Fillico Water Bottle: ವಿಶ್ವದ ಅತ್ಯಂತ ದುಬಾರಿ ಬೆಲೆಯ ನೀರಿನ ಬಾಟಲಿ; 1ಲೀ.ಗೆ ಲಕ್ಷ ಲಕ್ಷ ಪಾವತಿಸಬೇಕು
ಜಪಾನಿನ ಫಿಲಿಕೊ ಜ್ಯುವೆಲ್ಲರಿ ಬ್ರ್ಯಾಂಡ್‌ನ 750ml ನೀರಿನ ಬಾಟಲ್ ಬೆಲೆ 1.15 ಲಕ್ಷ ರೂಪಾಯಿ. ರೋಕೌ ರಾಷ್ಟ್ರೀಯ ಉದ್ಯಾನವನದ ಬೆಟ್ಟಗಳ ತಪ್ಪಲಿನಲ್ಲಿ ಸಿಗುವ ಈ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ನೀರಿನ ಶುದ್ಧತೆ ಮತ್ತು ಹೆಚ್ಚಿನ ಖನಿಜಾಂಶಗಳ ಹೊರತಾಗಿ ಈ ಬಾಟಲನ್ನು ವಜ್ರ ಮತ್ತು ಚಿನ್ನದಿಂದ ವಿನ್ಯಾಸಗೊಳಿಸಲಾಗಿದೆ.
ಸಾಮಾನ್ಯವಾಗಿ 1ಲೀಟರ್ ನೀರಿನ ಬಾಟಲಿಗೆ 20 ರೂ. ಇರುತ್ತದೆ. ಆದರೆ ಎಂದಾದರೂ 1ಲೀ ನೀರಿಗೆ ಲಕ್ಷ ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದೀರಾ? ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೀರಿನ ಬಾಟಲ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಾಟಲ್ ಖರೀದಿಸುವ ದುಡ್ಡಿನಲ್ಲಿ ನೀವು ಕಾರು, ಐಫೋನ್ ಖರೀದಿಸಬಹುದು.
ಹೌದು ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ನೀರಿನ ಬಾಟಲಿ ಜಪಾನ್‌ನ ಮಿನರಲ್ ವಾಟರ್ ಬ್ರ್ಯಾಂಡ್ ಫೆಲಿಕೊ ಜ್ಯುವೆಲ್ಲರಿ. ಈ ಬಾಟಲಿಯ ವಿನ್ಯಾಸದ ಜೊತೆಗೆ ಇದರಲ್ಲಿರುವ ನೀರು ತುಂಬಾ ಪರಿಶುದ್ದವಾದುದು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ನೀರಿನ ಬಾಟಲಿಗೆ ಬರೋಬ್ಬರೀ 1.15 ಲಕ್ಷ ರೂ. ಪಾವತಿಸಬೇಕು.
ಈ ನೀರು ಕೋಬ್‌ನ ರೋಕೌ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದು ಯಾವುದೇ ಕೈಗಾರಿಕಾ ಅಥವಾ ಕೃಷಿ ಅಭಿವೃದ್ಧಿಯಿಂದ ದೂರವಿದೆ. ಅದರ ಶುದ್ಧತೆ ಮತ್ತು ಹೆಚ್ಚಿನ ಖನಿಜಾಂಶಗಳಿಗೆ ಹೆಸರುವಾಸಿಯಾಗಿದೆ. ಬೆಟ್ಟಗಳ ತಪ್ಪಲಿನಲ್ಲಿ ಸಿಗುವ ಈ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ಕಂಪನಿಯು ಈ ನೀರನ್ನು ಗ್ರಾನೈಟ್ ಫಿಲ್ಟರೇಶನ್ ಪ್ರಕ್ರಿಯೆಯ ಮೂಲಕ ಫಿಲ್ಟರ್ ಮಾಡುತ್ತದೆ, ಇದರಲ್ಲಿ ಎಲ್ಲಾ ರೀತಿಯ ಕಲ್ಮಶಗಳನ್ನು ನೀರಿನಿಂದ ನೈಸರ್ಗಿಕ ರೀತಿಯಲ್ಲಿ ತೆಗೆದುಹಾಕಲಾಗುತ್ತದೆ.
ಇದನ್ನೂ ಓದಿ: ಜೀವಂತ ಕೋಳಿ ಮರಿ ತಿಂದು ವ್ಯಕ್ತಿ ಸಾವು ಆದರೆ ಬದುಕಿಬಂದ ಮರಿ
ಈ ನೀರಿನ 750 ಎಂಎಲ್ ಬಾಟಲಿಯ ಬೆಲೆ ಅಂದಾಜು 1.15 ಲಕ್ಷ ರೂ. ಅಷ್ಟೇ ಅಲ್ಲ, ಇದರ ಬಾಟಲ್ ಕೂಡ ವಿಶೇಷವಾಗಿದೆ. ಫಿಲಿಕೊ ತನ್ನ ಬಾಟಲ್ ವಿನ್ಯಾಸಕ್ಕೂ ಹೆಸರುವಾಸಿಯಾಗಿದೆ. ಕಂಪನಿಯು ನೀರಿನ ಬಾಟಲಿಗಳನ್ನು ವಿವಿಧ ರೀತಿಯ ವಜ್ರಗಳು ಮತ್ತು ಆಭರಣಗಳಿಂದ ಅಲಂಕರಿಸುತ್ತದೆ. ಬಾಟಲಿಯ ಮುಚ್ಚಳವು ವಜ್ರಗಳಿಂದ ಕೂಡಿದೆ ಮತ್ತು ಚಿನ್ನದ ತೆಳುವಾದ ಪದರವನ್ನು ಸಹ ಹೊಂದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ