Child Health: ಶಾಲೆಗಳಲ್ಲಿ ಮಕ್ಕಳ ರೋಗ ಹರಡುವಿಕೆ ತಡೆಗಟ್ಟಲು ಏನು ಮಾಡಬೇಕು?

| Updated By: ಸುಷ್ಮಾ ಚಕ್ರೆ

Updated on: Oct 16, 2024 | 8:41 PM

ಕೈಗಳ ನೈರ್ಮಲ್ಯವು ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ಕೈಗಳ ನೈರ್ಮಲ್ಯವು ರೋಗಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಕಾರಣವಾಗಿದೆ. ಅದರಲ್ಲಿಯೂ ವಿಶೇಷವಾಗಿ ಶಾಲೆಗಳಲ್ಲಿ ಮಕ್ಕಳು ಎಲ್ಲರೂ ಜೊತೆಯಾಗಿಯೇ ಆಟಗಳಲ್ಲಿ ಕೈಗಳ ನೈರ್ಮಲ್ಯ ಗಮನಾರ್ಹ ಸಂಗತಿಯಾಗಿದೆ.

Child Health: ಶಾಲೆಗಳಲ್ಲಿ ಮಕ್ಕಳ ರೋಗ ಹರಡುವಿಕೆ ತಡೆಗಟ್ಟಲು ಏನು ಮಾಡಬೇಕು?
ಕೈಗಳ ನೈರ್ಮಲ್ಯ
Follow us on

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಲ್ಲಿ ರೋಗಾಣುಗಳ ಹರಡುವಿಕೆಗೆ ಅತಿ ಹೆಚ್ಚು ಅವಕಾವಿರುತ್ತದೆ. ಹೀಗಾಗಿ, ಶಾಲೆಗಳಲ್ಲಿ ಕೈಗಳ ನೈರ್ಮಲ್ಯದ ಅಭ್ಯಾಸಗಳನ್ನು ಜಾರಿಗೊಳಿಸುವುದು ಮತ್ತು ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಕೈಗಳ ನೈರ್ಮಲ್ಯ ರೋಗಗಳ ಹರಡುವಿಕೆಯನ್ನು ತಡೆಗಟ್ಟುವುದು ಬಹಳ ಮುಖ್ಯ. ಶಾಲೆಗಳಲ್ಲಿ ಮಕ್ಕಳು ಯಾವುದೇ ರೀತಿಯ ತಾರತಮ್ಯದ ಕಲ್ಪನೆಗಳಿಲ್ಲದೆ ಇತರ ಮಕ್ಕಳೊಳಗೂಡಿ ಸ್ವಚ್ಛ ಮನಸ್ಸಿನಿಂದ ಬೆರೆಯುತ್ತಾರೆ. ಶಾಲೆಯಲ್ಲಿ ಆಟ, ಪಾಠಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಈ ವೇಳೆ ಯಾವುದೋ ಒಂದು ಮಗು ಸೀನಿದರೆ ಅಥವಾ ಕೆಮ್ಮಿದರೆ ಅದರಿಂದ ಇನ್ನೊಂದು ಮಗುವಿಗೆ ವೈರಾಣುಗಳು ಹರಡುವ ಸಾಧ್ಯತೆ ಇರುತ್ತದೆ.

ಶೀತ, ಸೋಂಕುಗಳು ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುವ ವೈರಲ್ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಶಾಲಾ ವಾತಾವರಣದಲ್ಲಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ. ಬಹುತೇಕ ಈ ಆರೋಗ್ಯ ಸಮಸ್ಯೆಗಳಿಗೆ ಶಾಲೆಗಳಲ್ಲಿ ಪಾಲಿಸದಿರುವ ನೈರ್ಮಲ್ಯ ಕ್ರಿಯೆಗಳೇ ಕಾರಣ. ಮಕ್ಕಳು ಸ್ವಾಭಾವಿಕವಾಗಿಯೇ ತಮ್ಮ ದಿನಚರಿಗಳನ್ನು ಕಳೆಯುತ್ತಾರೆ. ಆದರೆ ಅವರಿಗೆ ಅರಿವಿಲ್ಲದೆ ವೈರಾಣುಗಳ ಹರಡುವಿಕೆಗೆ ಕಾರಣಕರ್ತರಾಗಿರುತ್ತಾರೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ವಿನಯ್ ಹೊಸದುರ್ಗ.

ಇದನ್ನೂ ಓದಿ: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಮಗು ತನ್ನ ತಾಯಿಯನ್ನೇ ಕೊಂದಿದ್ದು ನಿಜವೇ?

ಕೈಗಳ ನೈರ್ಮಲ್ಯತೆ ಎಷ್ಟು ಮುಖ್ಯ?:

ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು, ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗಳಿಗೂ ಮೂಲವಾದದ್ದು ಕೈ ನೈರ್ಮಲ್ಯತೆಯನ್ನು ಕಾಪಾಡದಿರುವುದು. ಮಕ್ಕಳಲ್ಲಿ ಕೈಗಳ ನೈರ್ಮಲ್ಯತೆಯ ಅರಿವು ಮೂಡಿಸುವ ಮೂಲಕ ಸೋಂಕಿನ ಅಪಾಯಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ತಿನ್ನುವ ಮೊದಲು, ವಿಶ್ರಾಂತಿ ಕೊಠಡಿಯನ್ನು ಬಳಸಿದ ನಂತರ, ಸೀನುವಿಕೆ ಮತ್ತು ಕೆಮ್ಮಿದ ಬಳಿಕ ಕೈಗಳನ್ನು ಸ್ವಚ್ಛಗೊಳಿಸುವ ಅಭ್ಯಾಸಗಳನ್ನು ಕಡ್ಡಾಯವಾಗಿ ರೂಢಿಸಿಕೊಳ್ಳುವಂತೆ ತಿಳಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ವೈರಸ್ ಸೋಂಕು ಸೇರಿದಂತೆ ಜಠರಕ್ಕೆ ಸಂಬಂಧಿತ ಸೋಂಕಿನ ಸಮಸ್ಯೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೈಗಳನ್ನ ಶುದ್ಧವಾಗಿಟ್ಟುಕೊಳ್ಳುವುದರ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎನ್ನುತ್ತಾರೆ ಡಾ. ವಿನಯ್ ಹೊಸದುರ್ಗ.

ಕೈಗಳ ನೈರ್ಮಲ್ಯಕ್ಕಾಗಿ ಮಕ್ಕಳು ಅನುಸರಿಸಬೇಕಾದ ಕ್ರಮಗಳು:

1. ಮೊದಲು ಕೈಗಳನ್ನು ಸಂಪೂರ್ಣವಾಗಿ ಸೋಪಿನಿಂದ ಉಜ್ಜಿಕೊಳ್ಳಿ.

2. ಕೈಗಳಲ್ಲಿರುವ ಸೂಕ್ಷ್ಮಾಣುಗಳನ್ನು ತೊಡೆದುಹಾಕಲು 20 ಸೆಕೆಂಡುಗಳ ಕಾಲ ಸೋಪಿನಿಂದ ಕೈಗಳನ್ನು ಉಜ್ಜಿಕೊಳ್ಳಿ.

3. ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಸ್ವಚ್ಛವಾದ ಟವೆಲ್​ನಿಂದ ಒರೆಸಿಕೊಳ್ಳಿ.

4. ನಂತರ ಗಾಳಿಯಲ್ಲಿ ಒಣಗಲು ಬಿಡಿ.

5. ಒಂದು ವೇಳೆ ಸೋಪ್ ಲಭ್ಯವಿಲ್ಲದಿದ್ದರೆ ಕನಿಷ್ಠ 60% ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್​ಗಳನ್ನು ಬಳಸಬಹುದು.

ಇದನ್ನೂ ಓದಿ: Parenting Tips : ಪೋಷಕರೇ, ನೀವು ಈ ತಪ್ಪುಗಳನ್ನು ಮಾಡಿದ್ರೆ ಮಕ್ಕಳ ಭವಿಷ್ಯ ಹಾಳಾಗೊಂದು ಖಂಡಿತ

ಕೈಗಳ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಮೊದಲನೆಯ ಮೆಟ್ಟಿಲುಗಳಾಗಿ ಶಾಲೆಗಳು ಪಾತ್ರ ವಹಿಸುತ್ತವೆ. ಏಕೆಂದರೆ, ಶಾಲೆಯ ಆವರಣಗಳಲ್ಲಿ ಕೈ ತೊಳೆಯುವ ಕೇಂದ್ರಗಳನ್ನು ಆರಂಭಿಸುವುದು. ಸಾಬೂನು ಮತ್ತು ಸ್ಯಾನಿಟೈಜರ್ ಲಭ್ಯವಿರುವಂತೆ ಮಾಡುವುದು. ಶಾಲಾ ಆವರಣದ ಸುತ್ತಲೂ ಕೈ ನೈರ್ಮಲ್ಯತೆಯ ಅರಿವು ಫಲಕಗಳನ್ನು ಪ್ರದರ್ಶಿಸುವುದು. ಈ ತರಹದ ಉಪಕ್ರಮಗಳಿಂದ ಶಾಲೆಗಳಲ್ಲಿ ನೈರ್ಮಲ್ಯದ ವಾತಾವರಣವನ್ನು ಸೃಷ್ಟಿಸಬಹುದು. ದೈನಂದಿನ ಚಟುವಟಿಕೆಗಳಲ್ಲಿ ಕೈ ನೈರ್ಮಲ್ಯತೆಯ ಬಗೆಗೆ ಶಿಕ್ಷಣದಲ್ಲಿ ಅರಿವು ಮೂಡಿಸುವುದರಿಂದಲೂ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಲು ನೆರವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಶಾಲೆಗಳಲ್ಲಿ ರೋಗ ಹರಡುವಿಕೆಯನ್ನು ತಡೆಗಟ್ಟಲು ಕೈಗಳ ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸುವುದು ಪ್ರಬಲವಾದ ವಿಧಾನವಾಗಿದೆ. ಶಾಲಾ ವಾತಾವರಣದಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಶಿಕ್ಷಣ ಸಂಸ್ಥೆಗಳು ಅನಾರೋಗ್ಯವನ್ನು ತಡೆಗಟ್ಟಬಹುದು ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸಬಹುದು. ಮಕ್ಕಳಿಗೆ ಕೈಗಳ ನೈರ್ಮಲ್ಯವನ್ನು ಕಲಿಸುವುದರಿಂದ ಒಟ್ಟಾಗಿ ಬೆರೆತು ಆಡುವುದರಿಂದಲೂ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ಅನುಕೂಲವಾಗಲಿದೆ. ಅನಾರೋಗ್ಯವನ್ನು ತಡೆಗಟ್ಟಲು ಇದೊಂದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ