AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cervical Cancer: ಕ್ಯಾನ್ಸರ್​ನಿಂದ ಪಾರಾಗಬೇಕೇ?; HPV ಲಸಿಕೆ ಹಾಕಿಸಿಕೊಳ್ಳಿ

HPV Vaccine: ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತನಗೆ ಗರ್ಭಕಂಠದ ಕ್ಯಾನ್ಸರ್ ಉಂಟಾಗಿ ಸಾವನ್ನಪ್ಪಿರುವುದಾಗಿ ಬಾಲಿವುಡ್ ನಟಿ ಪೂನಂ ಪಾಂಡೆ ತನ್ನ ಮ್ಯಾನೇಜರ್ ಮೂಲಕ ಎಲ್ಲೆಡೆ ಪ್ರಚಾರ ಮಾಡಿದ್ದರು. ಈ ಘಟನೆಯಾದ ಬಳಿಕ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಕ್ಯಾನ್ಸರ್ ತಡೆಗಟ್ಟುವ ಕ್ರಮದ ಬಗ್ಗೆ ಮಹಿಳೆಯರು ಸರ್ಚ್ ಮಾಡುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಯಲು ಇರುವ ಪರಿಣಾಮಶಾಲಿ ಮಾರ್ಗವೆಂದರೆ ಹೆಚ್​ಪಿವಿ ಲಸಿಕೆ ಪಡೆಯುವುದು. ಈ ಲಸಿಕೆಯ ಬಗ್ಗೆ ನಿಮಗೆಷ್ಟು ಗೊತ್ತು?

Cervical Cancer: ಕ್ಯಾನ್ಸರ್​ನಿಂದ ಪಾರಾಗಬೇಕೇ?; HPV ಲಸಿಕೆ ಹಾಕಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 27, 2024 | 3:35 PM

Share

ಗರ್ಭಕಂಠದ ಕ್ಯಾನ್ಸರ್ (Cervical Cancer) ಇದೀಗ ದೇಶಾದ್ಯಂತ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದೆ. ಸೈಲೆಂಟ್ ಕಿಲ್ಲರ್ ಎಂದು ವೈದ್ಯರಿಂದ ಕರೆಸಿಕೊಂಡಿರುವ ಗರ್ಭಕಂಠದ ಕ್ಯಾನ್ಸರ್ ಬಹುತೇಕ ಜನರ ಗಮನಕ್ಕೆ ಬರುವ ಮೊದಲೇ ಅದು ಕೊನೆಯ ಹಂತ ತಲುಪಿರುತ್ತದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಬಾಲಕಿಯರು ಮತ್ತು ಯುವತಿಯರು ಹೆಚ್​ಪಿವಿ ಲಸಿಕೆಯನ್ನು (HPV Vaccination) ಹಾಕಿಸಿಕೊಳ್ಳುವುದು ಅತ್ಯಗತ್ಯ. ಆಘಾತಕಾರಿ ಸಂಗತಿಯೆಂದರೆ, ಈ ಗರ್ಭಕಂಠದ ಕ್ಯಾನ್ಸರ್​ನಿಂದ ಪ್ರತಿ ವರ್ಷ ಭಾರತದಲ್ಲಿ 70 ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಆದರೂ ಈ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಪೂನಂ ಪಾಂಡೆ (Poonam Pandey) ಈ ಗರ್ಭಕಂಠದ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆಂದು ಸುಳ್ಳು ಸುದ್ದಿ ಹರಡಲಾಯಿತು.

ಫೆಬ್ರವರಿ 1 ರಂದು ಕೇಂದ್ರ ಬಜೆಟ್‌ನಲ್ಲಿ 9ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ವ್ಯಾಕ್ಸಿನೇಷನ್ ನೀಡುವುದನ್ನು ಪ್ರೋತ್ಸಾಹಿಸುವುದಾಗಿ ಸರ್ಕಾರವು ಘೋಷಣೆ ಮಾಡಿತ್ತು. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌ನ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. ಈ ಬಗ್ಗೆ ಜಾಗೃತಿ ಕಡಿಮೆಯಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಈ ಕ್ಯಾನ್ಸರ್​ಗೆ ಬಲಿಯಾಗುವ ಮಹಿಳೆಯರು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣಕ್ಕೆ ಭಾರತದಲ್ಲಿನ ಪ್ರತಿ ಹೆಣ್ಣು ಮಗುವಿಗೆ ಎಚ್‌ಪಿವಿ ಲಸಿಕೆಯನ್ನು ನೀಡಬೇಕಾದುದು ಅಗತ್ಯ. ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ಈ ವೈರಸ್ ಗಂಡು- ಹೆಣ್ಣು ಇಬ್ಬರ ಮೇಲೂ ಪರಿಣಾಮ ಬೀರುವ ಲೈಂಗಿಕವಾಗಿ ಹರಡುವ ಸೋಂಕು. ಆದರೆ ಯುವತಿಯರು HPV ಲಸಿಕೆಯಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಲಸಿಕೆ ಅವರ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಗರ್ಭಕಂಠದ ಕ್ಯಾನ್ಸರ್​ನ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಏನಿದು ಹೆಚ್​ಪಿವಿ ವೈರಸ್?:

HPV ಸೋಂಕುಗಳು ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ಹರಡುತ್ತದೆ. ಮುಖ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ಇದು ಸುಲಭವಾಗಿ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಲೈಂಗಿಕವಾಗಿ ಸಕ್ರಿಯವಾಗಿರುವ ಬಹುತೇಕ ಎಲ್ಲಾ ಜನರು HPV ಸೋಂಕಿಗೆ ಒಳಗಾಗುತ್ತಾರೆ. ಆದರೆ, ಹಲವರಿಗೆ ಇದು ಯಾವುದೇ ಅಪಾಯ ಮಾಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೋಗನಿರೋಧಕ ಶಕ್ತಿಯು ದೇಹದಿಂದ HPV ಅನ್ನು ಹೊರಹಾಕುತ್ತದೆ. ಹೆಚ್ಚಿನ ಅಪಾಯದ HPVಯೊಂದಿಗಿನ ನಿರಂತರ ಸೋಂಕು ಅಸಹಜ ಕೋಶಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಅದು ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

ಇದನ್ನೂ ಓದಿ: Cervical Cancer: ಲೈಂಗಿಕ ಕ್ರಿಯೆಗೂ ಕ್ಯಾನ್ಸರ್​ಗೂ ಇದೆ ಸಂಬಂಧ; ಈ ಬಗ್ಗೆ ಎಚ್ಚರವಿರಲಿ!

ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ ನೀವು HPV ವೈರಸ್‌ಗೆ ಒಳಗಾಗುವ ಅಪಾಯವಿದೆ. HPV ಲೈಂಗಿಕವಾಗಿ ಹರಡುತ್ತದೆ. ಒಂದುವೇಳೆ ನೀವು ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಕ್ರಿಯೆ ನಡೆಸುವವರಾದರೆ ನೀವು ಗರ್ಭಕಂಠದ ಕ್ಯಾನ್ಸರ್ ಅನ್ನು ಹೊಂದುವ ಅಪಾಯವನ್ನು ಹೊಂದಿರುತ್ತೀರಿ. ಲೈಂಗಿಕವಾಗಿ ಸಕ್ರಿಯವಾಗಿರುವುದು ನಿಮಗೆ ಅಪಾಯವನ್ನುಂಟುಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ನೀವು ಈ ಅಪಾಯದಿಂದ ಶೇ. 95ರಷ್ಟು ಪ್ರಮಾಣದಲ್ಲಿ ಪಾರಾಗಬಹುದು.

ಗರ್ಭಕಂಠದ ಕ್ಯಾನ್ಸರ್ ಜಾಗತಿಕವಾಗಿ ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಮತ್ತು ಭಾರತದಲ್ಲಿ ಮಹಿಳೆಯರಲ್ಲಿ ಮೂರನೇ ಸಾಮಾನ್ಯವಾಗಿದೆ, ಈ ಸಂಭಾವ್ಯ ಮಾರಣಾಂತಿಕ ಕಾಯಿಲೆಯ ಸಂಭವವನ್ನು ಕಡಿಮೆ ಮಾಡಲು HPV ಲಸಿಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ HPV ಲಸಿಕೆ ಪ್ರಬಲ ಸಾಧನವಾಗಿದೆ. ಈ ಲಸಿಕೆಯನ್ನು ಎರಡು ಅಥವಾ ಮೂರು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಯಾವುದೇ ಲೈಂಗಿಕ ಚಟುವಟಿಕೆ ಪ್ರಾರಂಭವಾಗುವ ಮೊದಲು ಈ ಲಸಿಕೆಯನ್ನು ನೀಡಿದಾಗ ಈ ತಡೆಗಟ್ಟುವ ಕ್ರಮವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ, 9ರಿಂದ 14 ವರ್ಷದೊಳಗೆ ಹೆಣ್ಣುಮಕ್ಕಳಿಗೆ HPV ಲಸಿಕೆಯನ್ನು ನೀಡುವುದು ಉತ್ತಮ. ಈ ಬಗ್ಗೆ ಕೇಂದ್ರ ಸರ್ಕಾರವೂ ಹೆಚ್ಚು ಆದ್ಯತೆ ನೀಡುತ್ತಿದೆ.

ಹೆಚ್​ಪಿವಿ ಲಸಿಕೆಯಿಂದ ಏನು ಪ್ರಯೋಜನ?:

– HPV ಲಸಿಕೆಯ ಪ್ರಾಥಮಿಕ ಪ್ರಯೋಜನವೆಂದರೆ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವುದು. ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾದ ಅತ್ಯಂತ ಸಾಮಾನ್ಯವಾದ ಹೆಚ್ಚಿನ ಅಪಾಯದ HPV ತಳಿಗಳನ್ನು ಗುರಿಯಾಗಿಸುವ ಮೂಲಕ, ಈ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಮಾರಣಾಂತಿಕವಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ: Cervical Cancer: ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಯುವುದು ಹೇಗೆ?

– ಯಾವುದೇ ಲೈಂಗಿಕ ಚಟುವಟಿಕೆಯ ಮೊದಲು ಈ ಲಸಿಕೆಯನ್ನು ನೀಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಏಕೆಂದರೆ ಇದು ನಮ್ಮ ದೇಹವನ್ನು ಪ್ರವೇಶಿಸುವ HPV ತಳಿಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಹುಡುಗಿಯರು ಈ ಲಸಿಕೆ ಹಾಕಿಸಿಕೊಳ್ಳುವುದುರಿಂದ ಅವರು ಈ ಮಾರಣಾಂತಿಕ ವೈರಸ್ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಬಹುದು.

– ಜನಸಂಖ್ಯೆಯ ಹೆಚ್ಚಿನ ಶೇಕಡಾವಾರು ಜನರು ಈ ಲಸಿಕೆಯನ್ನು ಹಾಕಿಸಿಕೊಂಡಾಗ ಇದು ಹಿಂಡಿನ ಪ್ರತಿರಕ್ಷೆ ಎಂದು ಕರೆಯಲ್ಪಡುವ ವಿದ್ಯಮಾನವನ್ನು ಸೃಷ್ಟಿಸುತ್ತದೆ. ಇದು ಲಸಿಕೆ ಪಡೆದವರನ್ನು ರಕ್ಷಿಸುವುದಲ್ಲದೆ ಸಮುದಾಯದಲ್ಲಿ HPVಯ ಒಟ್ಟಾರೆ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೆಚ್​ಪಿವಿ ಲಸಿಕೆ ಹಾಕದ ವ್ಯಕ್ತಿಗಳನ್ನು ಕೂಡ ಪರೋಕ್ಷವಾಗಿ ರಕ್ಷಿಸಬಹುದು.

-HPV ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಮಾತ್ರ ಹೋರಾಡುವುದಿಲ್ಲ. ಇದು ವಲ್ವಾರ್, ಯೋನಿ, ಗುದ ಮತ್ತು ಓರೊಫಾರ್ಂಜಿಯಲ್ ಕ್ಯಾನ್ಸರ್‌ಗಳಂತಹ ಇತರ HPV ಸಂಬಂಧಿತ ಕ್ಯಾನ್ಸರ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ