ಸಿರಿಧಾನ್ಯ ಬಳಸಿದರೆ ಮೆಡಿಸಿನ್ಗಳ ಅಗತ್ಯವೇ ಇರುವುದಿಲ್ಲ; ಮಿಲೆಟ್ ಮಹಿಮೆ ಬಿಚ್ಚಿಟ್ಟ ಖಾದರ್ ವಲಿ
ವೈದ್ಯಕೀಯ ಜಗತ್ತು ಔಷಧದ ಪೂರೈಕೆಗಾಗಿ ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಿರಿಧಾನ್ಯಗಳನ್ನು ತಿನ್ನಲು ಆರಂಭಿಸಿದರೆ ಔಷಧದ ಅಗತ್ಯವೇ ಇರುವುದಿಲ್ಲ ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಹೆಸರಾಗಿರುವ ಖಾದರ್ ವಲಿ ಹೇಳಿದ್ದಾರೆ.
ಮಿಲೆಟ್ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇಂದ್ರ ಸರ್ಕಾರ ಕೂಡ ಮಿಲೆಟ್ಗೆ ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಜಿ20 ಶೃಂಗಸಭೆಯಲ್ಲೂ ವಿವಿಧ ದೇಶಗಳ ನಾಯಕರಿಗೆ ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಗಳ ರುಚ ತೋರಿಸಲಾಗಿತ್ತು. ಅಲ್ಲದೆ, ಮಿಲೆಟ್ ಉತ್ಪನ್ನಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಭಾರತದ ಮಿಲೆಟ್ ಮ್ಯಾನ್ ಎಂದೇ ಹೆಸರಾಗಿರುವ ಖಾದರ್ ವಲಿ ಅವರು ಮಿಲೆಟ್ನ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. ಸಿರಿಧಾನ್ಯವನ್ನು ಆಹಾರದಲ್ಲಿ ಸೇರಿಸಿಕೊಂಡರೆ ಯಾವ ವೈದ್ಯರ ಅಥವಾ ಔಷಧದ ಅವಶ್ಯಕತೆಯೂ ಇರುವುದಿಲ್ಲ ಎಂದಿದ್ದಾರೆ.
ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಸಿರಿಧಾನ್ಯಗಳ ಪ್ರಯೋಜನಗಳ ಬಗ್ಗೆ ಖಾದರ್ ವಲಿ ಮಾಹಿತಿ ನೀಡಿದ್ದಾರೆ. ಆಹಾರ ಸರಿಯಾಗಿದ್ದರೆ ಔಷಧಿಯ ಅವಶ್ಯಕತೆ ಇರುವುದಿಲ್ಲ. ಆಹಾರವೇ ಸರಿಯಿಲ್ಲದಿದ್ದರೆ ಯಾವ ಔಷಧಿಯೂ ಕೆಲಸ ಮಾಡುವುದಿಲ್ಲ. ಆಹಾರದ ಕಾರ್ಪೊರೇಟೀಕರಣವೇ ಮಿಲೆಟ್ ಕಣ್ಮರೆಯಾಗಲು ಕಾರಣ. ಸಿರಿಧಾನ್ಯಗಳನ್ನು ಮತ್ತೆ ಜನರ ಬಳಕೆಗೆ ತರುವುದು ನನ್ನ ಉದ್ದೇಶ ಎಂದು ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರಿ ಭೋಜನ; ಸಿರಿಧಾನ್ಯವೇ ಪ್ರಧಾನ
1997ರಲ್ಲಿ ಭಾರತಕ್ಕೆ ಮರಳಿದ ಖಾದರ್ ವಲಿ ಅವರು ಅಕ್ಕಿ ಮತ್ತು ಗೋಧಿಯ ಬದಲಿಗೆ ಮಿಲೆಟ್ ಸೇವನೆಯನ್ನು ಪ್ರತಿಪಾದಿಸಿದ್ದಾರೆ. ವೈದ್ಯಕೀಯ ಜಗತ್ತು ಔಷಧದ ಪೂರೈಕೆಗಾಗಿ ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಿರಿಧಾನ್ಯಗಳನ್ನು ತಿನ್ನಲು ಆರಂಭಿಸಿದರೆ ಔಷಧದ ಅಗತ್ಯವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಖಾದರ್ ವಲಿ ಅವರು ಸಿರಿಧಾನ್ಯದಲ್ಲಿ ಫೈಟಿಕ್ ಆಸಿಡ್ ಅಂಶದ ಬಗ್ಗೆ ಮಾತನಾಡಿ, ಇದು ಆಂಟಿನ್ಯೂಟ್ರಿಯೆಂಟ್ ಆಗಿದೆ. ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಇದರಲ್ಲಿ ಫೈಟಿಕ್ ಆಮ್ಲವು 20ಪಟ್ಟು ಕಡಿಮೆಯಿದೆ. ಸಿರಿಧಾನ್ಯವನ್ನು ನೀರಿನಲ್ಲಿ ನೆನೆಸುವುದರಿಂದ ಫೈಬರ್ ಅನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ