Cold during pregnancy: ಗರ್ಭಾವಸ್ಥೆಯಲ್ಲಿ ಉಂಟಾಗುವ ಶೀತ ಕಡಿಮೆ ಮಾಡಲು ಇಲ್ಲಿವೆ ಸರಳ ಸಲಹೆ

ಗರ್ಭಿಣಿಯಾಗಿದ್ದರೆ, ಹುಟ್ಟಲಿರುವ ಮಗುವಿನ ಮೇಲೆ ಔಷಧಿಗಳ ಪರಿಣಾಮದ ಬಗ್ಗೆ ನೀವು ಚಿಂತಿಸಲೇಬೇಕು. ನಿಮ್ಮ ಆರೋಗ್ಯ ಆರೈಕೆ ಮಾಡುವ ವೈದ್ಯರನ್ನು ಸಂಪರ್ಕಿಸಿದ ನಂತರವೇ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದೆಲ್ಲದರ ಹೊರತಾಗಿ ಗರ್ಭಾವಸ್ಥೆಯಲ್ಲಿ ಶೀತಕ್ಕೆ ನೀವು ಸರಳ ಮನೆಮದ್ದುಗಳನ್ನು ಆಯ್ಕೆ ಮಾಡಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Cold during pregnancy: ಗರ್ಭಾವಸ್ಥೆಯಲ್ಲಿ ಉಂಟಾಗುವ ಶೀತ ಕಡಿಮೆ ಮಾಡಲು ಇಲ್ಲಿವೆ ಸರಳ ಸಲಹೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2023 | 5:21 PM

ಚಳಿಗಾಲ ಬಂತೆಂದರೆ ಸಾಕು ಅದರ ಜೊತೆ ಜೊತೆಗೆ ಸಾಮಾನ್ಯ ಶೀತವೂ ಆರಂಭವಾಗುತ್ತದೆ. ಹೆಚ್ಚಿನ ಜನರು ವೈದ್ಯರನ್ನು ಸಂಪರ್ಕಿಸದೆಯೇ ಶೀತ ಅಥವಾ ಜ್ವರಕ್ಕೆ ಚಿಕಿತ್ಸೆ ನೀಡಲು ಅವರಿಗೆ ತಿಳಿದ ಎಲ್ಲ ರೀತಿಯ ಔಷಧಿಗಳನ್ನು ಟ್ರೈ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಒಂದು ನಿಮಿಷವೂ ಯೋಚಿಸುವುದಿಲ್ಲ. ಅದರಲ್ಲಿಯೂ ಗರ್ಭಿಣಿಯಾಗಿದ್ದರೆ, ನಿಮ್ಮ ಹುಟ್ಟಲಿರುವ ಮಗುವಿನ ಮೇಲೆ ಔಷಧಿಗಳ ಪರಿಣಾಮದ ಬಗ್ಗೆ ನೀವು ಚಿಂತಿಸಲೇ ಬೇಕು. ನಿಮ್ಮ ಆರೋಗ್ಯ ಆರೈಕೆ ಮಾಡುವ ವೈದ್ಯರನ್ನು ಸಂಪರ್ಕಿಸಿದ ನಂತರವೇ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದೆಲ್ಲದರ ಹೊರತಾಗಿ ಗರ್ಭಾವಸ್ಥೆಯಲ್ಲಿ ಶೀತಕ್ಕೆ ನೀವು ಸರಳ ಮನೆಮದ್ದುಗಳನ್ನು ಆಯ್ಕೆ ಮಾಡಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭಾವಸ್ಥೆಯಲ್ಲಿ ಶೀತ ಅಥವಾ ಜ್ವರವು ಮಗುವಿನ ಮೇಲೆ ಪರಿಣಾಮ ಬೀರಬಹುದು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಚಂಚಲ್ ಶರ್ಮಾ ಹೇಳುತ್ತಾರೆ. ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಜ್ವರವು ಕೆಲವು ಜನನ ದೋಷಗಳ ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ, ಉಸಿರಾಟದ ಸೋಂಕುಗಳು ತೊಡಕುಗಳಿಗೆ ಕಾರಣವಾಗಬಹುದು, ಆದ್ದರಿಂದ ನೀವು ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸಿದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ.

ಶೀತ ಮತ್ತು ಗರ್ಭಧಾರಣೆಗೆ ಔಷಧಿಗಳು;

ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಮೊದಲ ಕೆಲವು ವಾರಗಳಲ್ಲಿ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಕೆಲವು ಶೀತಕ್ಕೆ ಸಂಬಂಧ ಪಟ್ಟ ಔಷಧಿಗಳು ಬೆಳೆಯುತ್ತಿರುವ ಭ್ರೂಣಕ್ಕೆ ಅಪಾಯವನ್ನುಂಟು ಮಾಡುವ ಅಂಶವನ್ನು ಹೊಂದಿರಬಹುದು ಎಂದು ತಜ್ಞರು ಹೇಳುತ್ತಾರೆ. ಸರಳ ಕೆಮ್ಮಿನ ಸಿರಪ್ ಗರ್ಭಿಣಿಯರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಆದರೆ ತೊಡಕುಗಳನ್ನು ತಪ್ಪಿಸಲು ಆಸ್ಪಿರಿನ್ ಮತ್ತು ಇಬುಪ್ರೊಫೇನ್ ನಂತಹ ಔಷಧಿಗಳನ್ನು ತೆಗೆದುಕೊಳ್ಳಬಾರದು. ಗರ್ಭಾವಸ್ಥೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವುದು ಯಾವಾಗ ಸುರಕ್ಷಿತ ಎಂಬುದರ ಕುರಿತು ಮಹಿಳೆಯರು ತಮ್ಮ ವೈದ್ಯರ ಸಲಹೆಯನ್ನು ಅನುಸರಿಸಬೇಕು. ಸಾಮಾನ್ಯವಾಗಿ, ಭ್ರೂಣದ ಬೆಳವಣಿಗೆಯಲ್ಲಿ ನಿರ್ಣಾಯಕ ಅವಧಿಯಾದ ಮೊದಲ ತ್ರೈಮಾಸಿಕದ ನಂತರ ಕಾಯಲು ವೈದ್ಯರು ಶಿಫಾರಸು ಮಾಡಬಹುದು.

ಗರ್ಭಾವಸ್ಥೆಯಲ್ಲಿ ಶೀತಕ್ಕೆ ಚಿಕಿತ್ಸೆ ನೀಡಲು ಸಲಹೆಗಳು

ಹೆಚ್ಚಿನ ವೈದ್ಯರು ಆರಂಭದಲ್ಲಿ ಔಷಧೀಯವಲ್ಲದ ಪರಿಹಾರಗಳು ಮತ್ತು ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಬಹುದು. ನೀವು ಏನು ಮಾಡಬಹುದು ಎಂಬುದು ಇಲ್ಲಿದೆ:

1. ಹೈಡ್ರೇಟ್ ಆಗಿರಿ: ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಲು ನೀರನ್ನು ಹೆಚ್ಚು ಹೆಚ್ಚು ಕುಡಿಯಿರಿ. ಗಂಟಲು ನೋಯುತ್ತಿದ್ದರೇ ಬಿಸಿ ಬಿಸಿ ಪಾನೀಯಗಳನ್ನು ಕುಡಿಯಲು ಮರೆಯದಿರಿ ಜೊತೆಗೆ ಸುಸ್ತನ್ನು ಶಮನಗೊಳಿಸಲು ನೀರು ಮತ್ತು ತಾಜಾ ಹಣ್ಣಿನ ರಸಗಳು ಸೇರಿದಂತೆ ಸಾಕಷ್ಟು ದ್ರವ ಅಂಶವಿರುವ ಆಹಾರವನ್ನು ತೆಗೆದುಕೊಳ್ಳಿ.

2. ಹಬೆಯಲ್ಲಿ ಉಸಿರಾಡಿ: ಗಾಳಿ ಮತ್ತು ಧೂಳಿನ ದಟ್ಟಣೆಯನ್ನು ಉಸಿರಾಟದ ತೊಂದರೆ ನಿವಾರಿಸಿಕೊಳ್ಳಲು ಮೊದಲು ಔಷಧಿ ಮೊರೆ ಹೋಗುವ ಬದಲು ಹಬೆಯಲ್ಲಿ ಉಸಿರಾಡುವುದನ್ನು ರೂಢಿಮಾಡಿಕೊಳ್ಳಿ. ನೀವು ಮಾಡಬೇಕಾಗಿರುವುದು ನಿಮ್ಮ ತಲೆಯನ್ನು ಬಿಸಿ ನೀರಿನ ಪಾತ್ರೆಗೆ ಹತ್ತಿರ ತನ್ನಿ ಬಳಿಕ ನಿಮ್ಮ ಕಣ್ಣುಗಳನ್ನು ಮುಚ್ಚಿ. ನೀರು ಮತ್ತು ನಿಮ್ಮ ಮುಖದ ನಡುವೆ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಿ ಕನಿಷ್ಠ ಎರಡು ನಿಮಿಷಗಳ ಕಾಲ ಆಳವಾಗಿ ಮತ್ತು ನಿಧಾನವಾಗಿ ಉಸಿರೆಳೆದುಕೊಳ್ಳಿ. ಸಣ್ಣ ಶೀತ, ತಲೆನೋವು ಕೂಡ ಇದನ್ನು ಮಾಡುವುದರಿಂದ ಮಾಯವಾಗುತ್ತದೆ.

3. ವಿಶ್ರಾಂತಿ: ನಿಮಗೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮಾಡಲು ಸಾಕಷ್ಟು ಕೆಲಸಗಳಿದ್ದರೂ ಕೂಡ, ವಿಶ್ರಾಂತಿ ಪಡೆಯಲು ಮರೆಯಬೇಡಿ. ದೇಹವು ಚೇತರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ ಅಗತ್ಯವಿದೆ ಎಂದು ಡಾ. ಚಂಚಲ್ ಶರ್ಮಾ ಹೇಳುತ್ತಾರೆ.

4. ಬೆಚ್ಚಗಿನ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು: ನಿಮಗೆ ಶೀತವಾದಾಗ, ಗಂಟಲು ನೋಯುವುದು ಸಹಜ. ಹಾಗಾಗಿ ಇದಕ್ಕೆ ಸರಳ ಮನೆಮದ್ದೆನೆಂದರೆ ದಿನಕ್ಕೆ ಕನಿಷ್ಠ ಮೂರು ಬಾರಿ ಉಪ್ಪು ನೀರಿನ ಬಾಯಿ ಮುಕ್ಕಳಿಸುವ ಮೂಲಕ ಗಂಟಲಿನ ಕಿರಿಕಿರಿಯನ್ನು ನಿವಾರಿಸಿಕೊಳ್ಳಿ.

5. ಜೇನುತುಪ್ಪ ಮತ್ತು ನಿಂಬೆ: ಜೇನುತುಪ್ಪ ಮತ್ತು ನಿಂಬೆ ಪೋಷಕಾಂಶಗಳಿಂದ ತುಂಬಿವೆ, ಆದ್ದರಿಂದ ಅವುಗಳನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನೈಸರ್ಗಿಕವಾಗಿ ಕೆಮ್ಮನ್ನು ಪರಿಹರಿಸಿಕೊಳ್ಳಬಹುದು.ಜೊತೆಗೆ ಇದು ಗಂಟಲು ಕೆರೆತ, ಕಿಚಿ ಕಿಚಿಗೂ ಪರಿಹಾರ ನೀಡುತ್ತದೆ.

6. ಮಲಗುವಾಗ ತಲೆಯನ್ನು ಎತ್ತರದಲ್ಲಿಟ್ಟು ಮಲಗಿ: ನೀವು ಶೀತದಿಂದ ಬಳಲುತ್ತಿದ್ದರೇ ಮಲಗುವ ಮೊದಲು ಈ ವಿಧಾನ ನಿಮಗೆ ಸಾಕಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ. ಮಲಗುವಾಗ ಎತ್ತರದ ದಿಂಬಿನ ಮೇಲೆ ನಿಮ್ಮ ತಲೆಯನ್ನು ಮೇಲಕ್ಕೆ ಬರುವ ಹಾಗೆ ಇರಿಸಿಕೊಳ್ಳಿ, ಇದು ಸುಲಭ ಉಸಿರಾಟವನ್ನು ಉತ್ತೇಜಿಸುತ್ತದೆ. ಆದರೆ ಗಟ್ಟಿಯಾದ ದಿಂಬು ಕೆಲವರಿಗೆ ಒಳ್ಳೆಯದಲ್ಲ.

ಕೆಲವರು ಶೀತಕ್ಕೆ ಚಿಕಿತ್ಸೆ ನೀಡಲು ಅರಿಶಿನ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಗರ್ಭಾವಸ್ಥೆಯಲ್ಲಿ ಅದನ್ನು ಕುಡಿಯುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗಬಹುದು. ಇದು ಈಸ್ಟ್ರೊಜೆನ್ ಹಾರ್ಮೋನ್ ಬದಲಾವಣೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ ಅದನ್ನು ಆದಷ್ಟು ಸೇವನೆ ಮಾಡುವುದನ್ನು ಕಡಿಮೆ ಮಾಡಿ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಬೇಕೆಂಬ ಬಯಕೆಗೆ ಖರ್ಜೂರ ಏಕೆ ಸೂಕ್ತ?

ಗರ್ಭಾವಸ್ಥೆಯಲ್ಲಿ ಶೀತ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ನೀವು ಗರ್ಭಿಣಿಯಾಗಿರುವಾಗ ಶೀತ ಅಥವಾ ಜ್ವರ ಬರುವುದನ್ನು ಆದಷ್ಟು ತಪ್ಪಿಸಲು ನೀವು ಕೆಲವು ಸರಳ ಪ್ರಯತ್ನಗಳನ್ನು ಮಾಡಬೇಕು. ನೀವು ಏನು ಮಾಡಬಹುದು ಎಂಬುದು ಇಲ್ಲಿದೆ:

• ವೈರಸ್ ಗಳು ಹರಡುವುದನ್ನು ತಡೆಯಲು ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯುತ್ತೀರಿ.

• ಶೀತದ ರೋಗಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ಸಂಪರ್ಕ ಹೊಂದುವುದನ್ನು ಕಡಿಮೆ ಮಾಡಿ.

• ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರ ಮತ್ತು ದೇಹಕ್ಕೆ ಬೇಕಾಗುವಷ್ಟು ನೀರನ್ನು ಕುಡಿಯಿರಿ.

• ನಿಮ್ಮ ದೇಹದ ರಕ್ಷಣೆಯನ್ನು ಬಲಪಡಿಸಲು ಸಾಕಷ್ಟು ವಿಶ್ರಾಂತಿ ಪಡೆಯುವುದನ್ನು ಮರೆಯಬೇಡಿ.

• ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸ್ವಲ್ಪವಾದರೂ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.

ಅಲ್ಲದೆ, ಸಾಕಷ್ಟು ಪ್ರಸವ ಪೂರ್ವ ಆರೈಕೆ, ತಡೆಗಟ್ಟಬಹುದಾದ ಕಾಯಿಲೆಗಳ ವಿರುದ್ಧ ಲಸಿಕೆ ಮತ್ತು ಆರೋಗ್ಯಕರ ಜೀವನಶೈಲಿ ಎಲ್ಲವೂ ಗರ್ಭಾವಸ್ಥೆಯಲ್ಲಿ ಶೀತಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳ ಆಧಾರದ ಮೇಲೆ ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್