ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾವು ಆದರೆ ಬದುಕಿಬಂದ ಮರಿ
ಮಾಂಸಪ್ರಿಯರು ಕೆಜಿಗಟ್ಟಲೆ ಚಿಕನ್ ತಿನ್ನುವುದು ನೋಡಿದ್ದೇವೆ ಆದರೆ ವಿಚಿತ್ರವೆಂಬಂತೆ ಈ ವ್ಯಕ್ತಿ ಜೀವಂತವಿರುವ ಕೋಳಿ ಮರಿಯನ್ನು ತಿನ್ನಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಜೀವಂತ ಕೋಳಿ ಮರಿ ನುಂಗಲು ಹೋಗಿ ಉಸಿರುಗಟ್ಟಿ ವ್ಯಕ್ತಿ ಸಾವನ್ನಪ್ಪಿದ್ದಾರೆ, ಗ್ರಾಮಸ್ಥರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಯಾರೂ ಕೂಡ ಜೀವಂತವಿರುವ ಕೋಳಿಯನ್ನು ತಿನ್ನಲು ಸಾಧ್ಯವಿಲ್ಲ.
ವ್ಯಕ್ತಿಯೊಬ್ಬ ಜೀವಂತ ಕೋಳಿ ಮರಿ ನುಂಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಆದರೆ ಆಶ್ಚರ್ಯವೆಂಬಂತೆ ಮರಿ ಬದುಕಿಬಂದಿದೆ. ಜೀವಂತ ಕೋಳಿ ಮರಿ ನುಂಗಲು ಹೋಗಿ ಉಸಿರುಗಟ್ಟಿ ವ್ಯಕ್ತಿ ಸಾವನ್ನಪ್ಪಿದ್ದಾರೆ, ಗ್ರಾಮಸ್ಥರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಯಾರೂ ಕೂಡ ಜೀವಂತವಿರುವ ಕೋಳಿಯನ್ನು ತಿನ್ನಲು ಸಾಧ್ಯವಿಲ್ಲ. ಅಂಬಿಕಾಪುರದಲ್ಲಿ ಈ ಘಟನೆ ನಡೆದಿದೆ, ಮರಣೋತ್ತರ ಪರೀಕ್ಷೆ ವೇಳೆ ವ್ಯಕ್ತಿಯ ಹೊಟ್ಟೆಯಲ್ಲಿ ಮರಿ ಜೀವಂತವಿರುವುದು ತಿಳಿದುಬಂದಿದ್ದು, ವೈದ್ಯರು ದಿಗ್ಭ್ರಮೆಗೊಂಡಿದ್ದರು.
ಚಿಂಡ್ಕಲೋ ಗ್ರಾಮದ ನಿವಾಸಿ ಆನಂದ್ ಯಾದವ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅಂಬಿಕಾಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತರಲಾಯಿತು. ಸ್ನಾನ ಮುಗಿಸಿ ವಾಪಸಾದ ಬಳಿಕ ತಲೆಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗಂಟಲು ಸೀಳಿದಾಗ ಸಿಕ್ಕಿತು ಜೀವಂತ ಮರಿ
ವೈದ್ಯರು ಶವಪರೀಕ್ಷೆ ನಡೆಸಿದಾಗ, ಸಾವಿನ ಕಾರಣ ಆರಂಭದಲ್ಲಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ಅವನ ಗಂಟಲಿನ ಬಳಿ ರಂಧ್ರಕೊರೆದಾಗ ಅಲ್ಲಿ ಜೀವಂತ ಮರಿ ಇರುವುದು ಗೊತ್ತಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ 20 ಸೆಂ,ಮೀ ಉದ್ದವಿದ್ದು, ಶ್ವಾಸಕೋಶ ಹಾಗೂ ಆಹಾರದ ಮಾರ್ಗ ಎರಡಕ್ಕೂ ಅಡ್ಡಿಯಾಗುವ ರೀತಿಯಲ್ಲಿ ಸಿಲುಕಿಕೊಂಡಿತ್ತು ಇದು ಉಸಿರುಗಟ್ಟುವಿಕೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಬೇಟೆಯಾಡಿದ ಹುಲಿರಾಯ, ವಿಡಿಯೋ ವೈರಲ್
15,000 ಕ್ಕೂ ಹೆಚ್ಚಿನ ಮರಣೋತ್ತರ ಪರೀಕ್ಷೆ ನಡೆಸಿದ್ದರೂ ನನ್ನ ವೃತ್ತಿ ಜೀವನದಲ್ಲಿ ಈ ರೀತಿಯ ಪ್ರಕರಣ ನೋಡಿದ್ದು ಮೊದಲು ಎಂದು ವೈದ್ಯರು ಹೇಳಿದ್ದಾರೆ.
ಆನಂದ್ ದಂಪತಿಗೆ ಮಕ್ಕಳಾಗಿರಲಿಲ್ಲ ಹೀಗಾಗಿ ಹಲವು ಮೌಢ್ಯ ಆಚರಣೆಗಳನ್ನು ಮಾಡುತ್ತಿದ್ದರು ಹಾಗೆಯೇ ಮರಿಯನ್ನು ನುಂಗಿರಬಹುದು ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದುರಂತಕ್ಕೆ ಏನು ಕಾರಣ ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 am, Tue, 17 December 24