International Yoga Day 2022: ಮಕ್ಕಳಿಗಾಗಿ ಈ 5 ಯೋಗಾಸನಗಳು

Yoga For Kids : ಮಾನವೀಯತೆಯಿಂದ ಪರಸ್ಪರರನ್ನು ಅರ್ಥ ಮಾಡಿಕೊಂಡು ಸಮಾಧಾನದಿಂದ ಇರುವುದು ಹೇಗೆ ಎನ್ನುವುದು ಸದ್ಯದ ತುರ್ತು. ಹಾಗಾಗಿ ದೇಹಮನಸ್ಸನ್ನು ಸಮಚಿತ್ತವಾಗಿರಿಸಿಕೊಳ್ಳುವಲ್ಲಿ ಯೋಗದ ಪಾತ್ರ ಹಿರಿದು. ಇದು ಎಳವೆಯಲ್ಲಿಯೇ ರೂಢಿಗೊಳ್ಳಲಿ.

International Yoga Day 2022: ಮಕ್ಕಳಿಗಾಗಿ ಈ 5 ಯೋಗಾಸನಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 21, 2022 | 4:01 PM

Yoga For Children: ಕೊರೊನಾದಿಂದ ಸಾಕಷ್ಟು ನೋವುಸಾವುಗಳನ್ನು ಕಣ್ಣಾರೆ ಕಂಡಮೇಲೆ ಅನೇಕರ ಮನಸ್ಸು ಖಿನ್ನತೆಗೆ ಒಳಗಾಗಿದೆ. ಆತಂಕ, ಉದ್ವೇಗದಿಂದ ನಿತ್ಯಜೀವನಶೈಲಿಗೆ ಒಗ್ಗಿಕೊಳ್ಳಲಾಗದೆ ತತ್ತರಿಸುವಂತಾಗುತ್ತಿದೆ. ಒಬ್ಬರು ಇಂಥ ಸ್ಥಿತಿಗೆ ಜಾರಿದರೂ ಅದು ಅವರ ಸುತ್ತಮುತ್ತಲಿರುವವರ ಮೇಲೆಲ್ಲ ಪರಿಣಾಮವನ್ನುಂಟು ಮಾಡುವಷ್ಟು ಸೂಕ್ಷ್ಮತನದಿಂದ ಕೂಡಿದೆ, ಅದು ಕುಟುಂಬವಾಗಿರಬಹುದು, ಕಚೇರಿಯಾಗಿರಬಹುದು. ಒಟ್ಟಾರೆಯಾಗಿ ಮಾನವೀಯತೆಯಿಂದ ಪರಸ್ಪರರನ್ನು ಅರ್ಥ ಮಾಡಿಕೊಂಡು ಸಮಾಧಾನದಿಂದ ಇರುವುದು ಹೇಗೆ ಎನ್ನುವುದಷ್ಟೇ ಎಲ್ಲರ ಆದ್ಯತೆ. ಹಾಗಾಗಿ ಮನಸ್ಸನ್ನು ಸಮಾಧಾನವಾಗಿಟ್ಟುಕೊಳ್ಳುವಲ್ಲಿ ಯೋಗದ ಪಾತ್ರ ಹಿರಿದು. ದೈಹಿಕ ಕಾಯಿಲೆಗಳಿಗೆ ಯೋಗ ಹೇಗೆ ಪರಿಹಾರವೋ ಮಾನಸಿಕ ಕಾಯಿಲೆಗಳಿಗೂ ಯೋಗ ದಿವ್ಯೌಷಧ. ಅಂತೆಯೇ ಮಕ್ಕಳಿಗೆ ಯೋಗಾಭ್ಯಾಸ ಅತ್ಯವಶ್ಯ. ಅದು ಎಳವೆಯಿಂದಲೇ ಮಾನಸಿಕ ಸಮತೋಲನ ಸಾಧಿಸಲು, ಶಾರೀರಿಕ ಸದೃಢತೆಗೂ ಪುಷ್ಟಿ ನೀಡುತ್ತದೆ.

1. ಉಷ್ಟ್ರಾಸನ 

ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು. ನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು. ಉಸಿರನ್ನು ಹೊರದೂಡುತ್ತಾ ನಿಧಾನ ಹಿಮ್ಮುಖವಾಗಿ ಬಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಆದಷ್ಟು ಹಿಂದಕ್ಕೆ ಬಗ್ಗಿಸಬೇಕು. ಸಾಧ್ಯವಾದಷ್ಟು ಬೆನ್ನನ್ನು ಹಿಂದೆ ಚಾಚಿ ಕೈಗಳನ್ನು ಅಂಗಾಲಿಗೆ ಊರಬೇಕು. ಬಿಲ್ಲಿನಂತೆ ಬಾಗಿದ ಈ ಸ್ಥಿತಿಯಲ್ಲಿ ಹತ್ತು ಸಲ ದೀರ್ಘವಾಗಿ ಉಸಿರಾಡಿ ಯಥಾಸ್ಥಿತಿಗೆ ಬರಬೇಕು.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಈ ಆಸನದಿಂದ ತೊಡೆ, ಸೊಂಟ, ಹೊಟ್ಟೆ, ಕುತ್ತಿಗೆ ಸದೃಢವಾಗುತ್ತದೆ. ಹರ್ನಿಯಾ, ಆಪೆಂಡಿಸೈಟಸ್ ನಿಂದ ಬಳಲುವ ದೊಡ್ಡವರಿಗೂ ಇದು ಉಪಕಾರಿ. ಗೂನುಬೆನ್ನು ಇರುವವರು ಇದನ್ನು ಅಭ್ಯಾಸ ಮಾಡಬಹುದು.  ಸಹಾಯಕಾರಿ.

2. ಮತ್ಸ್ಯಾಸನ 

ಮತ್ಸ್ಯಾಸನ ಅಥವಾ ಮೀನಿನ ಭಂಗಿಯು ಮಕ್ಕಳಿಗೆ ಹೆಚ್ಚು ಆಸಕ್ತಿದಾಯಕ ಎನ್ನಿಸುವಂಥ ಆಸನ. ಪದ್ಮಾಸನದಲ್ಲಿ ಕುಳಿತುಕೊಳ‍್ಳಬೇಕು. ನಂತರ ಬಲಗೈ ಸಹಾಯದಿಂದ ಬಲಗಡೆಯಿಂದ ಅಂಗಾತ ಮಲಗಬೇಕು. ತಲೆ, ಬೆನ್ನು, ತೊಡೆ ಹಾಗೂ ಮಂಡಿ ನೆಲಕ್ಕೆ ತಾಕಿರಬೇಕು. ನಿಧಾನ ಸೊಂಟ, ಬೆನ್ನು ಮತ್ತು ಕತ್ತನ್ನು ಸ್ವಲ್ಪ ಮೇಲಕ್ಕೆತ್ತಿ ತಲೆಯನ್ನು ಹಿಂದಕ್ಕೆ ಬಾಗಿಸಬೇಕು. ನಂತರ ಎರಡೂ ಕೈಗಳಿಂದ ಬಲಗಾಲಿನ ಹೆಬ್ಬೆರಳನ್ನು, ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಳ್ಳಬೇಕು. ಕ್ರಮೇಣ ಕಾಲುಗಳನ್ನು ಮೇಲಕ್ಕೆ ಎಳೆಯುತ್ತ ಮೊಣಕೈಗಳನ್ನು ನೆಲಕ್ಕೆ ತಾಕಿಸಲು ಪ್ರಯತ್ನಿಸಬೇಕು. ಆಗ ಬೆನ್ನು ಕಮಾನಿನಂತಾಗುವುದು. ಇದು ಆರಂಭದಲ್ಲಿ ಕಷ್ಟ ಎನ್ನಿಸಬಹುದು. ಕ್ರಮೇಣ ಅಭ್ಯಾಸವಾಗುತ್ತದೆ. ಈ ಸ್ಥಿತಿಯಲ್ಲಿ ಒಂದರಿಂದ ಎರಡು ನಿಮಿಷಗಳವರೆಗೆ ಇರಬಹುದು. ಇದರಿಂದ ಶರೀರದಲ್ಲಿ ಲವಲವಿಕೆ ಹೆಚ್ಚಾಗುತ್ತದೆ. ಈ ಆಸನದಿಂದ ಕುತ್ತಿಗೆ, ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ. ಕಣ್ಣಿನ ಕಾಂತಿ ಹೆಚ್ಚುತ್ತದೆ.

ಇದನ್ನೂ ಓದಿ : International Yoga Day 2022 Photos: ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಯೋಗಾಭ್ಯಾಸದ ಅದ್ಭುತ ಕ್ಷಣಗಳು

3. ಧನುರಾಸನ 

ನೆಲದ ಮೇಲೆ ಬೋರಲಾಗಿ ನೇರವಾಗಿ ಮಲಗಬೇಕು. ನಂತರ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಹಿಂದಕ್ಕೆ ಬಾಗಿಸಬೇಕು. ಬಾಗಿಸಿದ ಕಾಲುಗಳ ಗಿಣ್ಣನ್ನು ಒಂದೊಂದಾಗಿ ಹಿಡಿದುಕೊಳ್ಳಬೇಕು. ನಂತರ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಇರುತ್ತದೆ. ಒಮ್ಮೊಮ್ಮೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತುವಾಗ ತೊಡೆಗಳಲ್ಲಿ ಹಿಡಿದಹಾಗೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆ ಎತ್ತುವುದನ್ನು ಅಭ್ಯಾಸ ಮಾಡುವುದು ಉತ್ತಮ. ಧನುರಾಸನದಿಂದ ಎದೆ, ಹೃದಯ, ಹೊಟ್ಟೆ ಮತ್ತು ಶ್ವಾಸಕೋಶಗಳು ಬಲಿಷ್ಠವಾಗುತ್ತವೆ. ಬೆನ್ನುಮೂಳೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಪಡೆಯುತ್ತದೆ. ಜಠರಾಗ್ನಿಯು ಹೆಚ್ಚು ಉದ್ದೀಪನಗೊಳ್ಳುತ್ತದೆ. ಜೀರ್ಣಶಕ್ತಿಯೂ ಹೆಚ್ಚುತ್ತದೆ.

4. ಬಾಲಾಸನ

ವಜ್ರಾಸನದಲ್ಲಿ ಕುಳಿತು ಕೈಗಳನ್ನು ಮುಂಭಾಗದಲ್ಲಿ ಚಾಚಬೇಕು, ಸುಮಾರು ಐದು ನಿಮಿಷಗಳ ಕಾಲ ಬೆರಳುಗಳು ಮತ್ತು ಹಣೆಯನ್ನು ನೆಲಕ್ಕೂರಬೇಕು. ಆಗ ಸಂಪೂರ್ಣ ಉಸಿರಾಟದ ಮೇಲೆ ಗಮನವಿರಿಸಬೇಕು. ಮಗುವಿನ ಮನಸ್ಸು ಈ ಆಸನದಿಂದ ಶಾಂತವಾಗುತ್ತದೆ. ನಿತ್ಯವೂ ಇದನ್ನು ಅಭ್ಯಾಸ ಮಾಡಿಸಬೇಕು.

ಇದನ್ನೂ ಓದಿ : International Yoga Day 2022: ನಿಮ್ಮ ಹೃದಯ ಜೋಪಾನಿಸಿಕೊಳ್ಳಲು ಈಗಿನಿಂದಲೇ ಯೋಗ ಮಾಡಿ

5. ಗೋಮುಖಾಸನ 

ಮೊದಲು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಬೇಕು. ಬಲಗಾಲನ್ನು ಮಡಿಚಿ, ಬಲ ಹಿಮ್ಮಡಿಯು ಪೃಷ್ಠಭಾಗಕ್ಕೆ ತಾಕುವಂತೆ ಎಡತೊಡೆಯ ಕೆಳಗೆ ಇಡಬೇಕು. ನಂತರ ಇದೇ ರೀತಿ ಎಡಗಾಲನ್ನು ಮಡಿಚಿ, ಎಡಗಾಲು ಬಲಮಂಡಿಯ ಮೇಲೆ ಬರುವಂತೆ ಇಡಬೇಕು. ಎರಡೂ ಕಾಲುಗಳು ಸಾಧ್ಯವಾದಷ್ಟೂ ಶರೀರದ ಪಕ್ಕದಲ್ಲೇ ಇರಲಿ. ಬಲಗೈಯನ್ನು ಮಡಿಚಿ ಕೆಳಗಡೆಯಿಂದ ಬೆನ್ನಿನ ಮೇಲೆ ಬರುವಂತೆ ಇಡಬೇಕು. ನಂತರ ಎಡಗೈಯನ್ನೂ ಮಡಿಚಿ,  ತಲೆಯ ಹಿಂದಿನಿಂದ ಮೇಲ್ಭಾಗಕ್ಕೆ ಬರುವಂತೆ ಇಡಬೇಕು. ಆಮೇಲೆ ಎರಡೂ ಕೈಗಳನ್ನು ಪರಸ್ಪರ ತಾಕಿಸಲು ಪ್ರಯತ್ನಿಸಬೇಕು. ನಂತರ ನಿಧಾನ ತಲೆಯನ್ನು ಮೇಲಕ್ಕೆತ್ತುತ್ತಾ ಬೆನ್ನು ನೇರವಾಗಿಡುವುದರ ಜೊತೆಗೇ ಎರಡೂ ಮಂಡಿಗಳು ಆದಷ್ಟೂ ಹತ್ತಿರದಲ್ಲೇ ಇರುವತ್ತ ಹೆಚ್ಚು ಗಮನ ವಹಿಸಬೇಕು. ಇದೇ ಸ್ಥಿತಿಯಲ್ಲಿ ಸಮತೋಲನವನ್ನು ಪಡೆದುಕೊಂಡು ದೀರ್ಘಕಾಲ ಕುಳಿತುಕೊಳ್ಳಲು ಪ್ರಯತ್ನಿಸಬೇಕು. ಈ ಆಸನ ಮಾಡುವುದರಿಂದ ಮಕ್ಕಳ ದೇಹ ಇಡೀ ದಿನ ಚೈತನ್ಯಪೂರ್ಣವಾಗಿರುತ್ತದೆ.

Published On - 3:52 pm, Tue, 21 June 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ