AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮಧುಮೇಹಿಗಳಿಗೆ ಈ ಚಟ್ನಿ ತುಂಬಾ ಒಳ್ಳೆಯದು

ವಿವಿಧ ಕಾಯಿಲೆಗಳನ್ನು ತಪ್ಪಿಸಲು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿ. ಇದಲ್ಲದೇ ಆಹಾರಕ್ರಮವನ್ನು ಬದಲಾಯಿಸಿ. ಆದರೆ, ಮಧುಮೇಹವನ್ನು ನಿಯಂತ್ರಿಸಲು ನುಗ್ಗೆ ಸೊಪ್ಪು ತುಂಬಾ ಉಪಯುಕ್ತವೆಂದು ನಿಮಗೆ ತಿಳಿದಿದೆಯೇ?

Health Tips: ಮಧುಮೇಹಿಗಳಿಗೆ ಈ ಚಟ್ನಿ ತುಂಬಾ ಒಳ್ಳೆಯದು
ನುಗ್ಗೆ ಸೊಪ್ಪು ಚಟ್ನಿ
ಅಕ್ಷತಾ ವರ್ಕಾಡಿ
|

Updated on: Jun 09, 2024 | 7:23 PM

Share

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ಸುಲಿನ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದಿದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಪರಿಣಾಮವಾಗಿ, ಅನೇಕ ಜನರು ಮಧುಮೇಹದಿಂದ ಬಳಲುತ್ತಾರೆ. ಮಧುಮೇಹಿಗಳಿಗೆ ವಿವಿಧ ರೋಗಗಳ ಅಪಾಯವೂ ಕೂಡ ಹೆಚ್ಚು. ಅದರಲ್ಲೂ ಅಧಿಕ ರಕ್ತದೊತ್ತಡದ ಸಮಸ್ಯೆ, ಇದಲ್ಲದೆ, ಮೂತ್ರಪಿಂಡ ಮತ್ತು ಹೃದ್ರೋಗದ ಅಪಾಯವೂ ಹೆಚ್ಚಾಗಿರುತ್ತದೆ.

ವಿವಿಧ ಕಾಯಿಲೆಗಳನ್ನು ತಪ್ಪಿಸಲು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿ. ಇದಲ್ಲದೇ ಮಧುಮೇಹವನ್ನು ನಿಯಂತ್ರಿಸಲು ಅನೇಕರು ಆಹಾರಕ್ರಮವನ್ನು ಬದಲಾಯಿಸುತ್ತಾರೆ. ಆದರೆ, ಮಧುಮೇಹವನ್ನು ನಿಯಂತ್ರಿಸಲು ನುಗ್ಗೆ ಸೊಪ್ಪು ತುಂಬಾ ಉಪಯುಕ್ತವೆಂದು ನಿಮಗೆ ತಿಳಿದಿದೆಯೇ? ದಿನವೂ ನುಗ್ಗೆ ಸೊಪ್ಪು ಚಟ್ನಿ ತಿಂದರೆ ಸಕ್ಕರೆ ಖಾಯಿಲೆ ಕಡಿಮೆಯಾಗುತ್ತಾ ಬರುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿ, ಮೂತ್ರಪಿಂಡದ ಕಲ್ಲು ಕರಗುತ್ತವೆ!

ಪೋಷಕಾಂಶಗಳಿಂದ ಕೂಡಿದ ನುಗ್ಗೆ ಸೊಪ್ಪಿನಲ್ಲಿ ಹಲವು ಬಗೆಯ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಪರಿಣಾಮವಾಗಿ, ಮಧುಮೇಹ ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳಿಗೆ ಇದರ ಸೇವನೆ ತುಂಬಾ ಉಪಯುಕ್ತವಾಗಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್-ಸಿ, ವಿಟಮಿನ್-ಇ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಪರಿಣಾಮವಾಗಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: