Hodgkin Lymphoma: ಮಕ್ಕಳಲ್ಲಿ ಕಂಡುಬರುವ ಅಪರೂಪದ ರಕ್ತದ ಕ್ಯಾನ್ಸರ್​​ನ ಮಾಹಿತಿ ಇಲ್ಲಿ ತಿಳಿದುಕೊಳ್ಳಿ

ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪ್ರಭಾವ ಬೀರುವ ಹಾಡ್ಗ್ಕಿನ್ ಲಿಂಫೋಮಾ ಸಾಮಾನ್ಯವಾಗಿ ದುಗ್ಧರಸ ಗ್ರಂಥಿಗಳ ನೋವುರಹಿತ ಊತ, ಆಯಾಸ, ಜ್ವರ, ರಾತ್ರಿ ಬೆವರುವಿಕೆ ಮತ್ತು ವಿವರಿಸಲಾಗದ ತೂಕ ನಷ್ಟದಂತಹ ರೋಗಲಕ್ಷಣಗಳೊಂದಿಗೆ ಇರುತ್ತದೆ. ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಇದಕ್ಕೆ ಚಿಕಿತ್ಸೆ ನೀಡಿ ತಡೆಗಟ್ಟಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

Hodgkin Lymphoma: ಮಕ್ಕಳಲ್ಲಿ ಕಂಡುಬರುವ ಅಪರೂಪದ ರಕ್ತದ ಕ್ಯಾನ್ಸರ್​​ನ ಮಾಹಿತಿ ಇಲ್ಲಿ ತಿಳಿದುಕೊಳ್ಳಿ
Childhood hodgkin lymphoma
Image Credit source: cancer.gov

Updated on: Sep 24, 2023 | 10:39 AM

ಮಕ್ಕಳ ಲಿಂಫೋಮಾ ಎಂದೂ ಕರೆಯಲ್ಪಡುವ ಬಾಲ್ಯದ ಹಾಡ್ಗ್‌ಕಿನ್ ಲಿಂಫೋಮಾ(Hodgkin Lymphoma) ರಕ್ತದ ಕ್ಯಾನ್ಸರ್‌ನ ಒಂದು ಅಪರೂಪದ ರೂಪವಾಗಿದೆ. ಇದು ಪ್ರಾಥಮಿಕವಾಗಿ ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪರಿಣಾಮ ಬೀರುತ್ತದೆ. ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್‌ಪೋರ್ಟ್ ರಸ್ತೆಯ ಮೂಳೆ ಮಜ್ಜೆಯ ಕಸಿ ಸಲಹೆಗಾರ ಡಾ ಮಲ್ಲಿಕಾರ್ಜುನ ಶೆಟ್ಟಿ , “ಹಾಡ್ಗ್‌ಕಿನ್ ಲಿಂಫೋಮಾದ ಅನೇಕ ಪ್ರಕರಣಗಳು ಎಪ್ಸ್ಟೀನ್-ಬಾರ್ ವೈರಸ್‌ಗೆ ಸಂಬಂಧಿಸಿವೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ದುಗ್ಧರಸ ವ್ಯವಸ್ಥೆಯಲ್ಲಿ ಹುಟ್ಟಿಕೊಳ್ಳುತ್ತವೆ ” ಎಂದು ಹೇಳಿದ್ದಾರೆ.

ಪರಿಣಾಮಕಾರಿ ಚಿಕಿತ್ಸೆಗಾಗಿ ಹಾಡ್ಗ್ಕಿನ್ ಲಿಂಫೋಮಾವನ್ನು ಅದರ ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚುವುದು ಬಹಳ ಮುಖ್ಯ. ಸಾಮಾನ್ಯವಾಗಿ ದುಗ್ಧರಸ ಗ್ರಂಥಿಗಳ ನೋವುರಹಿತ ಊತ, ಆಯಾಸ, ಜ್ವರ, ರಾತ್ರಿ ಬೆವರುವಿಕೆ ಮತ್ತು ವಿವರಿಸಲಾಗದ ತೂಕ ನಷ್ಟದಂತಹ ರೋಗಲಕ್ಷಣಗಳೊಂದಿಗೆ ಇರುತ್ತದೆ. ನಿಖರವಾದ ಕಾರಣ ತಿಳಿದಿಲ್ಲವಾದರೂ, ಇದು ಆನುವಂಶಿಕ ಪ್ರವೃತ್ತಿ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುವ ಸಾಧ್ಯತೆಯಿದೆ ಎಂದು ಡಾ ಮಲ್ಲಿಕಾರ್ಜುನ ಅವರು ವಿವರಿಸಿದ್ದಾರೆ.

ಬಾಲ್ಯದ ಹಾಡ್ಗ್ಕಿನ್ ಲಿಂಫೋಮಾ ರೋಗನಿರ್ಣಯ:

ಬಾಲ್ಯದ ಹಾಡ್ಗ್‌ಕಿನ್ ಲಿಂಫೋಮಾ ರೋಗನಿರ್ಣಯವು ವೈದ್ಯಕೀಯ ಪರೀಕ್ಷೆಗಳ ಸರಣಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ ದೈಹಿಕ ಪರೀಕ್ಷೆಗಳು, ರಕ್ತ ಪರೀಕ್ಷೆಗಳು, ಪಿಇಟಿ CT ಸ್ಕ್ಯಾನ್‌ಗಳಂತಹವು ಮತ್ತು ರೋಗನಿರ್ಣಯವನ್ನು ಖಚಿತಪಡಿಸಲು ಬಯಾಪ್ಸಿ ಮುಂತಾದ ಸಾಕಷ್ಟು ಪರೀಕ್ಷೆಗಳು ಸೇರಿವೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್ ಲಕ್ಷಣ, ಕಾರಣ, ಪರಿಣಾಮ ಮತ್ತು ನಿರ್ವಹಣೆ ಮಾಹಿತಿ ಇಲ್ಲಿದೆ

ಚಿಕಿತ್ಸೆಯ ತಂತ್ರಗಳು:

ಕಳೆದ ಕೆಲವು ವರ್ಷಗಳಿಂದ ಹಾಡ್ಗ್ಕಿನ್ ಲಿಂಫೋಮಾದ ಚಿಕಿತ್ಸಾ ತಂತ್ರಗಳು ಗಣನೀಯವಾಗಿ ಸುಧಾರಿಸಿದೆ.ಪ್ರಾಥಮಿಕ ಚಿಕಿತ್ಸೆಯು ಕೀಮೋಥೆರಪಿಯಾಗಿ ,ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಲು ಮತ್ತು ನಾಶಮಾಡಲು ಔಷಧಿಗಳ ಸಂಯೋಜನೆಯನ್ನು ಬಳಸುತ್ತದೆ. ಆದಾಗ್ಯೂ, ಚಿಕಿತ್ಸೆಯ ಆಯ್ಕೆಯು ರೋಗಿಯ ವಯಸ್ಸು, ಕ್ಯಾನ್ಸರ್ನ ಹಂತ ಮತ್ತು ಒಟ್ಟಾರೆ ಆರೋಗ್ಯದಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: