ಕೆಲವು ಕೊವಿಡ್ ರೋಗಿಗಳಿಂದ 10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ

TV9 Digital Desk

| Edited By: shivaprasad.hs

Updated on: Jan 14, 2022 | 2:35 PM

ಕೆಲವು ಕೊವಿಡ್ ರೋಗಿಗಳು ಸೋಂಕು ಪತ್ತೆಯಾದ ಹತ್ತು ದಿನದ ನಂತರವೂ ಮತ್ತೋರ್ವರಿಗೆ ಸೋಂಕು ಹರಡಲು ಕಾರಣವಾಗಬಲ್ಲರು ಎಂದು ಬ್ರಿಟನ್​ನ ಅಧ್ಯಯನವೊಂದು ತಿಳಿಸಿದೆ. ಹಲವು ರಾಷ್ಟ್ರಗಳು ಐಸೋಲೇಷನ್ ಅವಧಿ ಇಳಿಸುತ್ತಿರುವುದರ ಹಿನ್ನೆಲೆಯಲ್ಲಿ ಈ ಅಧ್ಯಯನ ಮಹತ್ವ ಪಡೆದಿದೆ.

ಕೆಲವು ಕೊವಿಡ್ ರೋಗಿಗಳಿಂದ 10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ
ಪ್ರಾತಿನಿಧಿಕ ಚಿತ್ರ

ಬ್ರಿಟನ್: ಕೆಲವರು ಕೊವಿಡ್ ಸೋಂಕಿಗೆ ತುತ್ತಾದ ಹತ್ತು ದಿನಗಳ ನಂತರವೂ ಇತರರಿಗೆ ಸೋಂಕು ಹರಡಬಲ್ಲರು ಎಂದು ಬ್ರಿಟನ್​ನ ಎಕ್ಸೆಟರ್ ವಿವಿಯ ಸಂಶೋಧನೆ ತಿಳಿಸಿದೆ. ಈಗಾಗಲೇ ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ನಂತರವೂ ಸೋಂಕು ಹರಡಬಲ್ಲರೇ ಎಂಬುದನ್ನು ಸಂಶೋಧನೆ ಮಾಡಲಾಗಿತ್ತು. ಒಟ್ಟು 176 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಸುಮಾರು 13 ಪ್ರತಿಶತ ಜನರು ಸೋಂಕು ಕಂಡುಬಂದ ಹತ್ತು ದಿನಗಳ ನಂತರವೂ ಮತ್ತೊಬ್ಬರಿಗೆ ಸೋಂಕು ಹರಡಲು ಕಾರಣವಾಗಬಲ್ಲರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರಸ್ತುತ ಐಸೋಲೇಷನ್​ನ ಅವಧಿಯನ್ನು ಹಲವು ರಾಷ್ಟ್ರಗಳು ಇಳಿಸಿವೆ. ಈ ಹಿನ್ನೆಲೆಯಲ್ಲಿ ಈ ಅಧ್ಯಯನ ಮಹತ್ವ ಪಡೆದಿದೆ.

ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಸದ್ಯ ಐಸೋಲೇಶನ್ ಅವಧಿಯನ್ನು ಐದು ದಿನಕ್ಕೆ ಇಳಿಸಿವೆ. ಕೊರೊನಾ ಪಾಸಿಟಿವ್ ಆದ ಸಿಬ್ಬಂದಿಗಳಿಂದ ಕೆಲಸದ ಸ್ಥಳಗಳಲ್ಲಿ ಜನರ ಅಭಾವವಾಗುತ್ತಿದೆ. ಇದನ್ನು ತಡೆಯಲು ಈ ದೇಶಗಳು ಐಸೋಲೇಶನ್ ಕಡಿತಗೊಳಿಸುವ ಮಾರ್ಗಕ್ಕೆ ಮೊರೆ ಹೋಗಿವೆ. ಇದೀಗ ಹೊಸ ಅಧ್ಯಯನ ಅಂತಹ ನಿರ್ಧಾರಗಳಿಂದ ಮತ್ತೆ ಸೋಂಕು ಹರಡಬಹುದು ಎಂದು ಸೂಕ್ಷ್ಮವಾಗಿ ತಿಳಿಸಿದೆ.

ಕಚೇರಿ ಹಾಗೂ ಶಾಲೆಗಳಲ್ಲಿ ಸೋಂಕು ಹೊಂದಿರುವವರ ಐಸೋಲೇಶನ್ ಅವಧಿಯನ್ನು ಹೆಚ್ಚಿಸದಿದ್ದರೆ ಮತ್ತೆ ಸೋಂಕು ಹರಡಬಹುದು ಎಂದು ಅಧ್ಯಯನದ ಮೂಲಕ ಎಚ್ಚರಿಸಲಾಗಿದೆ. ಈ ಕುರಿತು ವಾರ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಾರೆನ್ಸ್ ಯಂಗ್ ಮಾಹಿತಿ ನೀಡಿದ್ದಾರೆ.

ಡೆಲ್ಟಾ ಹಾಗೂ ಒಮಿಕ್ರಾನ್​ಗೆ ಈ ಅಧ್ಯಯನ ಅನ್ವಯವಾಗುತ್ತದೆಯೇ? ಆದರೆ ಅಧ್ಯಯನದಲ್ಲಿ ಗಮನಿಸಲಾಗಿರುವುದು 2020ರಲ್ಲಿ ಕೊರೊನಾ ಪ್ರಬಲವಾಗಿದ್ದಾಗಿನ ವೈರಾಣುಗಳನ್ನು. ಪ್ರಸ್ತುತ ಡೆಲ್ಟಾ ಹಾಗೂ ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಮೂಲ ವೈರಸ್​ನ ಅಧ್ಯಯನವು ಈ ವೈರಸ್​ಗಳಿಗೆ ಹೇಗೆ ಅನ್ವಯವಾಗಬಲ್ಲದು ಎಂಬುದರ ಕುರಿತು ಖಚಿತತೆ ಇಲ್ಲ.

ಮತ್ತೊಬ್ಬರಿಗೆ ಕೊವಿಡ್ ಸೋಂಕು ಹೇಗೆ ಹರಡುತ್ತದೆ ಎಂಬುದಕ್ಕೆ ಹಲವು ಕಾರಣಗಳು ಕಾರಣವಾಗುತ್ತವೆ ಎಂದು ಐಸ್ಟ್ ಆಂಗ್ಲಿಯಾ ವಿವಿಯ ಪ್ರಾಧ್ಯಾಪಕ ಪೌಲ್ ಹಂಟರ್ ತಿಳಿಸಿದ್ದಾರೆ. ರೋಗದ ತೀವ್ರತೆ, ರೋಗಿಯ ಲಕ್ಷಣಗಳು ಹಾಗೂ ಸಂಭಾವ್ಯ ರೋಗಿಯ ರೋಗ ನಿರೋಧಕ ಮಟ್ಟದಿಂದ ವೈರಸ್ ಹರಡುವ ಸಾಧ್ಯತೆ ನಿರ್ಧಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

3 ವರ್ಷ ಸಹನೆ ತೋರಿದ್ರೆ ಸಾಕು 30 ವರ್ಷ ಸಮಸ್ಯೆ ಇರಲ್ಲ; ತಾಳೆ ಬೆಳೆ ಬೆಳೆದು ಬಂಪರ್ ಆದಾಯ ಗಳಿಸಿದ ರೈತ ಇತರರಿಗೆ ಮಾದರಿ

Thawar Chand Gehlot: ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್; ಸಚಿವ ಸುಧಾಕರ್ ಉಪಸ್ಥಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada