ನಿತ್ಯ ನೀವು ಕುಡಿಯುವ 3 ಲೋಟ ಕಾಫಿ, ನಿಮ್ಮ ಆಯುಷ್ಯವನ್ನು ಇಷ್ಟು ವರ್ಷ ವೃದ್ಧಿಸುತ್ತಂತೆ!
ಆಹಾ.. ಕಾಫಿ ಘಮ ಮೂಗಿಗೆ ಬಡಿಯಿತೆಂದರೆ ಕುಡಿಯದೇ ಇರಲಾದೀತೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಇಡೀ ದಿನ ಕಾಫಿ ಕುಡಿಯುವುದು ಆರೋಗ್ಯಕ್ಕೆ ಪೆಟ್ಟು ಕೊಟ್ಟರೂ ನಿಯಮಿತವಾಗಿ ದಿನಕ್ಕೆ ಮೂರು ಲೋಟ ಕಾಫಿ ಕುಡಿಯುವುದರಿಂದ ನಿಮ್ಮ ಆಯುಷ್ಯ ವೃದ್ಧಿಯಾಗುತ್ತೆ ಎಂಬುದನ್ನು ಸಂಶೋಧನೆಯೊಂದು ಹೇಳಿದೆ.
ಆಹಾ.. ಕಾಫಿ ಘಮ ಮೂಗಿಗೆ ಬಡಿಯಿತೆಂದರೆ ಕುಡಿಯದೇ ಇರಲಾದೀತೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಇಡೀ ದಿನ ಕಾಫಿ ಕುಡಿಯುವುದು ಆರೋಗ್ಯಕ್ಕೆ ಪೆಟ್ಟು ಕೊಟ್ಟರೂ ನಿಯಮಿತವಾಗಿ ದಿನಕ್ಕೆ ಮೂರು ಲೋಟ ಕಾಫಿ ಕುಡಿಯುವುದರಿಂದ ನಿಮ್ಮ ಆಯುಷ್ಯ ವೃದ್ಧಿಯಾಗುತ್ತೆ ಎಂಬುದನ್ನು ಸಂಶೋಧನೆಯೊಂದು ಹೇಳಿದೆ.
ನಿತ್ಯ ಸಾಮಾನ್ಯವಾಗಿ ಬೆಳಗ್ಗೆ ಎದ್ದಾಕ್ಷಣ ಎಲ್ಲರಿಗೂ ಕಾಫಿ ಬೇಕು, ಉಳಿದ ಸಮಯದಲ್ಲಿ ಏನು ಇಲ್ಲದಿದ್ದರೂ ತೊಂದರೆಯಿಲ್ಲ ಎನ್ನುವ ಮನಸ್ಥಿತಿ ಇರುತ್ತದೆ. ಇನ್ನೂ ಕೆಲವರು ಗಂಟೆ ಗಂಟೆಗೊಮ್ಮೆ ಕಾಫಿ ಹೀರುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಆದರೆ ದಿನಕ್ಕೆ ಮೂರೇ ಮೂರು ಲೋಟ ಕಾಫಿ ಕುಡಿಯುವುದರಿಂದ ನಿಮ್ಮ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ.
ಪೋರ್ಚುಗಲ್‌ನ ಕೊಯಿಂಬ್ರಾ ವಿಶ್ವವಿದ್ಯಾಲಯದ ತಂಡದ ನೇತೃತ್ವದ ಇತ್ತೀಚಿನ ಅಧ್ಯಯನದ ಪ್ರಕಾರ, ಜೀವಿತಾವಧಿಯನ್ನು ಸುಧಾರಿಸಲು ಕಾಫಿ ಪರಿಪೂರ್ಣ ಪಾನೀಯವಾಗಿದೆ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದಾದ್ಯಂತ ಭಾಗವಹಿಸುವವರನ್ನು ಒಳಗೊಂಡ 85 ಅಧ್ಯಯನದಿಂದ ವರದಿಗಳನ್ನು ಸಿದ್ಧಪಡಿಸಲಾಗಿದೆ.
ಒಂದು ದಿನದಲ್ಲಿ ಕನಿಷ್ಠ ಮೂರು ಕಪ್ ಕಾಫಿ ಕುಡಿಯುವವರು ತಮ್ಮ ಜೀವತಾವಧಿಗೆ ಹೆಚ್ಚುವರಿಯಾಗಿ 1.84 ವರ್ಷಗಳನ್ನು ಸೇರಿಸುವ ಅವಕಾಶ ಹೊಂದಿರುತ್ತಾರೆ. ನಿಯಮಿತ ಕಾಫಿ ಸೇವನೆಯು ಸ್ನಾಯು, ಹೃದಯರಕ್ತನಾಳ, ಮಾನಸಿಕ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಮತ್ತಷ್ಟು ಓದಿ: ದಿನಕ್ಕೊಂದು ಸಪೋಟ ತಿಂದರೆ ಸಾಕು.. ರೋಗಗಳು ಮಾಯ!
ಪಾರ್ಶ್ವವಾಯು, ಕೆಲವು ಕ್ಯಾನ್ಸರ್‌ಗಳು, ಮಧುಮೇಹ, ಬುದ್ಧಿಮಾಂದ್ಯತೆ, ಪ್ರಮುಖ ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕಾಫಿ ಮತ್ತು ಕೆಫೀನ್ ಆರೋಗ್ಯಕರ ಜೀವಿತಾವಧಿಗೆ ಏಕೈಕ ಕಾರಣವಲ್ಲ, ಅವುಗಳ ಸಕಾರಾತ್ಮಕ ಆರೋಗ್ಯ ಪರಿಣಾಮಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಮಾರ್ಗವನ್ನು ಹೊಂದಿವೆ.
ಸೂಚನೆ: ಈ ಲೇಖನವನ್ನು ಕೇವಲ ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ಬರೆಯಲಾಗಿದೆ. ನಿಮ್ಮ ವೈದ್ಯಕೀಯ ಸ್ಥಿತಿಯ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ವೈದ್ಯರ ಸಲಹೆಯನ್ನು ಪಡೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ