ಮಧುಮೇಹ ನಿಯಂತ್ರಣ: ಸೂರ್ಯನ ಕಿರಣಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು! ಅದು ಸಾಧ್ಯವಾ?
ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ: ಮಾನವ ದೇಹದ ಮೇಲೆ ಸೂರ್ಯನ ಬೆಳಕು ಬೀಳದಿದ್ದರೆ ಜೀರ್ಣ ಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದು ಟೈಪ್ 2 ಡಯಾಬಿಟಿಸ್ ಗೆ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಆದ್ದರಿಂದ ನಾವು ಸನ್ ಲೈಟ್‌ನಲ್ಲಿರಬೇಕೆಂದು ತಜ್ಞರು ಹೇಳುತ್ತಾರೆ.
ಪ್ರಸ್ತುತ ಎಲ್ಲರೂ ಹೆಚ್ಚಾಗಿ ತೊಂದರೆ ಪಡುವ ಸಮಸ್ಯೆಗಳಲ್ಲಿ ಡಯಾಬಿಟಿಸ್ ಕೂಡ ಒಂದು. ವಿಶೇಷವಾಗಿ ಟೈಪ್ 2 ಡಯಾಬಿಟಿಸ್ ತೊಂದರೆಗಳು ಎದುರಾಗಿವೆ. ಬದಲಾಗುವ ಲೈಫ್ ಸ್ಟೈಲ್, ಆಹಾರ ಕ್ರಮಗಳಲ್ಲಿ ಬದಲಾವಣೆಗಳು ಬರುವುದರಿಂದ ಡಯಾಬಿಟಿಸ್ ಬರುತ್ತದೆ. ವಿಶೇಷವಾಗಿ ಆಹಾರದ ವಿಷಯದಲ್ಲಿ, ನಿದ್ರೆಯ ವಿಷಯದಲ್ಲಿ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದಾಗ ಡಯಾಬಿಟಿಸ್ ಕಾಡುತ್ತದೆ. ಮಧು ಮೇಹವನ್ನು ಕಂಟ್ರೋಲ್ ಮಾಡುವ ಮಾರ್ಗಗಳು ಬಹಳಷ್ಟು ಇವೆ. ತಾಜಾ ಆಗಿ ಹೇಳಬೇಕು ಅಂದರೆ ಸೂರ್ಯನ ಕಿರಣಗಳಲ್ಲಿ ಇರುವುದರಿಂದ ಕೂಡ ಡಯಾಬಿಟಿಸ್ ಅನ್ನು ನಿಯಂತ್ರಣಕ್ಕೆ ತರಬಹುದು (vitamin D inadequacy). ಈ ಬಗ್ಗೆ ಇತ್ತೀಚೆಗೆ ಹಲವಾರು ಅಧ್ಯಯನಗಳು ನಡೆದಿವೆ. ಆ ಬಗ್ಗೆ ತಿಳಿದುಕೊಳ್ಳೋಣ.
ಜೀರ್ಣ ಕ್ರಿಯೆ ಸುಧಾರಿಸುತ್ತದೆ: ಸನ್ ಲೈಟ್‌ಗೆ (ಸೂರ್ಯನ ಕಿರಣಗಳಿಗೆ) ನಮ್ಮ ದೇಹವನ್ನು ಒಗ್ಗಿಕೊಳ್ಳುವುದರಿಂದ ಜೀರ್ಣ ಕ್ರಿಯೆ ವೃದ್ಧಿಸುತ್ತದೆ. ಇದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ಅಧ್ಯಯನ ಹೇಳುತ್ತಿದೆ. ಜೀರ್ಣ ಕ್ರಿಯೆ ವೃದ್ಧಿಸುವುದರಿಂದ ಅಂದರೆ ತಿನ್ನುವ ಆಹಾರ ಜೀರ್ಣವಾಗುವುದರಿಂದ ರಕ್ತದಲ್ಲಿ ಶುಗರ್ ಲೆವೆಲ್ಸ್ ತನ್ನಷ್ಟಕ್ಕೆ ತಾನೇ ನಿಯಂತ್ರಣಕ್ಕೆ ಬರುತ್ತದೆ.
ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ: ಮಾನವ ದೇಹದ ಮೇಲೆ ಸೂರ್ಯನ ಬೆಳಕು ಬೀಳದಿದ್ದರೆ ಜೀರ್ಣ ಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದು ಟೈಪ್ 2 ಡಯಾಬಿಟಿಸ್ ಗೆ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಆದ್ದರಿಂದ ನಾವು ಸನ್ ಲೈಟ್‌ನಲ್ಲಿರಬೇಕೆಂದು ತಜ್ಞರು ಹೇಳುತ್ತಾರೆ. ಸನ್ ಲೈಟ್‌ಗೆ ಎಕ್ಸ್‌ಪೋಜ್ ಆಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸಾಧ್ಯ.
ಸ್ಥೂಲಕಾಯ: ದೇಹದ ತೂಕ ಹೆಚ್ಚಾಗುವಂತಹ ಸಮಸ್ಯೆಗಳನ್ನು ಕೂಡ ಸನ್ ಲೈಟ್ ನಿಯಂತ್ರಿಸಬಲ್ಲದು ಎಂದು ತಜ್ಞರು ಹೇಳುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ: ನೈಸರ್ಗಿಕ ಬೆಳಕಿನಲ್ಲಿ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಸೀಜನಲ್ ರೋಗಗಳೊಂದಿಗೆ ಹೋರಾಡುವ ಶಕ್ತಿಯೂ ಸಹ ಪ್ರಾಪ್ತಿಯಾಗುತ್ತದೆ. ದೇಹದ ಮೇಲೆ ತುರಿಕೆ ಏನಾದರೂ ಇದ್ದರೆ ಅದನ್ನು ನಾಶಪಡಿಸುತ್ತದೆ.
Also Read: ಮಧುಮೇಹಿಗಳಿಗೆ ಇವೆ ಅಸಂಖ್ಯಾತ, ನಾನಾ ಉಚಿತ ಸಲಹೆಗಳು -ಯಾವುದು ಪಾಲಿಸಬೇಕು, ಯಾವುದು ಬಿಡಬೇಕು?
ಹೀಗಿರುವಾಗ ನೈಸರ್ಗಿಕ ಬೆಳಕು ದೇಹಕ್ಕೆ ತಗಲುವುದರಿಂದ ಅನೇಕ ಸಮಸ್ಯೆಗಳಿಗೆ ಚೆಕ್ ಹಾಕಬಹುದು. ತುಂಬಾ ಜನರು ಸನ್ ಲೈಟ್ ಇರುವಾಗ ಮನೆಯಲ್ಲಿಯೇ ಆರಾಮಾಗಿ ಇರಲು ಬಯಸುತ್ತಾರೆ. ಇದರಿಂದ ದೈಹಿಕ ಸಮಸ್ಯೆಗಳು ಹೆಚ್ಚಾಗುತ್ತವೆ ಅಷ್ಟೆ ಎಂಬುದನ್ನು ಮನಗಾಣಬೇಕು. ಕೃತಕ ಬೆಳಕಿನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ರೋಗಗಳ ವಿರುದ್ಧ ಹೋರಾಡುವ ಶಕ್ತಿ ಲಭ್ಯವಾಗುವುದಿಲ್ಲ ಎಂದು ಇತ್ತೀಚೆಗೆ ಪ್ರಕಟವಾದ ಅಧ್ಯಯನ ಹೇಳುತ್ತಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ಸೂಚನೆ: ಇದು ತಜ್ಞರಿಂದ ಸಂಗ್ರಹಿಸಿದ ಮಾಹಿತಿ. ಇವುಗಳನ್ನು ಪಾಲಿಸುವ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳಿತು)