AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಂಡೀಸ್ ಕೂಡ ಕ್ಯಾನ್ಸರ್​ನ ಲಕ್ಷಣವಿರಬಹುದು; ತಜ್ಞರು ಹೇಳೋದೇನು?

ಕೆಲವೊಮ್ಮೆ ಈ ಜಾಂಡೀಸ್ ಕ್ಯಾನ್ಸರ್​ನಂತಹ ಹೆಚ್ಚು ಅಪಾಯಕಾರಿ ಕಾಯಿಲೆಯ ಸೂಚಕವೂ ಆಗಿರುವ ಸಾಧ್ಯತೆಯಿದೆ. ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಲಿವರ್, ಪಿತ್ತರಸ ನಾಳ ಇತರೆ ಅಂಗಗಳ ಕ್ಯಾನ್ಸರ್ ಕಾಮಾಲೆಗೆ ಕಾರಣವಾಗಬಹುದು.

ಜಾಂಡೀಸ್ ಕೂಡ ಕ್ಯಾನ್ಸರ್​ನ ಲಕ್ಷಣವಿರಬಹುದು; ತಜ್ಞರು ಹೇಳೋದೇನು?
ಕಾಮಾಲೆImage Credit source: iStock
ಸುಷ್ಮಾ ಚಕ್ರೆ
|

Updated on: Jan 13, 2024 | 4:32 PM

Share

ಕಾಮಾಲೆ ಎಂಬುದು ಎಲ್ಲರಿಗೂ ತಿಳಿದಿರುವ ಕಾಯಿಲೆ. ಅದರ ಪ್ರಮುಖ ಲಕ್ಷಣಗಳೆಂದರೆ, ಕಣ್ಣುಗಳು ಹಳದಿಯಾಗುವುದು ಮತ್ತು ಮೂತ್ರವು ತುಂಬಾ ಗಾಢವಾಗುವುದು. ಇದು ಸಾಮಾನ್ಯವಾಗಿ ಹೆಪಟೈಟಿಸ್ ಎ ಅಥವಾ ಇತರ ಕಾಯಿಲೆಗಳಿಂದ ಉಂಟಾಗುತ್ತದೆ. ಕಾಮಾಲೆ ಜೀವಕ್ಕೆ ಅಪಾಯಕಾರಿಯೇನಲ್ಲ. ಈ ರೋಗವನ್ನು ಸುಲಭವಾಗಿ ನಿರ್ವಹಿಸಬಹುದು. ಆದರೆ, ಕೆಲವೊಮ್ಮೆ ಜಾಂಡೀಸ್ ಕ್ಯಾನ್ಸರ್​ನ ಲಕ್ಷಣ ಕೂಡ ಆಗಿರಬಹುದು ಎಂಬ ಆತಂಕಕಾರಿ ಸಂಗತಿಯನ್ನು ವೈದ್ಯರು ತಿಳಿಸಿದ್ದಾರೆ.

ಪಿತ್ತರಸ ನಾಳದಲ್ಲಿನ ಕಲ್ಲುಗಳು ಸಹ ಕಾಮಾಲೆಗೆ ಕಾರಣವಾಗಬಹುದು. ಆದರೆ ಕೆಲವೊಮ್ಮೆ ಈ ಜಾಂಡೀಸ್ ಕ್ಯಾನ್ಸರ್​ನಂತಹ ಹೆಚ್ಚು ಅಪಾಯಕಾರಿ ಕಾಯಿಲೆಯ ಸೂಚಕವೂ ಆಗಿರುವ ಸಾಧ್ಯತೆಯಿದೆ. ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಲಿವರ್, ಪಿತ್ತರಸ ನಾಳ ಇತರೆ ಅಂಗಗಳ ಕ್ಯಾನ್ಸರ್ ಕಾಮಾಲೆಗೆ ಕಾರಣವಾಗಬಹುದು.

ಇದನ್ನೂ ಓದಿ: ಸ್ತನ ಕ್ಯಾನ್ಸರ್ ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳಿವು

ಕಾಮಾಲೆ ಇರುವ ಕೆಲವೇ ರೋಗಿಗಳಿಗೆ ಮಾತ್ರ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ತೂಕ ಇಳಿಸುವುದು, ಹಸಿವಿನ ಕೊರತೆ ಮತ್ತು ಹೊಟ್ಟೆ ನೋವಿನಂತಹ ಲಕ್ಷಣಗಳು ಕೂಡ ಕಂಡುಬರಬಹುದು. ಇದಕ್ಕೆ ತ್ವರಿತ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆಯನ್ನು ನೀಡಿದರೆ ಅಂತಹ ರೋಗಿಗಳು ಗುಣಮುಖರಾಗುವ ಸಾಧ್ಯತೆಗಳಿರುತ್ತವೆ.

ಕಾಮಾಲೆಗೆ ಕಾರಣವಾಗುವ ಸಮಸ್ಯೆಗಳು ಹೆಪಟೈಟಿಸ್, ಸಿರೋಸಿಸ್, ಅಥವಾ ಲಿವರ್ ಕ್ಯಾನ್ಸರ್‌ನಂತಹ ಪಿತ್ತಜನಕಾಂಗದ ಕಾಯಿಲೆಗಳನ್ನು ಒಳಗೊಂಡಿವೆ. ಕೆಲವು ಕ್ಯಾನ್ಸರ್ ಲಿವರ್, ಮೇದೋಜ್ಜೀರಕ ಗ್ರಂಥಿ, ಅಥವಾ ಪಿತ್ತಕೋಶ ಸೇರಿದಂತೆ ಇತರೆ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಪಿತ್ತಗಲ್ಲು ಅಥವಾ ಹೆಮೋಲಿಟಿಕ್ ರಕ್ತಹೀನತೆಯಂತಹ ಕ್ಯಾನ್ಸರ್ ಅಲ್ಲದ ಸಮಸ್ಯೆಗಳಿಂದಲೂ ಕಾಮಾಲೆ ಉಂಟಾಗುತ್ತದೆ.

ಇದನ್ನೂ ಓದಿ: ನಿಮ್ಮ ಕಿಡ್ನಿಯ ಆರೋಗ್ಯ ಹೆಚ್ಚಿಸುವ ಅದ್ಭುತ ಗಿಡಮೂಲಿಕೆಗಳಿವು

ಯಾರಾದರೂ ಕಾಮಾಲೆ ರೋಗಕ್ಕೆ ಒಳಗಾಗಿದ್ದರೆ ಅದರ ಮೂಲ ಕಾರಣವನ್ನು ನಿರ್ಧರಿಸಲು ವೈದ್ಯಕೀಯ ನೆರವು ಪಡೆಯುವುದು ಮುಖ್ಯವಾಗಿದೆ. ಕೆಲವು ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಆರಂಭಿಕ ಪತ್ತೆ ಬಹಳ ನಿರ್ಣಾಯಕವಾಗಿದೆ.

ಹಾಗೆಂದು, ಕಾಮಾಲೆ ಕಾಣಿಸಿಕೊಂಡರೆ ಭಯಪಡುವ ಅಗತ್ಯವಿಲ್ಲ, ಏಕೆಂದರೆ ಇದು ಸಾಮಾನ್ಯವಾಗಿ ಸಣ್ಣ ಸಮಸ್ಯೆಯಾಗಿದೆ. ಆದರೆ, 1 ವಾರದೊಳಗೆ ಕಾಮಾಲೆ ಕಡಿಮೆಯಾಗದಿದ್ದರೆ ಮತ್ತು ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ