Hairfall: ನಿಮ್ಮ ಕೂದಲಿನ ರಕ್ಷಣೆಗೆ ಈ ಎಣ್ಣೆಗಳನ್ನು ಬಳಸಿ

ನೀವು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, , ನಿಮ್ಮ ಕೂದಲಿನ ಬಗ್ಗೆ ನೀವು ತುಂಬಾ ಚಿಂತೆ ಮಾಡುತ್ತಿದ್ದರೆ, ಬೇರುಗಳಿಗೆ ಅಗತ್ಯವಿರುವ ಪೋಷಣೆಯನ್ನು ನೀಡಿ. ಕೂದಲಿನ ಬೇರುಗಳಿಗೆ ಶಕ್ತಿ ಮತ್ತು ಪೋಷಣೆಯನ್ನು ನೀಡಲು ಎಣ್ಣೆಗಳು ಹೆಚ್ಚು ಪಾತ್ರವಹಿಸುತ್ತದೆ.  ಅದಕ್ಕೆ ಇಲ್ಲಿ ತಿಳಿಸಿರುವ ಎಣ್ಣೆಗಳನ್ನು ಉಪಯೋಗಿಸುವುದು ಉತ್ತಮ. 

Hairfall: ನಿಮ್ಮ ಕೂದಲಿನ ರಕ್ಷಣೆಗೆ ಈ ಎಣ್ಣೆಗಳನ್ನು ಬಳಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 21, 2022 | 5:44 PM

ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಹೇಗೆ ರಕ್ಷಣೆ ಮಾಡುವುದು, ಕೂದಲಿನಲ್ಲಿ ಬಗ್ಗೆ ಎಚ್ಚರಿಕೆ ಕ್ರಮಗಳು ಯಾವುದೂ, ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೇಗೆ ಮಾಡುವುದು ಹೀಗೆ ಅನೇಕ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಅದಕ್ಕೆ ಯಾವೆಲ್ಲ ಪರಿಹಾರ ಇದೆ ಎಂಬುದನ್ನು ಕಂಡುಕೊಳ್ಳುವುದು,  ಗಾಳಿಯಲ್ಲಿನ ತೇವಾಂಶ ನಿಮ್ಮ ಕೂದಲಿನ ತೇವಾಂಶದ ಬೇರುಗಳನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ. ಇದರಿಂದ ಕೂದಲು ಉದುರುವಿಕೆಗೆ  ಒಳಗಾಗುತ್ತದೆ. ನಮ್ಮ ಕೂದಲಿನ ಪೋಷಣೆ  ಮತ್ತು ಜೀವನಶೈಲಿ ನಮ್ಮ ಕೂದಲಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೋ, ಹವಾಮಾನವು ಕೂಡ ಅಷ್ಟೇ ಸಮಾನ ಪಾತ್ರವನ್ನು ವಹಿಸುತ್ತದೆ. ನೀವು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, , ನಿಮ್ಮ ಕೂದಲಿನ ಬಗ್ಗೆ ನೀವು ತುಂಬಾ ಚಿಂತೆ ಮಾಡುತ್ತಿದ್ದರೆ, ಬೇರುಗಳಿಗೆ ಅಗತ್ಯವಿರುವ ಪೋಷಣೆಯನ್ನು ನೀಡಿ. ಕೂದಲಿನ ಬೇರುಗಳಿಗೆ ಶಕ್ತಿ ಮತ್ತು ಪೋಷಣೆಯನ್ನು ನೀಡಲು ಎಣ್ಣೆಗಳು ಹೆಚ್ಚು ಪಾತ್ರವಹಿಸುತ್ತದೆ.  ಅದಕ್ಕೆ ಇಲ್ಲಿ ತಿಳಿಸಿರುವ ಎಣ್ಣೆಗಳನ್ನು ಉಪಯೋಗಿಸುವುದು ಉತ್ತಮ.

ಕೆಂಪು ಈರುಳ್ಳಿ ಎಣ್ಣೆ

ಕೆಂಪು ಈರುಳ್ಳಿ ಎಣ್ಣೆಯು ನಿಮ್ಮ ಕೂದಲಿನ ಪೋಷಣೆಯ ಜೊತೆಗೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.  ಇದು ನೆತ್ತಿಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕೂದಲಿಗೆ ಬಲವನ್ನು ನೀಡುತ್ತದೆ. ಮಳೆಗಾಲದಲ್ಲಿ ಈ ಎಣ್ಣೆಯನ್ನು ಬಳಸಿದರೆ  ತಲೆಹೊಟ್ಟು ಮತ್ತು ಕೂದಲು ಉದುರಿವಿಕೆಯನ್ನು ಕಡಿಮೆ ಮಾಡುತ್ತದೆ.

ಭೃಂಗರಾಜ ಎಣ್ಣೆ

ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸಲು ಆಯುರ್ವೇದವು ಕೆಲವು ಉತ್ತಮ ಪರಿಹಾರಗಳನ್ನು ಸೂಚಿಸಿದೆ. ಅದನ್ನು ನೀವು ಸರಿಯಾದ ಕ್ರಮದಲ್ಲಿ ಪ್ರಯೋಗ ಮಾಡಿದರೆ ನಿಮ್ಮಲ್ಲಿ ಕೂದಲು ಉದುರಿವಿಕೆಯ ಸಮಸ್ಯೆಗಳು ಕಡಿಮೆ ಆಗುವುದು.  ಹಿರಿಯರು ತಿಳಿಸಿರುವಂತೆ  ಭೃಂಗರಾಜ್ ಒಂದು ಉತ್ತಮ ಔಷಧಿ. ಭೃಂಗರಾಜ್ ಎಣ್ಣೆಯು  ಉತ್ತಮ ಗುಣವಾದ ಕೂದಲನ್ನು ಬೆಳೆಯಲು ಸಹಾಯ ಮಾಡುತ್ತದೆ.  ಬೋಳು ಸಮಸ್ಯೆಯನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭೃಂಗರಾಜ್ ಕೂದಲಿನ ಕಿರು ಪದರಗಳನ್ನು ಬೆಳೆಯಲು ಸಾಹಯ ಮಾಡುತ್ತದೆ.  ಇದು ಹೊಸ ಕೂದಲು ಬೆಳೆಯಲು ಪ್ರೇರೇಪಿಸುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಮಾಡಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ಮತ್ತೊಂದು ನೈಸರ್ಗಿಕ ಎಣ್ಣೆಯಾಗಿದೆ. ತೆಂಗಿನ ಎಣ್ಣೆಯು ಕೊಬ್ಬಿನಾಮ್ಲ ಮತ್ತು ಪ್ರೋಟೀನ್‌ ನಿಂದ  ಸಮೃದ್ಧವಾಗಿದೆ, ಇದು ನೆತ್ತಿಯ ಪೋಷಣೆಯನ್ನು ಉತ್ತಮವಾಗಿ ಮಾಡುತ್ತದೆ.  ಕೊಬ್ಬರಿ ಎಣ್ಣೆಯು ಕೂದಲು ಉದುರುವಿಕೆ ಕಡಿಮೆ ಮಾಡಿ, ಕೂದಲಿನ ಶುಷ್ಕತೆಯನ್ನು ಉತ್ತಮವಾಗಿಸುತ್ತದೆ.

ಲ್ಯಾವೆಂಡರ್ ಎಣ್ಣೆ

ಮಳೆಗಾಲದಲ್ಲಿ  ಲ್ಯಾವೆಂಡರ್ ಎಣ್ಣೆಯು ಅತ್ಯುತ್ತಮ ತೈಲಗಳಲ್ಲಿ ಒಂದಾಗಿದೆ. ಇದರ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳು ಒಣ ಮತ್ತು ತುರಿಕೆ ನೆತ್ತಿಯನ್ನು ತಡೆಯುತ್ತದೆ. ಗರಿಷ್ಠ ಪ್ರಯೋಜನಗಳಿಗಾಗಿ ಲ್ಯಾವೆಂಡರ್ ಎಣ್ಣೆಯನ್ನು ಇತರ ಸಾರಭೂತ ತೈಲಗಳೊಂದಿಗೆ ಬೆರೆಸಬಹುದು.

ಸಾಸಿವೆ ಎಣ್ಣೆ

ಯಾವುದೇ ಋತುವಿನಲ್ಲಿ ಇರಲಿ, ಸಾಸಿವೆ ಎಣ್ಣೆಯ ಮಸಾಜ್ ನಿಮ್ಮ ಮನಸ್ಸನ್ನು ಶಾಂತಿಯಿಂದ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಇದು ರಕ್ತ ಪರಿಚಲನೆಯನ್ನು  ಹೆಚ್ಚಿಸುತ್ತದೆ,

Published On - 5:44 pm, Tue, 21 June 22

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ