Covid Omicron Symptoms ಜ್ವರವಿಲ್ಲದಿದ್ದರೂ ವಾಂತಿ, ವಾಕರಿಕೆ, ಹೊಟ್ಟೆ ನೋವು ಇದೆಯೇ? ಇದು ಒಮಿಕ್ರಾನ್ ಸೋಂಕು ಆಗಿರುವ ಸಾಧ್ಯತೆ ಇದೆ ಅಂತಾರೆ ತಜ್ಞರು

Omicron ಉಸಿರಾಟದ ತೊಂದರೆ ಅಥವಾ ಜ್ವರ ಇಲ್ಲದಿದ್ದರೂ ಸಹ ನೀವು ಈ ಹೊಟ್ಟೆಯಲ್ಲಿ ಅಸ್ವಸ್ಥತೆ ಹೊಂದಿದ್ದರೆ ಕೊವಿಡ್ -19 ಗಾಗಿ ಪರೀಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ.

Covid Omicron Symptoms ಜ್ವರವಿಲ್ಲದಿದ್ದರೂ ವಾಂತಿ, ವಾಕರಿಕೆ, ಹೊಟ್ಟೆ ನೋವು ಇದೆಯೇ? ಇದು ಒಮಿಕ್ರಾನ್ ಸೋಂಕು ಆಗಿರುವ ಸಾಧ್ಯತೆ ಇದೆ ಅಂತಾರೆ ತಜ್ಞರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 13, 2022 | 1:54 PM

ನಿಮಗೆ ಜ್ವರವಿಲ್ಲ ಆದರೆ ವಾಂತಿ, ವಾಕರಿಕೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ? ಒಮಿಕ್ರಾನ್ (Omicron) ರೂಪಾಂತರದ ಸೋಂಕಿನಿಂದ ಇದು ಸಂಭವಿಸಬಹುದು. ಉಸಿರಾಟದ ತೊಂದರೆ ಅಥವಾ ಜ್ವರ ಇಲ್ಲದಿದ್ದರೂ ಸಹ ನೀವು ಈ ಹೊಟ್ಟೆಯಲ್ಲಿ ಅಸ್ವಸ್ಥತೆ ಹೊಂದಿದ್ದರೆ ಕೊವಿಡ್ -19(Covid-19) ಗಾಗಿ ಪರೀಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ.  ಹೊಸ ರೂಪಾಂತರಿಯು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶವನ್ನು ಹೊರತುಪಡಿಸಿ ನಿಮ್ಮ ಕರುಳಿನ ಮೇಲೆ ಪರಿಣಾಮ ಬೀರಬಹುದು. ಒಮಿಕ್ರಾನ್ ಸೋಂಕಿಗೆ ಒಳಗಾದವರಲ್ಲಿ ಹೊಟ್ಟೆನೋವಿನ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ವೈರಸ್ ವಿರುದ್ಧ ಲಸಿಕೆ ಹಾಕಿದ ವ್ಯಕ್ತಿಗಳು ಸಹ ಈ ಹೊಸ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಕೊರೊನಾ ವೈರಸ್‌ನ ಕೆಲವು ಹೊಸ ರೋಗಲಕ್ಷಣಗಳು ವಾಕರಿಕೆ, ಹೊಟ್ಟೆ ನೋವು, ವಾಂತಿ, ಹಸಿವಿನ ಕೊರತೆ ಮತ್ತು ಅತಿಸಾರವನ್ನು ಒಳಗೊಂಡಿವೆ.

“ಜನರು ಆರಂಭದಲ್ಲಿ ಯಾವುದೇ ಉಸಿರಾಟದ ದೂರುಗಳಿಲ್ಲದೆ ಹೊಟ್ಟೆಯಲ್ಲಿ ಸಮಸ್ಯೆ ಹೊಂದಿರಬಹುದು. ಬೆನ್ನುನೋವು, ಹೊಟ್ಟೆ ನೋವು, ವಾಕರಿಕೆ, ವಾಂತಿ, ಹಸಿವಿನ  ಕೊರತೆ ಮತ್ತು ಅತಿಸಾರವೂ ಇರಬಹುದು. ಇದು ಕರುಳಿನ ಲೋಳೆಪೊರೆಗೆ (gut mucosa) ಸೋಂಕು ತಗುಲಿಸುವ ಒಮಿಕ್ರಾನ್ ಮತ್ತು ಪರಿಣಾಮವಾಗಿ ಉಂಟಾಗುವ ಉರಿಯೂತದ ಕಾರಣದಿಂದಾಗಿರಬಹುದು ಎಂದು ಗುರುಗ್ರಾಮ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಶ್ವಾಸಕೋಶ ಶಾಸ್ತ್ರದ ನಿರ್ದೇಶಕ ಡಾ ಮನೋಜ್ ಗೋಯೆಲ್ ಹೇಳಿದ್ದಾರೆ.

ಎರಡು ಡೋಸ್ ಲಸಿಕೆ ಹಾಕಿದ ಜನರಿಗೆ ಸಹ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ ಈ ರೋಗಲಕ್ಷಣಗಳು ಪ್ರತಿಕೂಲವಲ್ಲ ಮತ್ತು ಹೆಚ್ಚು ಕಳವಳವುಂಟು ಮಾಡುವುದಿಲ್ಲ ಎಂದು ಅವರು ಹೇಳಿದರು. “ಹೊಟ್ಟೆ ನೋವು, ವಾಕರಿಕೆ ಮತ್ತು ಹಸಿವು ಇಲ್ಲದಿರುವುದು ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸಬೇಡಿ. ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ, ನೀವೇ ಐಸೋಲೇಟ್ ಆಗಿ. ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಸುರಕ್ಷಿತ ಆಯುರ್ವೇದ ಚಿಕಿತ್ಸೆ ಎಂದು ಕರೆಯಲ್ಪಡುವ ಸ್ವಯಂ-ಔಷಧಿಗಳನ್ನು ತಪ್ಪಿಸಿ. ಹೆಚ್ಚು ನೀರು ಕುಡಿದು ದೇಹದಲ್ಲಿ ನೀರಿನ ಅಂಶವಿರುವಂತೆ ಕಾಪಾಡಿಕೊಳ್ಳಿ. ಬೀಜಗಳನ್ನು ಒಳಗೊಂಡಂತೆ ಆಗಾಗ್ಗೆ, ಸಣ್ಣ, ಆರೋಗ್ಯಕರ ಮತ್ತು ಲಘು ಆಹಾರವನ್ನು ಸೇವಿಸಿ. ಮಸಾಲೆಯುಕ್ತ ಆಹಾರ ಮತ್ತು ಮದ್ಯವನ್ನು ತಪ್ಪಿಸಿ. ರೋಗಲಕ್ಷಣಗಳು ಸೌಮ್ಯವಾಗಿದ್ದರೆ ಕಳವಳ ಬೇಡ,” ಎಂದು ಡಾ ಗೋಯೆಲ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಒಮಿಕ್ರಾನ್ ಸೋಂಕಿನಿಂದಾಗಿ ಉಸಿರಾಟದ ಲಕ್ಷಣಗಳು ಅಥವಾ ಜ್ವರವಿಲ್ಲದೆ ಇದ್ದು ಹೊಟ್ಟೆಯಲ್ಲಿ ಸಮಸ್ಯೆ ಹೊಂದಿದ್ದರೆ ಕೊವಿಡ್ ಪರೀಕ್ಷೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.  ಒಮಿಕ್ರಾನ್ ಡೆಲ್ಟಾದಂತೆಯೇ ಪ್ರವೃತ್ತಿಯನ್ನು ಮುಂದುವರೆಸುತ್ತಿರುವಂತೆ ತೋರುತ್ತಿದೆ. ಇದು ಸಾಮಾನ್ಯ ಶೀತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ನಿರ್ದಿಷ್ಟವಾಗಿ ಲಸಿಕೆಯನ್ನು ಪಡೆದ ಜನರಲ್ಲಿ ಮತ್ತು ವಾಕರಿಕೆ, ಸ್ನಾಯು ನೋವು, ಅತಿಸಾರ ಮತ್ತು ಚರ್ಮದ ದದ್ದುಗಳಂತಹ ಕಡಿಮೆ ಸಾಮಾನ್ಯ ವ್ಯವಸ್ಥಿತ ರೋಗಲಕ್ಷಣಗಳು ಕಂಡುಬರುತ್ತದೆ.

ಒಮಿಕ್ರಾನ್ ಎಷ್ಟು ಕೆಟ್ಟದು?

ಈ ಹೊಸ ರೂಪಾಂತರವು ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಇದು ಯುಕೆ ಮತ್ತು ಇತರ ದೇಶಗಳಲ್ಲಿ ಪ್ರಕರಣಗಳಲ್ಲಿ ಉಲ್ಬಣವನ್ನು ಉಂಟುಮಾಡುತ್ತದೆ. ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುವ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತೇವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಒಮಿಕ್ರಾನ್ ಮತ್ತು ಡೆಲ್ಟಾವು ನಮ್ಮಲ್ಲಿ ಅನೇಕರಿಗೆ ಶೀತದಂತೆ ಭಾಸವಾಗಿದ್ದರೂ, ಅದು ಸಾವಿಗೆ ಕಾರಣವಾಗಬಹುದು ಅಥವಾ ದೀರ್ಘಕಾಲದ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ ಲಸಿಕೆ ಹಾಕದ ಅಥವಾ ರೋಗನಿರೋಧಕ ಶಕ್ತಿ ಹೊಂದಿರದ ಜನರ ದೈನಂದಿನ ಬದುಕನ್ನು ಅಡ್ಡಿಪಡಿಸುತ್ತದೆ.

ಇಲ್ಲಿಯವರೆಗೆ ನಾವು ಯುವ ಜನರಲ್ಲಿ ಹೆಚ್ಚಿನ ಪ್ರಕರಣಗಳನ್ನು ನೋಡಿದ್ದೇವೆ ಆದರೆ ಒಟ್ಟಾರೆ ಸೋಂಕಿನ ಪ್ರಮಾಣವು ತುಂಬಾ ಹೆಚ್ಚಿರುವಾಗ ವಯಸ್ಸಾದವರಲ್ಲಿ ಪ್ರಕರಣಗಳು ಹೆಚ್ಚಾಗುವುದನ್ನು ನಾವು ಈಗ ನೋಡುತ್ತಿದ್ದೇವೆ. 75 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಧನಾತ್ಮಕ ಪ್ರಕರಣಗಳ ಇತ್ತೀಚಿನ ಏರಿಕೆಯು ಚಿಂತಾಜನಕವಾಗಿದೆ. ಆದರೆ ಹಳೆಯ ಮತ್ತು ಹೆಚ್ಚು ದುರ್ಬಲ ಗುಂಪುಗಳಲ್ಲಿ ಯುಕೆಯಲ್ಲಿ ಹೆಚ್ಚಿನ ಮಟ್ಟದ ವ್ಯಾಕ್ಸಿನೇಷನ್ ಸೌಮ್ಯವಾದ ರೋಗಲಕ್ಷಣಗಳು ಮತ್ತು ಆಸ್ಪತ್ರೆಗೆ ದಾಖಲಾತಿ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಒಮಿಕ್ರಾನ್‌ನೊಂದಿಗಿನ ಪ್ರಮುಖ ಸಮಸ್ಯೆಯು ಪ್ರಮುಖ ಆರೋಗ್ಯ ಸಿಬ್ಬಂದಿಯಲ್ಲಿ ಉಂಟುಮಾಡುವ ಅನಾರೋಗ್ಯದ ಅನುಪಸ್ಥಿತಿಯ ಅಲೆಯಾಗಿದೆ.

ಇದನ್ನೂ ಓದಿ: ಇಂದು ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ; ಕೊವಿಡ್ 19 ನಿಯಂತ್ರಣ ಬಗ್ಗೆ ಮಹತ್ವದ ಚರ್ಚೆ

Published On - 1:50 pm, Thu, 13 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ