ಪವೇ ನೀರನ್ನು ಸಮಾಧಾನವಾಗಿ ಕುಡಿಯಿರಿ. ಮಧ್ಯೆ ಉಸಿರಾಡಿ, ವಿಶ್ರಾಂತಿ ತೆಗೆದುಕೊಳ್ಳಿ. ಊಟ ಮಾಡುವಾಗಲೂ ಇದೇ ಕ್ರಮ ಅನುಸರಿಸಿ. ಏಕೆಂದರೆ, ದೇಹದಲ್ಲಿ ಮೂರು ಪ್ರಕೃತಿಗಳಿವೆ. ವಾತ, ಪಿತ್ತ ಮತ್ತು ಕಫ. ನೀವು ನೀರನ್ನು ಹೇಗೆ ಸೇವಿಸುತ್ತೀರಿ ಎಂಬುದಕ್ಕೂ ಇವುಗಳ ಏರುಪೇರಿಗೂ ಸಂಬಂಧವಿರುತ್ತದೆ. ವಾತ ಪ್ರಕೃತಿ ಹೊಂದಿರುವವರು  ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರನ್ನು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಪಿತ್ತ ಪ್ರಕೃತಿ ಹೊಂದಿರುವ ಜನರು ಊಟದ ಸಮಯದಲ್ಲಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತ ಊಟ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಕಫ ಪ್ರಕೃತಿ ಹೊಂದಿರುವವರು ಊಟ ಮಾಡುವ ಮೊದಲೇ ನೀರನ್ನು ಕುಡಿಯಬೇಕು. ಇದು ಅವರ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Health : ಬೇಸಿಗೆಯಲ್ಲಿ ಹಲ್ಲುನೋವು ಉಂಟಾಗಲು ಕಾರಣವೇನು?

ವಾತಾವರಣದಲ್ಲಿರುವ ತಾಪಮಾನಕ್ಕೆ ತಕ್ಕಂತೆ ನೀರಿನ ತಾಪಮಾನವೂ ಇರುತ್ತದೆ. ಹಾಗಾಗಿ ಐಸ್​ ಹಾಕಿದ ನೀರನ್ನು ಕುಡಿಯಬೇಡಿ. ನೀರು ಬೆಚ್ಚಗಿದ್ದಷ್ಟೂ ಜೀರ್ಣಕ್ರಿಯೆ ಸುಲಭ. ತಣ್ಣೀರು ದೇಹದ ವಿವಿಧ ಅಂಗಗಳಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಹಾಗಾಗಿ ಬೆಚ್ಚಗಿನ ನೀರನ್ನು ಕುಡಿಯುವುದು ಸರಿಯಾದ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಅನುಕೂಲ. ಇದರಿಂದ ತೂಕವೂ ನಿಯಂತ್ರಣದಲ್ಲಿರುತ್ತದೆ. ದೇಹದ ನೋವೂ ಶಮನವಾಗುತ್ತದೆ. ಏಕೆಂದರೆ ಇದು ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್