
ಆಸ್ಪತ್ರೆ (Hospital) ಗಳಲ್ಲಿ ರೋಗಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು, ಒಂದು ಬೆಡ್ ನಿಂದ ಇನ್ನೊಂದು ಬೆಡ್ ನಲ್ಲಿ ಮಲಗಿಸುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಕೆಲವೊಮ್ಮೆ ಅವರನ್ನು ಎತ್ತಿ ಮಲಗಿಸುವುದು ಅಸಾಧ್ಯ ಎನಿಸಿಬಿಡುತ್ತದೆ. ಅದಲ್ಲದೆ ಒಬ್ಬ ವ್ಯಕ್ತಿ ಓಡಾಡಲು ಸಾಧ್ಯವಿಲ್ಲದಾಗ ಅವನನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗಲು ಬಹಳ ಕಷ್ಟವಾಗುತ್ತದೆ. ಆದರೆ ಚೀನಾ (China) ಇದಕ್ಕೆ ಒಂದೊಳ್ಳೆ ಪರಿಹಾರ (Solution) ಕಂಡುಕೊಂಡಿದೆ. ಆಸ್ಪತ್ರೆಗಳಲ್ಲಿ ಇಂತಹ ಬೆಡ್ (Bed) ಇದ್ದರೆ ಯಾವ ರೋಗಿಯನ್ನು ಎತ್ತಿ ಮಲಗಿಸಬೇಕಾದ ಅವಶ್ಯಕೆತೆಯೇ ಇರುವುದಿಲ್ಲ. ಚೀನಾ ಆಸ್ಪತ್ರೆಯಲ್ಲಿ ಕಂಡು ಬಂದಿರುವ ಈ ಹಾಸಿಗೆಯು, ರೋಗಿಯನ್ನು ಕೆಲವೇ ನಿಮಿಷಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಲಗಿಸಲು ಸಹಾಯ ಮಾಡುತ್ತದೆ. ಹಾಗಾದರೆ ಇದರಲ್ಲೇನಿದೆ ವಿಶೇಷತೆ? ರೋಗಿಗೆ ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.
ಚೀನಾದಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಒಂದು ಹಾಸಿಗೆಯಿಂದ ಮತ್ತೊಂದು ಹಾಸಿಗೆ ಯಾವುದೇ ರೀತಿಯ ತೊಂದರೆಗಳಿಲ್ಲದೆ ವರ್ಗಾಯಿಸಲು ಒಂದು ಹಾಸಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಹಾಸಿಗೆ ರೋಗಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಮಾಡುವುದು ಮಾತ್ರವಲ್ಲ, ಅನೇಕ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಹಾಗಾದರೆ ಹೇಗಿದೆ ಈ ರಿಮೋಟ್ ಕಂಟ್ರೋಲ್ ಹಾಸಿಗೆ? ಏನಿದರ ವಿಶೇಷತೆ ಎಂಬುದರ ಬಗ್ಗೆ Hidden Tips ಎನ್ನುವ ಟ್ವಿಟ್ಟರ್ ಖಾತೆ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದೀಗ ಈ ಸುದ್ದಿ ಭಾರಿ ವೈರಲ್ ಆಗಿದೆ.
In China, smart transfer beds are used to transport patients painlessly and safely….
pic.twitter.com/34b2QCeaXk— Hidden Tips (@24x7knowIedge) April 23, 2025
ರಿಮೋಟ್ ಕಂಟ್ರೋಲ್ ಹಾಸಿಗೆಯಲ್ಲಿ ರೋಗಿ ತನ್ನ ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಅಂದರೆ ಎಷ್ಟು ಎತ್ತರ ಬೇಕು, ಬೆನ್ನಿಗೆ ಯಾವ ರೀತಿಯಲ್ಲಿ ವಿಶ್ರಾಂತಿ ಕೊಡಬೇಕು, ಕಾಲುಗಳಿಗೆ ವಿರಾಮ ನೀಡುವಾಗ ಎಷ್ಟು ಎತ್ತರ ಬೇಕಾಗುತ್ತದೆ ಹೀಗೆ ಆರಾಮದಾಯಕವಾಗಿ ಮಲಗುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ಈ ಹಾಸಿಗೆಯಲ್ಲಿ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದ್ದು ಪಲ್ಸ್ ಆಕ್ಸಿಮೀಟರ್ ಮತ್ತು ಸ್ಮಾರ್ಟ್ ಸೆನ್ಸರ್ ಗಳು ಇತ್ಯಾದಿ ಮಾಪನಗಳನ್ನು ನೀಡಲಾಗಿದ್ದು ಇದು ರೋಗಿಗೆ ಮಾತ್ರವಲ್ಲ ಅವನ ಆರೈಕೆ ಮಾಡುವವರಿಗೆ ಮತ್ತು ವೈದ್ಯರಿಗೆ ರೋಗಿಯ ದೇಹದಲ್ಲಿ ಕ್ಷಣ ಕ್ಷಣಕ್ಕೂ ಆಗುವಂತಹ ಬದಲಾವಣೆ ಗಮನಿಸಲು ಸಹಕಾರಿಯಾಗಿದೆ. ಅಲ್ಲದೆ ಈ ಹಾಸಿಗೆಯಲ್ಲಿ ಕೆಲವು ಆಯ್ಕೆಗಳಿದ್ದು ರೋಗಿಯೂ ಕೂಡ ರಿಮೋಟ್ ಮೂಲಕ ಅವುಗಳನ್ನು ಕಂಟ್ರೋಲ್ ಮಾಡಬಹುದಾಗಿದೆ ಜೊತೆಗೆ ರೋಗಿಗೆ ಅಗತ್ಯವಿರುವಾಗ ನರ್ಸ್ ಗಳನ್ನು ಕರೆಯುವುದಕ್ಕೂ ಇದು ಅನುಕೂಲ ಮಾಡಿಕೊಡುತ್ತದೆ.
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರಲು ಕಾರಣವೇನು? ಇದನ್ನು ತಡೆಯಲು ವೈದ್ಯರು ನೀಡಿರುವ ಸಲಹೆ ಇಲ್ಲಿದೆ
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ