Pregnancy cravings: ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಬೇಕೆಂಬ ಬಯಕೆಗೆ ಖರ್ಜೂರ ಏಕೆ ಸೂಕ್ತ?

ಖರ್ಜೂರವನ್ನು ಸೇವಿಸುವುದು ನಿಮ್ಮ ಸಿಹಿ ಬಯಕೆಯನ್ನು ತೃಪ್ತಿಪಡಿಸಲು ಆರೋಗ್ಯಕರ ಮಾರ್ಗವಾಗಿದೆ. ಇದು ನಿರೀಕ್ಷಿತ ತಾಯಂದಿರಿಗೆ ಅನೇಕ ಪ್ರಯೋಜನಗಳನ್ನು ಸಹ ಹೊಂದಿದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಖರ್ಜೂರವನ್ನು ತಿನ್ನಲು ಪ್ರಾರಂಭಿಸಬಹುದು. ಆದರೆ ತಜ್ಞರು ನೀಡಿದ ಕೆಲವು ಸೂಚನೆಗಳನ್ನು ಸಹ ಪಾಲಿಸಬೇಕು.

Pregnancy cravings: ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಬೇಕೆಂಬ ಬಯಕೆಗೆ ಖರ್ಜೂರ ಏಕೆ ಸೂಕ್ತ?
Pregnancy cravingsImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Oct 31, 2023 | 6:45 PM

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳಿಗಾಗಿ ಹಂಬಲಿಸುತ್ತಾರೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಎದ್ದು ಐಸ್ ಕ್ರೀಮ್ ತಿನ್ನುವುದು ಅಥವಾ ಚಾಕೊಲೇಟ್ ತಿನ್ನಲು ಬಯಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ನಾವು ಯೋಚಿಸಬೇಕು. ಇದಕ್ಕೆ ಸರಳವಾದ ಪರಿಹಾರವೆಂದರೆ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಖರ್ಜೂರವನ್ನು ಸೇವನೆ ಮಾಡುವುದು. ಇದನ್ನು ತಿನ್ನುವ ಮೂಲಕ ಅವರು ತಮ್ಮ ಸಿಹಿ ತಿನ್ನುವ ಬಯಕೆಯನ್ನು ತೃಪ್ತಿಪಡಿಸಿಕೊಳ್ಳಬಹುದು. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ 2011 ರ ಅಧ್ಯಯನದಲ್ಲಿ, 154 ಮಹಿಳೆಯರು ಭಾಗವಹಿಸಿದ್ದರು. ಅವರಲ್ಲಿ 77 ಜನರು ತಮ್ಮ ಗರ್ಭಾವಸ್ಥೆಯಲ್ಲಿ ತಡವಾಗಿ ಖರ್ಜೂರವನ್ನು ಸೇವಿಸಿದರೆ, ಉಳಿದ 77 ಜನರು ಖರ್ಜೂರವನ್ನು ತಿನ್ನಲಿಲ್ಲ. ಇಷ್ಟು ಮಹಿಳೆಯರಿಗೂ ಹೋಲಿಸಿದರೆ ಖರ್ಜೂರವನ್ನು ಸೇವಿಸಿದ ಮಹಿಳೆಯರಿಗೆ ಹೆರಿಗೆಯನ್ನು ಪ್ರಚೋದಿಸುವ ವಿಷಯಕ್ಕೆ ಬಂದಾಗ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವು ಗಮನಾರ್ಹವಾಗಿ ಕಡಿಮೆ ಎಂದು ಕಂಡು ಬಂದಿದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಖರ್ಜೂರ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಗರ್ಭಾವಸ್ಥೆಯಲ್ಲಿ ಖರ್ಜೂರ ತಿನ್ನುವುದರ ಪ್ರಯೋಜನಗಳು:

ಖರ್ಜೂರದಲ್ಲಿ ಸಕ್ಕರೆ ಸಮೃದ್ಧವಾಗಿದೆ, ಆದರೆ ಅವುಗಳಲ್ಲಿ ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಅನೇಕ ಸೂಕ್ಷ್ಮ ಪೋಷಕಾಂಶಗಳಿವೆ ಎಂದು ಗುರುಗ್ರಾಮದ ಸೆಕ್ಟರ್ 14 ರ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ನಿರ್ದೇಶಕಿ ಡಾ. ಚೇತನಾ ಜೈನ್ ಹೇಳುತ್ತಾರೆ. ಜೊತೆಗೆ ಅವರು ಹೇಳುವ ಪ್ರಕಾರ ಫ್ಲೇವನಾಯ್ಡ್ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಫಿನೋಲಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳು ಖರ್ಜೂರದಲ್ಲಿರುವುದರಿಂದ, ಇದು ಆರೋಗ್ಯಕರ ಆಹಾರವಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಕೆಲವು ಪ್ರಯೋಜನಗಳು ಇಲ್ಲಿವೆ:

1. ಖರ್ಜೂರವು ತಕ್ಷಣ ನಿಮಗೆ ಶಕ್ತಿಯನ್ನು ನೀಡುತ್ತದೆ:

ಸಾಮಾನ್ಯವಾಗಿ ಗರ್ಭಿಣಿಯರು ಆಯಾಸಗೊಳ್ಳುತ್ತಾರೆ ಮತ್ತು ದುರ್ಬಲರಾಗುತ್ತಾರೆ. ಏಕೆಂದರೆ ಗರ್ಭಾವಸ್ಥೆಯಲ್ಲಿ, ಹೃದಯರಕ್ತನಾಳದ ವ್ಯವಸ್ಥೆ ಮತ್ತು ಮೂತ್ರಪಿಂಡಗಳ ಮೇಲೆ ಹೊರೆ ಶೇಕಡಾ 40 ರಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ತೂಕ ಹೆಚ್ಚಳ ಮತ್ತು ಗುರುತ್ವಾಕರ್ಷಣೆಯ ಬದಲಾವಣೆಯೊಂದಿಗೆ ಬೆನ್ನು ಮೂಳೆಯ ಮೇಲಿನ ಒತ್ತಡವು ದಣಿವಿಗೆ ಕಾರಣವಾಗುತ್ತದೆ. ಆದ್ದರಿಂದ, ಖರ್ಜೂರವನ್ನು ತಿನ್ನುವುದು ದೇಹಕ್ಕೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

2.  ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ:

ಖರ್ಜೂರದ ಹೆಚ್ಚಿನ ಫೈಬರ್ ಅಂಶವು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇದು ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರಿಗೆ ಸಂಭವಿಸುತ್ತದೆ. ಗರ್ಭಾವಸ್ಥೆಯಲ್ಲಿ, ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಋತುಚಕ್ರವನ್ನು ನಿಯಂತ್ರಿಸುವ ಮತ್ತು ಗರ್ಭಧಾರಣೆಯನ್ನು ಬೆಂಬಲಿಸುವ ಪ್ರೊಜೆಸ್ಟರಾನ್ ಮಟ್ಟವು ತುಂಬಾ ಹೆಚ್ಚಾಗುತ್ತದೆ. ವಾಕರಿಕೆ ಆಹಾರ ಮತ್ತು ನೀರಿನ ಸೇವನೆಯನ್ನು ಕಡಿಮೆ ಮಾಡುತ್ತದೆ. ಇವೆಲ್ಲವೂ ಮಲಬದ್ಧತೆಗೆ ಕಾರಣವಾಗುತ್ತವೆ, ಆದ್ದರಿಂದ ಖರ್ಜೂರವನ್ನು ಸೇವಿಸುವುದು ಒಳ್ಳೆಯದು.

3. ರಕ್ತಹೀನತೆಯನ್ನು ತಡೆಯುತ್ತದೆ:

ಕಬ್ಬಿಣ ಅಂಶದಿಂದ ಸಮೃದ್ಧವಾಗಿರುವ ಖರ್ಜೂರವು ರಕ್ತಹೀನತೆಯನ್ನು ತಡೆಯುತ್ತದೆ ಅಥವಾ ರಕ್ತದ ಕೊರತೆಯನ್ನು ಸರಿಪಡಿಸುತ್ತದೆ. ಗರ್ಭಾವಸ್ಥೆಯಲ್ಲಿ, ರಕ್ತದ ಪ್ರಮಾಣವು ಕೆಂಪು ಕಣಗಳಿಗಿಂತ ಹೆಚ್ಚು ವಿಸ್ತರಿಸುತ್ತದೆ. ಕಬ್ಬಿಣದ ಹೀರಿಕೊಳ್ಳುವಿಕೆ ಕಡಿಮೆ, ಆದ್ದರಿಂದ ಇದು ರಕ್ತಹೀನತೆಗೆ ಕಾರಣವಾಗುತ್ತದೆ.

4. ಖರ್ಜೂರವು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ:

ಖರ್ಜೂರದಲ್ಲಿರುವ ಸೂಕ್ಷ್ಮ ಪೋಷಕಾಂಶಗಳಾದ ಸೆಲೆನಿಯಂ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಆಸ್ಟಿಯೊಪೊರೋಸಿಸ್ ಅನ್ನು ಕಡಿಮೆ ಮಾಡುವ ಮೂಲಕ ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅನೇಕ ಗರ್ಭಿಣಿಯರಲ್ಲಿ ಈ ಸಮಸ್ಯೆ ತಲೆ ದೂರುತ್ತದೆ.

5. ಕೂದಲು ಉದುರುವುದು ಕಡಿಮೆ ಮಾಡಬಹುದು:

ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೂದಲು ಉದುರುವಿಕೆಯನ್ನು ಅನುಭವಿಸುತ್ತಾರೆ. ಹೆಚ್ಚಿನ ಕಬ್ಬಿಣದ ಅಂಶ ಮತ್ತು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುವ ಗುಣದಿಂದಾಗಿ, ಖರ್ಜೂರವು ನಿಮ್ಮ ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಖರ್ಜೂರವು ಹೆರಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ. ಜೈನ್ ಹೇಳುತ್ತಾರೆ, ಆದ್ದರಿಂದ ಗರ್ಭಿಣಿಯರು ಒಂಬತ್ತನೇ ತಿಂಗಳಲ್ಲಿ ಅಥವಾ 36 ವಾರಗಳ ನಂತರ ಅಂದರೆ ಅವರ ನಿರೀಕ್ಷಿತ ಹೆರಿಗೆ ದಿನಾಂಕಕ್ಕೆ ಸುಮಾರು ನಾಲ್ಕು ವಾರಗಳ ಮೊದಲು ಖರ್ಜೂರವನ್ನು ತೆಗೆದುಕೊಳ್ಳಲು ಪ್ರಾರಂಭಿಸಬಹುದು.

ಇದನ್ನೂ ಓದಿ: ವೈದ್ಯರು ಮೊದಲು ರೋಗಿಯ ನಾಲಿಗೆಯನ್ನು ಪರೀಕ್ಷಿಸುತ್ತಾರೆ ಯಾಕೆ? ಇದರಿಂದ ಏನು ತಿಳಿಯುತ್ತದೆ ಗೊತ್ತಾ?

ಖರ್ಜೂರದ ಅತಿಯಾದ ಸೇವನೆಯು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ:

ಖರ್ಜೂರವು ಸಾಮಾನ್ಯ ಹೆರಿಗೆಯನ್ನು ಉತ್ತೇಜಿಸುತ್ತದೆ ಎಂದು ತಿಳಿದಿದೆ, ಆದರೆ ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಕೆಟ್ಟದು. ಹಾಗಾದರೆ ಏನಾಗಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ:

  • ಖರ್ಜೂರವನ್ನು ಅತಿಯಾಗಿ ತಿನ್ನುವುದರಿಂದ ಅದರ ಹೆಚ್ಚಿನ ಕ್ಯಾಲೊರಿ ಅಂಶದಿಂದಾಗಿ ತೂಕ ಹೆಚ್ಚಾಗುತ್ತದೆ. ಪ್ರತಿ ಖರ್ಜೂರವು 23 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಅಂದರೆ ನೂರು ಗ್ರಾಂ ಖರ್ಜೂರಕ್ಕೆ ಸುಮಾರು 280 ಕ್ಯಾಲೊರಿಗಳು.
  • ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಟೈಪ್ 2 ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಸಕ್ಕರೆ ನಿಯಂತ್ರಣವನ್ನು ಹದಗೆಡಿಸುತ್ತದೆ.
  • ಖರ್ಜೂರದ ಅತಿಯಾದ ಸೇವನೆಯು ಕರುಳಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಿ ಉಬ್ಬರ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
  • ಖರ್ಜೂರವನ್ನು ಸೇವಿಸಿದ ನಂತರ ಹಲ್ಲುಗಳನ್ನು ಸ್ವಚ್ಛಗೊಳಿಸದಿದ್ದರೆ ದಂತಕ್ಷಯಕ್ಕೆ ಕಾರಣವಾಗಬಹುದು.
  • ಖರ್ಜೂರದ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಮಹಿಳೆಯರಿಗೆ ಹಾನಿ ಮಾಡುತ್ತದೆ ಏಕೆಂದರೆ ಇದು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು.

ಖರ್ಜೂರವನ್ನು ಸೇವಿಸುವುದು ಆರೋಗ್ಯಕರವಾಗಿದೆ, ಆದರೆ ಅದರ ಆರೋಗ್ಯ ಪ್ರಯೋಜನಗಳನ್ನು ಆನಂದಿಸಲು ನೀವು ಬಯಸಿದಲ್ಲಿ ಅತಿಯಾಗಿ ತಿನ್ನದೆಯೇ ಮಿತವಾಗಿ ಸೇವಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:43 pm, Tue, 31 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್