Cervical cancer; ಗರ್ಭಕಂಠದ ಕ್ಯಾನ್ಸರ್ ಲಕ್ಷಣ, ಕಾರಣ, ಪರಿಣಾಮ ಮತ್ತು ನಿರ್ವಹಣೆ ಮಾಹಿತಿ ಇಲ್ಲಿದೆ

Cervical cancer, Symptoms and causes; ಗರ್ಭಕಂಠದ ಕ್ಯಾನ್ಸರ್​ಗೆ ಸಾಮಾನ್ಯ ಕಾರಣವೆಂದರೆ ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ (ಎಚ್‌ಪಿವಿ) ಉಂಟಾಗುವ ದೀರ್ಘಕಾಲದ ಸೋಂಕು. ಈ ವೈರಸ್ ಲೈಂಗಿಕ ಕ್ರಿಯೆಯಿಂದಾಗಿ ಹರಡುತ್ತದೆ ಮತ್ತು ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಕನಿಷ್ಠ ಅರ್ಧದಷ್ಟು ಜನರು ತಮ್ಮ ಜೀವನದ ಒಂದು ಹಂತದಲ್ಲಿ ಎಚ್‌ಪಿವಿ ಸೋಂಕಿಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ.

Cervical cancer; ಗರ್ಭಕಂಠದ ಕ್ಯಾನ್ಸರ್ ಲಕ್ಷಣ, ಕಾರಣ, ಪರಿಣಾಮ ಮತ್ತು ನಿರ್ವಹಣೆ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Sep 22, 2023 | 7:19 PM

ಗರ್ಭಕಂಠವು ಯೋನಿಯೊಂದಿಗಿರುವ ಗರ್ಭಾಶಯದ ಕೆಳಗಿನ ಕಿರಿದಾದ ತುದಿಯಾಗಿದೆ. ಗರ್ಭಾಶಯದ ಈ ಭಾಗವನ್ನು ಒಳಗೊಳ್ಳುವ ಜೀವಕೋಶಗಳು ಕ್ಯಾನ್ಸರ್‌ಕಾರನ ನಿಯೋಪ್ಲಾಸ್ಟಿಕ್‌ಗೆ ತುತ್ತಾದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ (Cervical cancer) ಎಂದು ಕರೆಯುತ್ತೇವೆ. ಗರ್ಭಕಂಠದ ಕ್ಯಾನ್ಸರ್ ಇರುವ ಸ್ಥಳವು ಸಾಮಾನ್ಯವಾಗಿ ಎಂಡೋ ಗರ್ಭಕಂಠವು ಎಕ್ಟೋ ಗರ್ಭಕಂಠವನ್ನು ಸಂಧಿಸುವ ಜಾಗವಾಗಿದೆ. ಇದನ್ನು ಸಾಮಾನ್ಯವಾಗಿ “ರೂಪಾಂತರ ವಲಯ” ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿನ ಸ್ಕ್ವಾಮಸ್ ಸೆಲ್ ಎಪಿಥೇಲಿಯಾವು ಈ ಮಾರಣಾಂತಿಕ ಬದಲಾವಣೆಗೆ ಒಳಗಾಗುತ್ತದೆ.

ಗರ್ಭಾಶಯದ ಈ ಭಾಗವು ಹೇಗೆ ಮತ್ತು ಏಕೆ ಕ್ಯಾನ್ಸರ್‌ಗೆ ತುತ್ತಾಗುತ್ತದೆ?

ಸಾಮಾನ್ಯ ಕಾರಣವೆಂದರೆ ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ (ಎಚ್‌ಪಿವಿ) ಉಂಟಾಗುವ ದೀರ್ಘಕಾಲದ ಸೋಂಕು. ಈ ವೈರಸ್ ಲೈಂಗಿಕ ಕ್ರಿಯೆಯಿಂದಾಗಿ ಹರಡುತ್ತದೆ ಮತ್ತು ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಕನಿಷ್ಠ ಅರ್ಧದಷ್ಟು ಜನರು ತಮ್ಮ ಜೀವನದ ಒಂದು ಹಂತದಲ್ಲಿ ಎಚ್‌ಪಿವಿ ಸೋಂಕಿಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್, ಎಚ್‌ಪಿವಿ ಸೋಂಕು ತುಂಬಾ ಪ್ರಚಲಿತವಾಗಿದ್ದರೂ ಕೂಡ, ಅವುಗಳಲ್ಲಿ ಒಂದು ಸಣ್ಣ ಭಾಗ ಮಾತ್ರ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸರಾಸರಿ ವಯಸ್ಸು 45-50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಭಾರತದಲ್ಲಿ, ಗರ್ಭಕಂಠದ ಕ್ಯಾನ್ಸರ್ ಮೂರನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಮತ್ತು ಮರಣಕ್ಕೆ ಕಾರಣವಾಗುವ ಕ್ಯಾನ್ಸರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಅದಕ್ಕಿಂತ ಹೆಚ್ಚಾಗಿ, ಜಗತ್ತಿನ ಗರ್ಭಕಂಠದ ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಜನರು ಭಾರತದವರು ಎಂದು ಅಂದಾಜಿಸಲಾಗಿದೆ – ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರು ಗರ್ಭಕಂಠದ ಕ್ಯಾನ್ಸರ್ ಹೊಂದಿರುವ ಸಾಧ್ಯತೆಯಿದೆ. ಅಲ್ಲದೆ, ಈ ರೋಗಿಗಳಲ್ಲಿ ಬಹುಪಾಲು, ಅಂದರೆ ಅವರಲ್ಲಿ 60% ಕ್ಕಿಂತ ಹೆಚ್ಚು ಮಂದಿ ಕ್ಯಾನ್ಸರ್‌ ಅಭಿವೃದ್ಧಿಗೊಂಡ ನಂತರ ವೈದ್ಯರ ಬಳಿ ಹೋಗುತ್ತಾರೆ. ‌ಹೀಗಾಗಿ ರೋಗಿಯನ್ನು ಉಳಿಸಿಕೊಳ್ಳುವುದು ಕಷ್ಟ ಮತ್ತು ಚಿಕಿತ್ಸೆ ವೆಚ್ಚವೂ ದುಬಾರಿ.

ಈ ಕ್ಯಾನ್ಸರ್ ತಡೆಗಟ್ಟಲು ಸಾಧ್ಯವಿಲ್ಲವೇ?

ಇದು ಲಸಿಕೆ ಹೊಂದಿರುವ ವೈರಸ್‌ನಿಂದ ಉಂಟಾಗುತ್ತದೆ. ಹದಿಹರೆಯದಲ್ಲಿಯೇ ಮಹಿಳೆಯರಿಗೆ ಈ ಲಸಿಕೆ ಹಾಕುವುದರಿಂದ ಈ ಕ್ಯಾನ್ಸರ್ ಬರದಂತೆ ತಡೆಯಬಹುದು. ಆದರೆ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಕಾರ್ಯಕ್ರಮವು ಸರ್ಕಾರಕ್ಕೆ ಸಾಕಷ್ಟು ವೆಚ್ಚದಾಯಕವಾಗಿದೆ. ಹೀಗಾಗಿ ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಲಸಿಕೆ ಕಾರ್ಯಕ್ರಮ ಉತ್ತಮ. 9 ರಿಂದ 26 ವರ್ಷ ವಯಸ್ಸಿನ ಎಲ್ಲಾ ಸ್ತ್ರೀ ಮತ್ತು ಪುರುಷರು ಲಸಿಕೆಯನ್ನು ಪಡೆದರೆ ಗರ್ಭಕಂಠದ ಕ್ಯಾನ್ಸರ್‌ನ ಭವಿಷ್ಯದ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತವೆ. 11-13 ವರ್ಷ ವಯಸ್ಸಿನಲ್ಲಿ ಈ ಲಸಿಕೆ ಪಡೆಯಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. 26 ವರ್ಷ ವಯಸ್ಸಿನ ನಂತರ ಲೈಂಗಿಕ ಜೀವನವನ್ನು ನಿರ್ಧರಿಸುತ್ತದೆ ಮತ್ತು ಆ ವಯಸ್ಸಿನಲ್ಲಿ ಲಸಿಕೆಯಿಂದ ಹೆಚ್ಚು ಪ್ರಯೋಜನವಿಲ್ಲ. ಗಂಡು ಮತ್ತು ಹೆಣ್ಣು ಇಬ್ಬರೂ ಆದರ್ಶಪ್ರಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದನ್ನು ಗಮನಿಸಬೇಕು. ಲೈಂಗಿಕವಾಗಿ ಸಕ್ರಿಯವಾಗಿರುವ ಪುರುಷರಿಗೆ ತಾವು ಎಚ್‌ಪಿವಿ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದೇವೆ ಎಂದು ತಿಳಿದಿರುವುದಿಲ್ಲ ಮತ್ತು ಅದು ಭವಿಷ್ಯದಲ್ಲಿ ಶಿಶ್ನ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು. ಅತ್ಯಂತ ತಡವಾದ ಚಿಕಿತ್ಸೆ ಸಾವಿಗೂ ದಾರಿ ಮಾಡಿಕೊಡಬಹುದು.

ಇದನ್ನೂ ಓದಿ: Mushrooms: ಅಣಬೆಗಳಿಂದ ಯಾವೆಲ್ಲ ಆರೋಗ್ಯ ಪ್ರಯೋಜನಗಳಿವೆ ಎಂಬುದು ತಿಳಿದಿದೆಯಾ? ಮಾಹಿತಿ ಇಲ್ಲಿದೆ

ಒಂದೆಡೆ ಎಚ್‌ಪಿವಿ ವಿರುದ್ಧ ವ್ಯಾಕ್ಸಿನೇಷನ್ ಭವಿಷ್ಯದ ಅಪಾಯವನ್ನು ತಡೆಗಟ್ಟುತ್ತದೆ. ಈ ಕ್ಯಾನ್ಸರ್ ಅನ್ನು ಸಮಯೋಚಿತವಾಗಿ ಪತ್ತೆಹಚ್ಚುವುದು ದುಬಾರಿಯಲ್ಲದ ಚಿಕಿತ್ಸೆ ನೀಡಲು ಸಹಕಾರಿ.

ಪರೀಕ್ಷೆ ಹೇಗೆ?

PAP ಸ್ಮೀಯರ್ ಈ ರೋಗ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅತ್ಯಂತ ಸರಳ ಮತ್ತು ಕಡಿಮೆ-ವೆಚ್ಚದ ಪರೀಕ್ಷೆಯಾಗಿದೆ, ಹೊರರೋಗಿ ಆಧಾರಿತ ಮತ್ತು ಇದರಲ್ಲಿ ಯಾವುದೇ ದುಬಾರಿ ಉಪಕರಣಗಳನ್ನು ಬಳಸುವುದಿಲ್ಲ ಮತ್ತು ಸುಲಭವಾಗಿ ಮಾಡಬಹುದಾದ ಪರೀಕ್ಷೆ. ಗರ್ಭಕಂಠ ಮತ್ತು ಯೋನಿಯ ಜಂಕ್ಷನ್‌ನಿಂದ ಸ್ಮೀಯರ್ ಅನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ವಿಶೇಷ ಮಾರ್ಕ್‌ಗಳನ್ನು ಬಳಸಿಕೊಂಡು ರೋಗಶಾಸ್ತ್ರಜ್ಞರು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುತ್ತಾರೆ. ಇದನ್ನು ಸಾಮಾನ್ಯವಾಗಿ 20- 65 ವರ್ಷ ವಯಸ್ಸಿನ ನಡುವೆ 3-5 ವರ್ಷಗಳ ಆವರ್ತಕ ಮಧ್ಯಂತರಗಳಲ್ಲಿ ಎಚ್‌ಪಿವಿ ಪರೀಕ್ಷೆಯೊಂದಿಗೆ ಅಥವಾ ಅದಿಲ್ಲದೆ ಶಿಫಾರಸು ಮಾಡಲಾಗುತ್ತದೆ. ಕ್ಯಾನ್ಸರ್‌ ಆರಂಭಿಕ ಪತ್ತೆಯೇ ಅತ್ಯುತ್ತಮ ಚಿಕಿತ್ಸೆಯಾಗಿದೆ. ಹಂತ ದಾಟಿದ ನಂತರ ಇದನ್ನು ಗುಣಮಪಡಿಸುವುದು ಕಷ್ಟ.

ಡಾ. ನಿತಿ ರೈಜಾಡಾ, ಎಂಡಿ, ಡಿಎನ್​ಬಿ, ಡಿಎಂ, ಇಸಿಎಂಒ, ಎಂಆರ್​ಸಿಪಿ (UK) ಇಎಂಪಿಎಚ್​​ (US)

(ಲೇಖಕರು: ಹಿರಿಯ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ, ಫೋರ್ಟಿಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ರಿಚ್ಮಂಡ್ ರಸ್ತೆ ಬೆಂಗಳೂರು)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ