ನಿಮ್ಮ ಮಕ್ಕಳನ್ನು ಶೀತ, ಮಾಲಿನ್ಯದಿಂದ ಕಾಪಾಡುವ 5 ಮಾರ್ಗಗಳು ಇಲ್ಲಿವೆ

|

Updated on: Dec 19, 2023 | 2:58 PM

ಚಳಿಗಾಲದಲ್ಲಿ ಮಕ್ಕಳಿಗೆ ಸೂಕ್ತವಾದ ಬಟ್ಟೆ ಹಾಕಿ. ಬೆಚ್ಚಗಿನ ಉಡುಪು ಹಾಕುವುದರಿಂದ ಮಕ್ಕಳ ದೇಹ ಬೆಚ್ಚಗಿರುತ್ತದೆ. ಇದು ಅವರನ್ನು ಶೀತದಿಂದ ರಕ್ಷಣೆ ಮಾಡುತ್ತದೆ. ಕೊರೆಯುವ ಚಳಿಯಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಜಾಕೆಟ್‌ಗಳು, ಟೋಪಿಗಳು, ಗ್ಲೌಸ್ ಮತ್ತು ಸ್ಕಾರ್ಫ್‌ಗಳನ್ನು ಹಾಕಿರಿ.

ನಿಮ್ಮ ಮಕ್ಕಳನ್ನು ಶೀತ, ಮಾಲಿನ್ಯದಿಂದ ಕಾಪಾಡುವ 5 ಮಾರ್ಗಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಶೀತ ಹವಾಮಾನ ಮತ್ತು ಪರಿಸರ ಮಾಲಿನ್ಯಕಾರಕಗಳೆರಡರ ಪರಿಣಾಮಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅಗತ್ಯ. ಈಗಂತೂ ಚಳಿಗಾಲವಾದ್ದರಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ಸಾಮಾನ್ಯ. ಅದರ ಜೊತೆಗೆ ವಾಯು ಮಾಲಿನ್ಯದ ಮಟ್ಟವೂ ಹೆಚ್ಚಾಗುತ್ತಿದೆ. ಹೀಗಾಗಿ, ಮಕ್ಕಳ ಆರೋಗ್ಯವನ್ನು ಶೀತ ಮತ್ತು ಮಾಲಿನ್ಯದ ಪರಿಣಾಮ ಕಾಪಾಡುವ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.

ಮಕ್ಕಳ ಶ್ವಾಸಕೋಶ ಬೆಳವಣಿಗೆಯ ಹಂತದಲ್ಲಿರುತ್ತವೆ. ಅವರ ಪ್ರತಿರಕ್ಷಣಾ ವ್ಯವಸ್ಥೆಗಳು ಕೂಡ ಇನ್ನೂ ಬೆಳೆದಿರುವುದಿಲ್ಲ. ಹೀಗಾಗಿ, ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳ ಮೇಲೆ ಶೀತ ಹವಾಮಾನ ಮತ್ತು ಮಾಲಿನ್ಯ ಎರಡರ ಹಾನಿಕಾರಕ ಪರಿಣಾಮಗಳು ಹೆಚ್ಚಾಗಿರುತ್ತವೆ. ಈ ಪರಿಸ್ಥಿತಿಗಳಲ್ಲಿ ಮಕ್ಕಳು ಸಾಮಾನ್ಯವಾಗಿ ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಕೆಮ್ಮು, ಶೀತಗಳು ಮತ್ತು ಆಸ್ತಮಾದಂತಹ ಕಾಯಿಲೆಗಳಿಂದ ಅವರನ್ನು ರಕ್ಷಿಸಬೇಕಾದ ಜವಾಬ್ದಾರಿ ಪೋಷಕರದ್ದು.

ಶೀತ ಮತ್ತು ಮಾಲಿನ್ಯದಿಂದ ಮಕ್ಕಳನ್ನು ರಕ್ಷಿಸಲು ಸಲಹೆಗಳು ಇಲ್ಲಿವೆ:

ಬೆಚ್ಚಗಿನ ಉಡುಪು ಹಾಕಿ:

ಚಳಿಗಾಲದಲ್ಲಿ ಮಕ್ಕಳಿಗೆ ಸೂಕ್ತವಾದ ಬಟ್ಟೆ ಹಾಕಿ. ಬೆಚ್ಚಗಿನ ಉಡುಪು ಹಾಕುವುದರಿಂದ ಮಕ್ಕಳ ದೇಹ ಬೆಚ್ಚಗಿರುತ್ತದೆ. ಇದು ಅವರನ್ನು ಶೀತದಿಂದ ರಕ್ಷಣೆ ಮಾಡುತ್ತದೆ. ಕೊರೆಯುವ ಚಳಿಯಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಜಾಕೆಟ್‌ಗಳು, ಟೋಪಿಗಳು, ಗ್ಲೌಸ್ ಮತ್ತು ಸ್ಕಾರ್ಫ್‌ಗಳನ್ನು ಹಾಕಿರಿ.

ಇದನ್ನೂ ಓದಿ: ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆ ಹೆಚ್ಚಿಸುವ 7 ಆಹಾರಗಳಿವು

ಒಳಾಂಗಣ ಗಾಳಿಯ ಗುಣಮಟ್ಟ:

ಒಳಾಂಗಣ ಗಾಳಿಯ ಗುಣಮಟ್ಟವು ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಮಾಲಿನ್ಯಕಾರಕಗಳು ಮತ್ತು ಅಲರ್ಜಿ ಉಂಟುಮಾಡುವ ಸಾಧ್ಯತೆಗಳನ್ನು ತೊಡೆದುಹಾಕಲು ಏರ್ ಪ್ಯೂರಿಫೈಯರ್​ಗಳನ್ನು ತರಿಸಿಕೊಳ್ಳಿ. ಮಕ್ಕಳಿರುವ ಜಾಗದಲ್ಲಿ ಚೆನ್ನಾಗಿ ಗಾಳಿ ಇರುವಂತೆ ನೋಡಿಕೊಳ್ಳಿ. ಮನೆಯ ಒಳಗೆ ಧೂಮಪಾನ ಮಾಡಬೇಡಿ. ಧೂಳು ಮತ್ತು ಅಲರ್ಜಿಯನ್ನು ಕಡಿಮೆ ಮಾಡಲು ಕಾರ್ಪೆಟ್‌ಗಳು, ಪರದೆಗಳು ಮತ್ತು ಹಾಸಿಗೆಯ ಬೆಡ್​ಶೀಟ್​ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ.

ಆರೋಗ್ಯಕರ ಪೋಷಣೆ:

ನಿಮ್ಮ ಮಗುವಿನ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇರಿಸಿ. ಬೆಚ್ಚಗಿನ ಊಟವನ್ನು ಬಡಿಸಿ. ಸೂಪ್ ಮತ್ತು ಗಿಡಮೂಲಿಕೆ ಚಹಾಗಳಂತಹ ಬಿಸಿ ಪಾನೀಯಗಳನ್ನು ಹೆಚ್ಚು ನೀಡಿ.

ಹೊರಾಂಗಣ ರಕ್ಷಣಾ ಕ್ರಮಗಳು:

ಮಕ್ಕಳ ಬೆಳವಣಿಗೆಗೆ ಹೊರಾಂಗಣ ಆಟವು ಅತ್ಯಗತ್ಯವಾದರೂ ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದ ಅವರನ್ನು ರಕ್ಷಿಸಬೇಕಾದುದು ಅಗತ್ಯ. ಹೆಚ್ಚು ಮಾಲಿನ್ಯದ ಸಮಯದಲ್ಲಿ ಮಕ್ಕಳನ್ನು ಹೊರಗೆ ಆಡಲು ಬಿಡಬೇಡಿ. ಹೊರಗೆ ಹೋಗುವಾಗ ಮಕ್ಕಳಿಗೆ ಮಾಸ್ಕ್ ಹಾಕಲು ಮರೆಯಬೇಡಿ.

ಇದನ್ನೂ ಓದಿ: ಮಕ್ಕಳಲ್ಲಿ ಬಾಯಿಯ ಹುಣ್ಣು ಉಂಟಾಗದಂತೆ ತಡೆಯುವುದು ಹೇಗೆ?

ನೈರ್ಮಲ್ಯದ ಅಭ್ಯಾಸಗಳು:

ಮಕ್ಕಳಿಗೆ ಉತ್ತಮ ನೈರ್ಮಲ್ಯದ ಅಭ್ಯಾಸಗಳನ್ನು ಕಲಿಸಿ. ನಿಯಮಿತವಾಗಿ ಮಕ್ಕಳ ಕೈ ತೊಳೆಯುವುದರಿಂದ ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗುಗಳನ್ನು ಮುಚ್ಚಿಕೊಳ್ಳಲು ಕಲಿಸಿ. ಈ ಸರಳ ಅಭ್ಯಾಸಗಳು ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ