ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗೆ ಆತನ ಆಹಾರಕ್ರಮ ಯಾವ ರೀತಿ ಇರಬೇಕು ಎಂಬುದು ಬಹಳ ಮುಖ್ಯವಾಗಿರುತ್ತದೆ. ವಿಶೇಷವಾಗಿ ಬೆಳಗಿನ ಉಪಹಾರ. ನೀವು ಸೇವಿಸುವ ಉಪಹಾರ ಆರೋಗ್ಯಕರವಾಗಿದ್ದರೆ, ದಿನಪೂರ್ತಿ ಆರೋಗ್ಯದಿಂದಿರಬಹುದು. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಮಧುಮೇಹ ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ತೀವ್ರವಾಗಿ ಬಾಧಿಸುತ್ತಿದೆ. ಆದ್ದರಿಂದ ಮಧುಮೇಹಿಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಡಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಮತ್ತು ತಪ್ಪಿಸಬೇಕಾದ ಕೆಲವು ಆಹಾರಗಳು ಕುರಿತು ಮಾಹಿತಿ ಇಲ್ಲಿದೆ.
ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ:
ಮಧುಮೇಹದಿಂದ ಬಳಲುತ್ತಿರುವವರು ಮುಂಜಾನೆ ನಿಂಬೆ ನೀರನ್ನು ಕುಡಿಯಬಹುದು. 1 ಗ್ಲಾಸ್ ಬಿಸಿ ನೀರಿನಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ. ಇದನ್ನು ಕುಡಿಯುವುದರಿಂದ ನಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ನೀವು ಹೆಚ್ಚು ಉಪ್ಪು ಸೇವಿಸುತ್ತೀರಾ?; ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ
ಮೆಂತ್ಯ ನೀರು:
1 ಚಮಚ ಮೆಂತ್ಯ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೆನೆಸಿದ ಮೆಂತ್ಯವನ್ನು ಹಾಗೆಯೇ ಅಗಿಯಿರಿ.ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನೀವು ಅದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.
ನೆಲ್ಲಿಕಾಯಿ ರಸ:
ನೆಲ್ಲಿಕಾಯಿ ರಸದಲ್ಲಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸಾಕಷ್ಟು ವಿಟಮಿನ್ ಸಿ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಆದ್ದರಿಂದ, ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯಬೇಕು.
ಜೀರಿಗೆ ಚಹಾ:
1 ಲೋಟ ನೀರಿಗೆ 1 ಟೀಚಮಚ ಜೀರಿಗೆ ಸೇರಿಸಿ ಕುದಿಸಿ. ಈಗ ಇದನ್ನು ಸೋಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಜೀರಿಗೆ ಕೆಲವು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಅವು ನಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಟೀ ಕುಡಿಯುವುದರಿಂದ ನಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: