Baby Planning Yoga: ತಾಯಿಯಾಗಲು ತಯಾರಿ ನಡೆಸುತ್ತಿದ್ದರೆ ಪ್ರತಿದಿನ ಈ ಆಸನಗಳನ್ನು ಮಾಡಿ
ಗರ್ಭಧಾರಣೆಗೆ ನಾನಾ ರೀತಿಯಲ್ಲಿ ಕಾಳಜಿ ವಹಿಸುವುದು ಅವಶ್ಯಕ. ಜೊತೆಗೆ ಸಂತಾನೋತ್ಪತ್ತಿ ಅಂಗಗಳು ಆರೋಗ್ಯಕರ ಮತ್ತು ಬಲಶಾಲಿಯಾಗಿರುವುದಲ್ಲದೆ ಗರ್ಭಧರಿಸುವ ಸಾಮರ್ಥ್ಯವನ್ನು ಹೊಂದಿರುವುದು ಅಷ್ಟೇ ಮುಖ್ಯ. ಅದರಲ್ಲಿಯೂ ಈ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಹಲವಾರು ಕಾರಣಗಳಿರಬಹುದು. ಹಾಗಾಗಿ ಗರ್ಭಧರಿಸಲು ಯೋಜಿಸುತ್ತಿರುವ ಮಹಿಳೆಯರು ತಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಮಾಡಲು ಪ್ರಾರಂಭಿಸಬೇಕು. ಇದು ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರೋಗ್ಯಕರ ಗರ್ಭಧಾರಣೆಗೆ ನಾನಾ ರೀತಿಯಲ್ಲಿ ಕಾಳಜಿ ವಹಿಸುವುದು ಅವಶ್ಯಕ. ಜೊತೆಗೆ ಸಂತಾನೋತ್ಪತ್ತಿ ಅಂಗಗಳು ಆರೋಗ್ಯಕರ ಮತ್ತು ಬಲಶಾಲಿಯಾಗಿರುವುದಲ್ಲದೆ ಗರ್ಭಧರಿಸುವ ಸಾಮರ್ಥ್ಯವನ್ನು ಹೊಂದಿರುವುದು ಅಷ್ಟೇ ಮುಖ್ಯ. ಅದರಲ್ಲಿಯೂ ಈ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಹಲವಾರು ಕಾರಣಗಳಿರಬಹುದು. ಹಾಗಾಗಿ ಗರ್ಭಧರಿಸಲು ಯೋಜಿಸುತ್ತಿರುವ ಮಹಿಳೆಯರು ತಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಮಾಡಲು ಪ್ರಾರಂಭಿಸಬೇಕು. ಇದು ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬದ್ಧ ಕೋನಾಸನ: ಇದು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು ಗರ್ಭಧರಿಸಲು ಪ್ರಯತ್ನಿಸುತ್ತಿರುವವರು ಈ ಯೋಗಾಸನವನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಅದಲ್ಲದೆ ಇದು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಗರ್ಭಧಾರಣೆಗೆ ಸಹಾಯ ಮಾಡುತ್ತದೆ. ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುತ್ತದೆ. ಫಲವತ್ತತೆಯನ್ನು ಹೆಚ್ಚಿಸಲು ಇದು ಉತ್ತಮ ಯೋಗಾಸನವಾಗಿದ್ದು, ಗರ್ಭಿಣಿಯಾಗಲು ಬಯಸುವವರು ಇದನ್ನು ಮಾಡಬಹುದು. ಇದಲ್ಲದೆ, ಈ ಯೋಗಾಸನವನ್ನು ಗರ್ಭಾವಸ್ಥೆಯಲ್ಲಿ ಮಾಡಿದರೆ, ದೌರ್ಬಲ್ಯ, ಆಯಾಸವನ್ನು ತಡೆಯುತ್ತದೆ ಮತ್ತು ನಿಮ್ಮ ಹೆರಿಗೆಯನ್ನು ಸುಲಭಗೊಳಿಸುತ್ತದೆ.
ಮಾಲಾಸನ: ಗರ್ಭಿಣಿಯಾಗಲು ಬಯಸುತ್ತಿರುವವರು, ಮೊದಲು ನಿಮ್ಮ ದೈನಂದಿನ ದಿನಚರಿಯಲ್ಲಿ ಮಾಲಾಸನವನ್ನು ಮಾಡಬೇಕು. ಈ ಯೋಗಾಸನವನ್ನು ಮಾಡುವುದರಿಂದ, ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಪೆಲ್ವಿಕ್ ಪ್ರದೇಶ ಅಂದರೆ ಹೊಟ್ಟೆಯ ಕೆಳಭಾಗವು ಬಲಗೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಈ ಯೋಗಾಸನವು ಪ್ರಯೋಜನಕಾರಿಯಾಗಿದೆ. ಈ ಆಸನವನ್ನು ಮುಟ್ಟಿನ ಸಮಯದಲ್ಲಿಯೂ ಮಾಡಬಹುದಾಗಿದೆ.
ಅರ್ಧ ಹಾಲಾಸನ (ಅರ್ಧ ನೇಗಿಲು ಭಂಗಿ): ಗರ್ಭಿಣಿಯಾಗಲು ಬಯಸುವವರು ತಮ್ಮ ದೈನಂದಿನ ದಿನಚರಿಯಲ್ಲಿ ಅರ್ಧ ಹಾಲಾಸನವನ್ನು ಮಾಡಬಹುದು. ಈ ಆಸನವನ್ನು ಮಾಡುವುದರಿಂದ ಮೊಟ್ಟೆಗಳ ಗುಣಮಟ್ಟ ಸುಧಾರಿಸುತ್ತದೆ ಮತ್ತು ಅಂಡೋತ್ಪತ್ತಿ ಸುಲಭವಾಗುತ್ತದೆ. ಈ ಆಸನವು ಪೆಲ್ವಿಕ್ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಈ ಆಸನ ಮಾಡುವುದರಿಂದ ನಿಮ್ಮ ಒತ್ತಡವೂ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳ ರೋಗ ಹರಡುವಿಕೆ ತಡೆಗಟ್ಟಲು ಏನು ಮಾಡಬೇಕು?
ವೀರ ಭದ್ರಾಸನ: ಮಹಿಳೆಯರು ಸಹ ಯೋಧನ ಭಂಗಿ ಅಥವಾ ವೀರಭದ್ರಾಸನ ಮಾಡಬೇಕು. ಈ ಯೋಗಾಸವು ದೇಹದ ಮುಖ್ಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕಿಬ್ಬೊಟ್ಟೆಯ ಅಂಗಗಳನ್ನು ಆರೋಗ್ಯವಾಗಿಡಲು ಹಾಗೂ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಆಸನವನ್ನು ಪ್ರತಿದಿನ ಮಾಡುವುದರಿಂದ, ಮೆದುಳಿಗೂ ಪ್ರಯೋಜನವಾಗುತ್ತದೆ. ಜೊತೆಗೆ ಒತ್ತಡವನ್ನು ನಿವಾರಣೆ ಮಾಡುತ್ತದೆ.
ಸೂಚನೆ: ಈ ಆಸನಗಳನ್ನು ಆರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸರಿಯಾದ ಮಾಹಿತಿ ಪಡೆದುಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ