ಸ್ತನ ಕ್ಯಾನ್ಸರ್ ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳಿವು

ಕುಳಿತುಕೊಂಡು ಕೆಲಸ ಮಾಡುವುದರಿಂದ, ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ, ಜಂಕ್ ಫುಡ್‌ ಸೇವನೆ ಹೆಚ್ಚಾಗಿರುವುದರಿಂದ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುತ್ತಿವೆ. ಶಿಸ್ತಿನ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ, ದೈಹಿಕ ಚಟುವಟಿಕೆಗೆ ಆದ್ಯತೆ ನೀಡುವ ಮೂಲಕ ಸ್ತನ ಕ್ಯಾನ್ಸರ್​ ಅನ್ನು ನಿಯಂತ್ರಿಸಬಹುದು.

ಸ್ತನ ಕ್ಯಾನ್ಸರ್ ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳಿವು
ಸ್ತನ ಕ್ಯಾನ್ಸರ್
Follow us
ಸುಷ್ಮಾ ಚಕ್ರೆ
|

Updated on: Jan 12, 2024 | 2:43 PM

ಇತ್ತೀಚೆಗೆ ಸ್ತನ ಕ್ಯಾನ್ಸರ್ ಬಹಳ ಸಾಮಾನ್ಯವಾಗಿದೆ. ನಮ್ಮ ಆಹಾರ ಪದ್ಧತಿ, ಜೀವನಶೈಲಿ ಕೂಡ ಕ್ಯಾನ್ಸರ್ ಹೆಚ್ಚಾಗಲು ಕಾರಣವಾಗುತ್ತಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತದಂತಹ ದೇಶಗಳಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಉಲ್ಬಣಕ್ಕೆ ಪಾಶ್ಚಿಮಾತ್ಯ ಜೀವನಶೈಲಿ ಮುಖ್ಯ ಕಾರಣವಾಗಿದೆ. ಹಿಂದೆ ವಯಸ್ಸು ಮತ್ತು ಲಿಂಗಕ್ಕೆ ಸೀಮಿತವಾಗಿದ್ದ ಅಪಾಯಕಾರಿ ಅಂಶಗಳು ಈಗ ಆಲ್ಕೊಹಾಲ್ ಸೇವನೆ, ಧೂಮಪಾನ, ಸ್ಥೂಲಕಾಯತೆ ಮತ್ತು ಅಧಿಕ ಒತ್ತಡದ ಮಟ್ಟಕ್ಕೂ ವಿಸ್ತರಿಸಿದೆ. ಕುಳಿತುಕೊಂಡು ಕೆಲಸ ಮಾಡುವುದರಿಂದ, ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ, ಜಂಕ್ ಫುಡ್‌ ಸೇವನೆ ಹೆಚ್ಚಾಗಿರುವುದರಿಂದ ಹಾರ್ಮೋನುಗಳಲ್ಲಿ ಬದಲಾವಣೆಗಳು ಉಂಟಾಗುತ್ತಿವೆ. ಆರಂಭಿಕ ಋತುಬಂಧ ಮತ್ತು ತಡವಾದ ಋತುಬಂಧವು ಸ್ತನ ಕ್ಯಾನ್ಸರ್ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ.

ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ದೈಹಿಕ ಚಟುವಟಿಕೆಗೆ ಆದ್ಯತೆ ನೀಡುವ ಮೂಲಕ ಸ್ತನ ಕ್ಯಾನ್ಸರ್​ ಅನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದು. ಆಧುನೀಕರಿಸಿದ ಜೀವನಶೈಲಿಯನ್ನು ಕಡಿಮೆ ಮಾಡಬೇಕು.

ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!

ಸ್ತನ ಕ್ಯಾನ್ಸರ್​ನ ರೋಗಲಕ್ಷಣಗಳು:

– ಸ್ತನದಲ್ಲಿ ಗಡ್ಡೆ ಉಂಟಾಗುವುದು.

– ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆ.

–  ಎದೆಯ ಮೇಲಿನ ಚರ್ಮದ ಬದಲಾವಣೆಗಳು.

–- ಜೋತುಬಿದ್ದ ಮೊಲೆತೊಟ್ಟುಗಳು.

– ಸ್ತನದ ಚರ್ಮದ ಸುತ್ತಲಿನ ಚರ್ಮದ ಸಿಪ್ಪೆ ಸುಲಿಯುವಿಕೆ.

–  ಕಿತ್ತಳೆಯ ಸಿಪ್ಪೆಯಂತೆ ನಿಮ್ಮ ಎದೆಯ ಮೇಲೆ ಆರೆಂಜ್ ಬಣ್ಣ ಮೂಡುವುದು.

ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಜೀವನಶೈಲಿ ಆಯ್ಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರ ಜೊತೆಗೆ ತಡವಾಗಿ ಮದುವೆಯಾಗುವುದು, ಮಕ್ಕಳ ಕೊರತೆ ಮತ್ತು ಸ್ತನ್ಯಪಾನದ ಕೊರತೆ ಕೂಡ ಈ ಅಪಾಯಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಜಡ ಜೀವನಶೈಲಿ ಮತ್ತು ಸ್ಥೂಲಕಾಯತೆ ಅದರಲ್ಲೂ ವಿಶೇಷವಾಗಿ ಋತುಬಂಧದ ನಂತರ ಸ್ತನ ಕ್ಯಾನ್ಸರ್ ಅನ್ನು ಉಂಟುಮಾಡುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ 6,85,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 23 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್​​ ಪತ್ತೆಯಾಗಿದೆ. ಹಾಗೇ, ಈ ಕ್ಯಾನ್ಸರ್​ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಸ್ತನ ಕ್ಯಾನ್ಸರ್​ ನಿಯಂತ್ರಿಸಲು ಸಹಾಯ ಮಾಡುವ ಆಹಾರಗಳಿವು

ಕ್ಯಾನ್ಸರ್ ನಿಯಂತ್ರಿಸಲು ನಿಯಮಿತ ವ್ಯಾಯಾಮ ಮತ್ತು ಜಂಕ್ ಫುಡ್ ರಹಿತ ಸಮತೋಲಿತ ಆಹಾರ ಮತ್ತು ಹೆಚ್ಚಿನ ಕ್ಯಾಲೋರಿ, ಕೊಬ್ಬಿನ ಆಹಾರಗಳು ನಿರ್ಣಾಯಕವಾಗಿವೆ. ದಿನಕ್ಕೆ ಕೇವಲ 20 ನಿಮಿಷಗಳ ವ್ಯಾಯಾಮ ಅಥವಾ ವಾರದಲ್ಲಿ 5 ದಿನಗಳು ವ್ಯಾಯಾಮ ಮಾಡುವುದರಿಂದಲೂ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.

ನಾವು ಆರೋಗ್ಯಕರ ಜೀವನಶೈಲಿ, ಒತ್ತಡಮುಕ್ತ ಜೀವನ, ಆರೋಗ್ಯಕರ ಆಹಾರ, ದೈಹಿಕ ವ್ಯಾಯಾಮ, ಏರೋಬಿಕ್ಸ್ ರೀತಿಯ ಚಟುವಟಿಕೆಗಳನ್ನು ಹೆಚ್ಚೆಚ್ಚು ಮಾಡಿದರೆ ಸ್ತನ ಕ್ಯಾನ್ಸರ್​ ನಿಯಂತ್ರಿಸಲು ಸಾಧ್ಯವಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಬೇರೆ ದೇಶಗಳಿಗಿಂತ ಹೆಚ್ಚಾಗುತ್ತಿದೆ. ಹೀಗಾಗಿ, ವೈದ್ಯಕೀಯ ಕ್ಷೇತ್ರದ ಅನೇಕ ತಜ್ಞರು ಸ್ತನ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಲು ಏಷ್ಯನ್ ಮತ್ತು ಭಾರತೀಯ ಜನರ ಜೀವನಶೈಲಿಯನ್ನು ಗಮನಿಸುತ್ತಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ