Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ
ಕ್ಯಾನಬೀಸ್ / ಗಾಂಜಾ
Follow us
TV9 Web
| Updated By: Pavitra Bhat Jigalemane

Updated on: Jan 14, 2022 | 1:03 PM

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.  ಒರೆಗಾನ್​ ಸ್ಟೇಟ್​ ಯುನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಗಾಂಜಾ ಕೊರೋನಾ ಹರಡುವುದನ್ನು ತಡೆಯುತ್ತದೆ ಎಂದು  ರಾಸಾಯನಿಕ ಸ್ಕ್ರೀನಿಂಗ್​ ತಂತ್ರಜ್ಞಾನದ ಮೂಲಕ ಕಂಡುಹಿಡಿಯಾಲಾಗಿದೆ. ಗಾಂಜಾವನ್ನು ಸೌಂದರ್ಯವರ್ಧಕಗಳ ತಯಾರಿಕೆ, ಪೋಷಣೆಯುಕ್ತ ಕೆಲವು ಆಹಾರಗಳ ತಯಾರಿಕೆ ಹಾಗೂ ಬಾಡಿ ಲೋಷನ್​ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು  ರಿಚರ್ಡ್​ ವಾನ್​ ಎನ್ನುವ ಸಂಶೊಧಕ ತಿಳಿಸಿದ್ದಾರೆ. 

ಜರ್ನಲ್​ ನ್ಯಾಚುರಲ್​ ಪ್ರೊಡಕ್ಟ್ಸ್​ನಲ್ಲಿ ಅಧ್ಯಯನದ ವರದಿಯು ಪ್ರಕಟವಾಗಿದ್ದು ಗಾಂಜಾದಲ್ಲಿನ ಕೆಲವು ಸಂಯುಕ್ತಗಳು ಮಾನವನ ಜೀವಕೋಶಗಳಿಗೆ ಕೋವಿಡ್​ 19 ವೈರಸ್​ ಸೇರುವುದನ್ನು ತಪ್ಪಿಸುತ್ತದೆ ಎಂದು ಹೇಳಲಾಗಿದೆ.  ಒಂದು ಜೋಡಿ ಕ್ಯಾನಬಿನ್​ಗಳು SARS-CoV-2  ಹರಡುವುದನ್ನು ತಡೆಯುತ್ತದೆ. ಕೊರೋನಾ ವ್ಯಾಕ್ಸಿನ್​ ತಾಯಾರಿಕೆಯ ವೇಳೆಯಲ್ಲಿಯೂ ಕಾನಬೀಸ್​ ಆಸಿಡ್​, ಸ್ಪೈಕ್​ ಪ್ರೋಟೀನ್​ಅನ್ನು ಬಳಸಲಾಗಿದೆ. ಇವುಗಳು ಸೋಂಕು ಹರಡುವುದನ್ನು ಹಾಗೂ ಮಾನವನ ದೇಹದಲ್ಲಿ ಸೋಂಕು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಎಂದು ಸಾಬೀತಾಗಿದೆ. ಹೆಂಪ್ ಎಂದು ಕರೆಯಲ್ಪಡುವ ಕ್ಯಾನಬೀಸ್ ಅಥವಾ ಗಾಂಜಾಗಳು ಫೈಬರ್, ಆಹಾರ ಮತ್ತು ಪಶು ಆಹಾರದ ಮೂಲವಾಗಿದೆ.

ಕ್ಯಾನಜಿರಿಯೋಲಿಕ್​ ಮತ್ತು ಕ್ಯಾನಬಿಡಿಯೋಲಿಕ್​ ಆಮ್ಲವು (cannabigerolic acid (CBGA) and cannabidiolic acid (CBDA) ) ಸ್ಪೈಕ್​ ಪ್ರೋಟೀನ್​ ಅಂಶದಿಂದ ಮಾನವನ ದೇಹಕ್ಕೆ ಎಫಿಥಿಲಿಯಲ್​ ಕೋಶಗಳ ಸೋಂಕು ಮತ್ತು ಜೀವಕೋಶಗಳಿಗೆ SARS-CoV-2 ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಲ್ಯಾಬ್​ ಟೆಸ್ಟ್​ನಲ್ಲಿ ಕಂಡುಹಿಡಿಯಲಾಗಿದೆ.  ಇವುಗಳು ಮಾನವನ ದೇಹಕ್ಕೆ ಸುರಕ್ಷಾ ಕವಚದಂತೆ ಕೆಲಸಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಗಾಳಿಯಲ್ಲಿ 20 ನಿಮಿಷಗಳೊಳಗೆ ದುರ್ಬಲಗೊಳ್ಳುತ್ತದೆ ಕೊವಿಡ್ ವೈರಾಣು; ಮಾಸ್ಕ್ ಹಾಗೂ ಅಂತರ ಕಾಪಾಡುವುದರ ಪ್ರಾಮುಖ್ಯತೆ ವಿವರಿಸಿದ ಅಧ್ಯಯನ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ