ಕೋವಿಡ್ 19 ಹರಡುವ ವೈರಸ್ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಒರೆಗಾನ್ ಸ್ಟೇಟ್ ಯುನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಗಾಂಜಾ ಕೊರೋನಾ ಹರಡುವುದನ್ನು ತಡೆಯುತ್ತದೆ ಎಂದು ರಾಸಾಯನಿಕ ಸ್ಕ್ರೀನಿಂಗ್ ತಂತ್ರಜ್ಞಾನದ ಮೂಲಕ ಕಂಡುಹಿಡಿಯಾಲಾಗಿದೆ. ಗಾಂಜಾವನ್ನು ಸೌಂದರ್ಯವರ್ಧಕಗಳ ತಯಾರಿಕೆ, ಪೋಷಣೆಯುಕ್ತ ಕೆಲವು ಆಹಾರಗಳ ತಯಾರಿಕೆ ಹಾಗೂ ಬಾಡಿ ಲೋಷನ್ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ರಿಚರ್ಡ್ ವಾನ್ ಎನ್ನುವ ಸಂಶೊಧಕ ತಿಳಿಸಿದ್ದಾರೆ.
ಜರ್ನಲ್ ನ್ಯಾಚುರಲ್ ಪ್ರೊಡಕ್ಟ್ಸ್ನಲ್ಲಿ ಅಧ್ಯಯನದ ವರದಿಯು ಪ್ರಕಟವಾಗಿದ್ದು ಗಾಂಜಾದಲ್ಲಿನ ಕೆಲವು ಸಂಯುಕ್ತಗಳು ಮಾನವನ ಜೀವಕೋಶಗಳಿಗೆ ಕೋವಿಡ್ 19 ವೈರಸ್ ಸೇರುವುದನ್ನು ತಪ್ಪಿಸುತ್ತದೆ ಎಂದು ಹೇಳಲಾಗಿದೆ. ಒಂದು ಜೋಡಿ ಕ್ಯಾನಬಿನ್ಗಳು SARS-CoV-2 ಹರಡುವುದನ್ನು ತಡೆಯುತ್ತದೆ. ಕೊರೋನಾ ವ್ಯಾಕ್ಸಿನ್ ತಾಯಾರಿಕೆಯ ವೇಳೆಯಲ್ಲಿಯೂ ಕಾನಬೀಸ್ ಆಸಿಡ್, ಸ್ಪೈಕ್ ಪ್ರೋಟೀನ್ಅನ್ನು ಬಳಸಲಾಗಿದೆ. ಇವುಗಳು ಸೋಂಕು ಹರಡುವುದನ್ನು ಹಾಗೂ ಮಾನವನ ದೇಹದಲ್ಲಿ ಸೋಂಕು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಎಂದು ಸಾಬೀತಾಗಿದೆ. ಹೆಂಪ್ ಎಂದು ಕರೆಯಲ್ಪಡುವ ಕ್ಯಾನಬೀಸ್ ಅಥವಾ ಗಾಂಜಾಗಳು ಫೈಬರ್, ಆಹಾರ ಮತ್ತು ಪಶು ಆಹಾರದ ಮೂಲವಾಗಿದೆ.
ಕ್ಯಾನಜಿರಿಯೋಲಿಕ್ ಮತ್ತು ಕ್ಯಾನಬಿಡಿಯೋಲಿಕ್ ಆಮ್ಲವು (cannabigerolic acid (CBGA) and cannabidiolic acid (CBDA) ) ಸ್ಪೈಕ್ ಪ್ರೋಟೀನ್ ಅಂಶದಿಂದ ಮಾನವನ ದೇಹಕ್ಕೆ ಎಫಿಥಿಲಿಯಲ್ ಕೋಶಗಳ ಸೋಂಕು ಮತ್ತು ಜೀವಕೋಶಗಳಿಗೆ SARS-CoV-2 ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಲ್ಯಾಬ್ ಟೆಸ್ಟ್ನಲ್ಲಿ ಕಂಡುಹಿಡಿಯಲಾಗಿದೆ. ಇವುಗಳು ಮಾನವನ ದೇಹಕ್ಕೆ ಸುರಕ್ಷಾ ಕವಚದಂತೆ ಕೆಲಸಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: