AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಿನ ಉಪಾಹಾರಕ್ಕೆ ಅನ್ನ: ತಿಂಡಿಗೆ ಅನ್ನ ತಿನ್ನಬಹುದೇ.. ತಿಂದರೆ ಏನಾಗುತ್ತದೆ?

Rice for Breakfast: ಯಾವುದೇ ಅನುಮಾನವಿಲ್ಲದೆ ಅನ್ನವನ್ನು ಉಪಹಾರವಾಗಿ ತೆಗೆದುಕೊಳ್ಳಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲ. ಅವರು ಬೆಳಿಗ್ಗೆ ಸಕ್ರಿಯವಾಗಿರುವುದರಿಂದ, ಅವರಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಅನ್ನ ತಿನ್ನುವವರು ರಾತ್ರಿ ಊಟ ಮಾಡುವುದನ್ನು ತಪ್ಪಿಸಬೇಕು.

ಬೆಳಗಿನ ಉಪಾಹಾರಕ್ಕೆ ಅನ್ನ: ತಿಂಡಿಗೆ ಅನ್ನ ತಿನ್ನಬಹುದೇ.. ತಿಂದರೆ ಏನಾಗುತ್ತದೆ?
ಬೆಳಗಿನ ಉಪಾಹಾರಕ್ಕೆ ಅನ್ನ: ತಿಂಡಿಗೆ ಅನ್ನ ತಿನ್ನಬಹುದೇ.. ತಿಂದರೆ ಏನಾಗುತ್ತದೆ?
ಸಾಧು ಶ್ರೀನಾಥ್​
|

Updated on:Jan 13, 2024 | 1:02 PM

Share

ಬೆಳಗಿನ ತಿಂಡಿಗೆ ಅಲ್ಪಾಹಾರವಾಗಿ ಅನ್ನ ತಿನ್ನಬಹುದೇ? ಅದನ್ನು ತಿಂದರೆ ಏನಾಗುತ್ತದೆ? ಅನೇಕರಿಗೆ ಈ ಸಂದೇಹವಿದೆ. ಟಿಫಿನ್‌ ತಿನ್ನುವ ವಾಡಿಕೆ ಇತ್ತೀಚಿನದು. ಆದರೆ ಪೂರ್ವ ಕಾಲದಲ್ಲಿ ಪುರಾತನವಾಗಿ ಬೆಳಿಗ್ಗೆ ಅನ್ನವನ್ನೇ ತಿನ್ನುತ್ತಿದ್ದರು. ಈಗಲೂ ಮನೆಯಲ್ಲಿ ಅನೇಕ ಹಿರಿಯರು ಕೂಡ ಬೆಳಗ್ಗೆ ಅನ್ನ ತಿನ್ನುವುದನ್ನು ಗಮನಿಸಬಹುದು. ಗಂಜಿ ಅನ್ನ, ಮಜ್ಜಿಗೆ ಅನ್ನ ಹೀಗೆ ಅಲ್ಪಾಹಾರವಾಗಿ ತಿನ್ನುತ್ತಾರೆ. ಬೆಳಗ್ಗೆ ತಿಂಡಿಯಾಗಿ ಅನ್ನ ತಿನ್ನುವುದು ತುಂಬಾ ಒಳ್ಳೆಯದು. ಏಕೆಂದರೆ ಅದು ಶಕ್ತಿಯುತವಾಗಿದೆ. ಅಲ್ಲದೇ ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ. ಬೀನ್ಸ್, ಕ್ಯಾರೆಟ್, ಪಾಲಕ್ ಮತ್ತು ಬಟಾಣಿಗಳಂತಹ ತರಕಾರಿಗಳನ್ನು ಸೇರಿಸಿ ಅನ್ನ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

ಮಧುಮೇಹದ ಹೆಚ್ಚಿದ ಅಪಾಯ: ಆದರೆ ಬೆಳಗ್ಗೆ ಅನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮಧು ಮೇಹ ಹೆಚ್ಚಳಕ್ಕೆ ಅವಕಾಶವಿದೆ. ಇದು ನೀವು ಆಯ್ಕೆ ಮಾಡುವ ಅಕ್ಕಿಯನ್ನು ಅವಲಂಬಿಸಿರುತ್ತದೆ. ಅಲ್ಲದೆ ವಿನೆಗರ್ ಅಥವಾ ತೆಂಗಿನ ಎಣ್ಣೆಯಿಂದ ಮಾಡಿದ ಅನ್ನವನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆಯಿದೆ. ಹಾಗಾಗಿ ಮುಂಜಾನೆ ಅನ್ನ ತಿನ್ನಬೇಕೆಂದಿದ್ದರೆ ಹಿತಮಿತವಾಗಿ ತಿನ್ನುವುದು ಒಳ್ಳೆಯದು.

ತೂಕ ಹೆಚ್ಚಿಸಿಕೊಳ್ಳುವುದು: ಹಾಗೆಯೇ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕೆ ಅನ್ನವನ್ನು ತೆಗೆದುಕೊಳ್ಳಬಾರದು. ಮಿತವಾಗಿ ತಿಂದರೆ ಕ್ಷೇಮ, ಹೆಚ್ಚು ತಿಂದರೆ ತೂಕ ಹೆಚ್ಚುತ್ತದೆ. ಏಕೆಂದರೆ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ. ಆದರೆ ಅನ್ನ ತಿನ್ನದವರಿಗಿಂತ ಅನ್ನ ತಿನ್ನುವವರ ತೂಕ ಕಡಿಮೆಯಾಗುತ್ತೆ ಅಂತ ಅಧ್ಯಯನವೊಂದು ಹೇಳಿದೆ. ಏಕೆಂದರೆ ಅಕ್ಕಿ ಕಡಿಮೆ ಕೊಬ್ಬು, ಸಕ್ಕರೆ ಮತ್ತು ಸೋಡಿಯಂ ಆಹಾರವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಸೇವಿಸಬಹುದು.

ಇದನ್ನೂ ಓದಿ: ಅತಿಯಾದರೆ ಅಮೃತವೂ ವಿಷವಲ್ಲವೇ! ಬ್ಲ್ಯಾಕ್ ಕಾಫಿ ಹೆಚ್ಚು ಕುಡಿದರೆ ಏನಾಗುತ್ತೆ ಗೊತ್ತಾ?

ಜೀರ್ಣಕ್ರಿಯೆಗೆ ಒಳ್ಳೆಯದು: ಬೆಳಗಿನ ಉಪಾಹಾರಕ್ಕೆ ಅನ್ನವನ್ನು ತಿನ್ನುವುದು ಜೀರ್ಣಕ್ರಿಯೆ ದೃಷ್ಟಿಯಿಂದ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದು ಅತಿಸಾರದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಇದು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಿತವಾಗಿ ತೆಗೆದುಕೊಳ್ಳುವುದು ಉತ್ತಮ: ಯಾವುದೇ ಅನುಮಾನವಿಲ್ಲದೆ ಅನ್ನವನ್ನು ಉಪಹಾರವಾಗಿ ತೆಗೆದುಕೊಳ್ಳಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲ.. ಮಿತವಾಗಿ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಬಹಳಷ್ಟು ಜನ ಬೆಳಿಗ್ಗೆ ಸಕ್ರಿಯವಾಗಿರುವುದರಿಂದ, ಅವರಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಬೆಳಗ್ಗೆ ಅನ್ನ ತಿನ್ನುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನ ಅನ್ನ ತಿನ್ನುವವರು ರಾತ್ರಿ ಊಟ ಮಾಡುವುದನ್ನು ತಪ್ಪಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:09 pm, Fri, 12 January 24

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ