
ಇಂದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮೊಂದಿಗೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವುದು ಸಹಜವಾಗಿದೆ. ಶಾಲಾ ಮಕ್ಕಳಿಂದ ಹಿಡಿದು ಕಚೇರಿ ಕೆಲಸಗಾರರು, ಕಾಲೇಜು ವಿದ್ಯಾರ್ಥಿಗಳು, ಎಲ್ಲರಿಗೂ ಇದು ಅಗತ್ಯ. ವಿಶೇಷವಾಗಿ ಶಾಲೆಗಳು ಆರಂಭವಾದ ಮೇಲೆ ಪ್ರತಿದಿನ ಮಕ್ಕಳ ಬಾಟಲಿಗಳನ್ನು ತೊಳೆಯುವ ಹಾಗೂ ತುಂಬುವ ಕೆಲಸ ಸಹ ದಿನಚರಿಯ ಭಾಗವಾಗಿದೆ.
ಆದರೆ ಇಲ್ಲಿ ಬಹುತೆಕ ಮಂದಿ ಮಾಡುತ್ತಿರುವ ಒಂದು ಸಾಮಾನ್ಯ ತಪ್ಪಿದೆ. ಬಾಟಲಿಯನ್ನು ಪ್ರತಿದಿನ ಕೇವಲ ನೀರಿನಿಂದ ತೊಳೆಯುವುದು ಮಾತ್ರ. ಬಾಟಲಿಯು ಹೊರಗೆ ಮತ್ತು ಒಳಗೆ ಶುದ್ಧವಾಗಿ ಕಾಣಿಸಬಹುದಾದರೂ ಅದರ ಒಳಗೆ ನಾನಾ ವಿಧದ ಬ್ಯಾಕ್ಟೀರಿಯಗಳು ಉಂಟಾಗಿರುವ ಸಾಧ್ಯತೆ ಇದೆ. ದೀರ್ಘಾವಧಿಗೆ ಈ ನಿರ್ಲಕ್ಷ್ಯ ಆರೋಗ್ಯದ ಮೇಲೆ ದೋಷಕಾರಕ ಪರಿಣಾಮ ಬೀರುತ್ತದೆ.
ಬಾಟಲಿಯನ್ನು ತಕ್ಷಣ ತುಂಬದೆ ಮೊದಲು ತೊಳೆಯುವುದು ಬಹುಮುಖ್ಯ.ಬಾಟಲ್ ಬ್ರಷ್ ಬಳಸಿ ಬಾಟಲಿಯ ಒಳಭಾಗವನ್ನು ಚೆನ್ನಾಗಿ ತೊಳೆಯಿರಿ.ಇದರಿಂದ ಬಾಕ್ಟೀರಿಯಾ ಅಥವಾ ಜಿಗುಟು ನಿವಾರಣೆಯಾಗುತ್ತದೆ.
ಬಾಟಲಿಗೆ ಬಿಸಿನೀರು ಹಾಕಿ, ಸ್ವಲ್ಪ ಉಪ್ಪು ಸೇರಿಸಿ. ಬಾಟಲಿಯ ಮುಚ್ಚಳವನ್ನು ಹಾಕಿ ಮತ್ತು ಅದನ್ನು ಮೇಲಿಂದ ಕೆಳಕ್ಕೆ ಬಲವಾಗಿ ಶೇಕ್ ಮಾಡಿ.ನಂತರ ಬ್ರಷ್‌ನಿಂದ ಮರುತೊಳೆಯಿರಿ ಮತ್ತು ಶುದ್ಧ ನೀರಿನಿಂದ ಚೆನ್ನಾಗಿ ಕೊನೆಗೆ ತೊಳೆಯಿರಿ.
ಇದನ್ನೂ ಓದಿ: ಶುಗರ್ ಇದ್ಯಾ? ಹಾಗಿದ್ರೆ ಈ ಸೊಪ್ಪನ್ನು ತಪ್ಪದೇ ಸೇವಿಸಿ
ಮಕ್ಕಳ ಬಾಟಲಿಯಲ್ಲಿರುವ ನೀರನ್ನು ಅವರು ಶಾಲೆಯಿಂದ ಬಂದ ತಕ್ಷಣ ಖಾಲಿ ಮಾಡಿ. ಮುಚ್ಚಳವನ್ನು ತೆಗೆದು ಕೆಲವು ಗಂಟೆಗಳ ಕಾಲ ಬಾಟಲಿಯನ್ನು ತೆರೆದಿಡಿ, ಇದು ಒಳಗೆ ತೇವ ಹೆಚ್ಚಾಗಿ ಕುಳಿತು ಕೊಳೆವಾಸನೆ ತಡೆಯಲು ಸಹಾಯಕ.ಮರುದಿನ ಬೆಳಗ್ಗೆ ಬಾಟಲಿಯನ್ನು ತೊಳೆಯಿರಿ ಮತ್ತು ನಂತರ ಮಾತ್ರ ನೀರನ್ನು ತುಂಬಿಸಿ. ನೀರಿನ ಬಾಟಲಿ ಯಾವಾಗಲೂ ಬಾಯಿಗೆ ನೇರವಾಗಿ ತಲುಪುವುದು . ಅದರಲ್ಲಿ ಶುದ್ಧತೆ ಇಲ್ಲದಿದ್ದರೆ ಅಜ್ಞಾತವಾಗಿ ಅನೇಕ ರೋಗಗಳ ಬಾಗಿಲು ತೆರೆಯುವಂತಹ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ನಿರ್ಲಕ್ಷ್ಯವಿಲ್ಲದೆ ಬಾಟಲಿ ನಿರ್ವಹಣೆ ದಿನನಿತ್ಯದ ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ.
ಲೇಖನ: ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯರು, ಶಿರಸಿ
08384225836
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ