ಡೆಡ್ಲಿ ಡೆಲ್ಟಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿದೆ: ಲಸಿಕೆ ಪಡೆದವರಿಂದಲೇ ಬೇಗ ಹರಡುತ್ತಂತೆ.. ಟೇಕ್​ ಕೇರ್​!

| Updated By: ಸಾಧು ಶ್ರೀನಾಥ್​

Updated on: Jul 31, 2021 | 3:12 PM

ಸಿಡಿಸಿ ಪ್ರಕಾರ 2 ಡೋಸ್ ಲಸಿಕೆ ಪಡೆದಿರೋರು ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ. ಲಸಿಕೆ ಪಡೆಯದಿರೋರು ಡೆಲ್ಟಾ ಪ್ರಭೇದದ ವೈರಸ್ ಹರಡುವಂತೆಯೇ ಲಸಿಕೆ ಪಡೆದಿರುವವರು ಕೂಡ ಹರಡುತ್ತಾರೆ ಅಂತಾ ಸಿಡಿಸಿ ಹೇಳಿದೆ. ಸಿಡಿಸಿ ವರದಿ ಪ್ರಕಾರ ಡೆಲ್ಟಾ ಪ್ರಭೇದದ ವೈರಸ್ ವೇಗವಾಗಿ ಮೆರ್ಸ್, ಸಾರ್ಸ್, ಎಬೋಲಾಗಿಂತ ವೇಗವಾಗಿ ಹರಡುತ್ತೆ. ಜೊತೆಗೆ ಈಗ ಜಗತ್ತಿನಿಂದ ಮಾಯವಾಗಿರೋ ಸಿಡುಬಿನಷ್ಟೇ ಅಪಾಯಕಾರಿ

ಡೆಡ್ಲಿ ಡೆಲ್ಟಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿದೆ: ಲಸಿಕೆ ಪಡೆದವರಿಂದಲೇ ಬೇಗ ಹರಡುತ್ತಂತೆ.. ಟೇಕ್​ ಕೇರ್​!
ಡೆಡ್ಲಿ ಡೆಲ್ಟಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿದೆ: ಲಸಿಕೆ ಪಡೆದವರಿಂದಲೇ ಬೇಗ ಹರಡುತ್ತಂತೆ.. ಟೇಕ್​ ಕೇರ್​!
Follow us on

ಅಮೆರಿಕದ ಸಿಡಿಸಿ ಅಧ್ಯಯನದಲ್ಲಿ ಕೊರೊನಾ ವ್ಯಾಕ್ಸಿನ್ ಪಡೆದಿರುವವರು ಕೂಡ.. ರೋಗ ಹರಡುತ್ತಾರೆ ಅನ್ನೋದು ಬಯಲಾಗಿದೆ. ಅದ್ರಲ್ಲೂ.. ಲಸಿಕೆ ಪಡೆಯದವರಿಗಿಂತಾ ಲಸಿಕೆ ಪಡೆದವರೇ ವೆರಿ ಡೇಂಜರಸ್ ಅಂತಾ ಹೇಳ್ತಿದೆ. ಅದ್ರಲ್ಲೂ ಕೊರೊನಾ ಡೆಲ್ಟಾ ವೈರಸ್ ಎಲ್ಲಕ್ಕಿಂತಾ ಡೇಂಜರಸ್ ಅಂತಾ ಹೇಳಿದೆ. ಅದ್ರ ಡಿಟೇಲ್ಸ್ ಇಲ್ಲಿದೆ.

ಕೊರೊನಾ.. ಈ ಪದ ಕೇಳದವರು ಈ ಭೂಮಿಯ ಮೇಲೆಯೇ ಇರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಕೊರೊನಾ ಅನ್ನೋ ಡೆಡ್ಲಿ ವೈರಸ್ ಜಗತ್ತಿನ ಜನರನ್ನ ಕಾಡ್ತಿದೆ. ಆಲ್ಫಾ.. ಬೀಟಾ.. ಗಾಮಾ.. ಡೆಲ್ಟಾ ಇವೆಲ್ಲ ವೈಜ್ಞಾನಿಕ ವಲಯದಲ್ಲಿ ಕೇಳಿ ಬರ್ತಿದ್ದ ಪದಗಳು. ಈ ಪದಗಳು ಜನ ಸಾಮಾನ್ಯರ ಬಾಯಲ್ಲಿ ಸಾಮಾನ್ಯವಾಗಿ ಕೇಳಿ ಬರ್ತಿದೆ. ಇದಕ್ಕೂ ಈ ಕೊರೊನಾ ಅನ್ನೋ ಮಾರಕ ವೈರಸ್ ಕಾರಣವಾಗಿದೆ. ಇದರ ನಡುವೆ ಅಮೆರಿಕದ ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವ ಕೇಂದ್ರ ನೀಡಿರೋ ವರದಿ ಹಲವರನ್ನ ಬೆಚ್ಚಿ ಬೀಳಿಸಿದೆ.

ಲಸಿಕೆ ಪಡೆದವರಿಂದಲೇ ಬೇಗ ಹರಡುತ್ತಂತೆ ಕೊರೊನಾ..! ಮೆರ್ಸ್, ಸಾರ್ಸ್, ಎಬೋಲಾಗಿಂತ ಡೇಂಜರ್ ಡೆಲ್ಟಾ..!
ಸಿಡಿಸಿ ಪ್ರಕಾರ 2 ಡೋಸ್ ಲಸಿಕೆ ಪಡೆದಿರೋರು ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ. ಲಸಿಕೆ ಪಡೆಯದಿರೋರು ಡೆಲ್ಟಾ ಪ್ರಭೇದದ ವೈರಸ್ ಹರಡುವಂತೆಯೇ ಲಸಿಕೆ ಪಡೆದಿರುವವರು ಕೂಡ ಹರಡುತ್ತಾರೆ ಅಂತಾ ಸಿಡಿಸಿ ಹೇಳಿದೆ. ಸಿಡಿಸಿ ವರದಿ ಪ್ರಕಾರ ಡೆಲ್ಟಾ ಪ್ರಭೇದದ ವೈರಸ್ ವೇಗವಾಗಿ ಮೆರ್ಸ್, ಸಾರ್ಸ್, ಎಬೋಲಾಗಿಂತ ವೇಗವಾಗಿ ಹರಡುತ್ತೆ. ಜೊತೆಗೆ ಈಗ ಜಗತ್ತಿನಿಂದ ಮಾಯವಾಗಿರೋ ಸಿಡುಬಿನಷ್ಟೇ ಅಪಾಯಕಾರಿ ಅಂತಾ ಸಿಡಿಸಿ ನಿರ್ದೇಶಕಿ ರೊಚೆಲ್ಲೇ ವ್ಯಾಲೆಂಸ್ಕಿ ಹೇಳಿದ್ದಾರೆ.

ಕೊರೊನಾ ಡೆಲ್ಟಾ ವೈರಸ್ ಮೊದಲು ಪತ್ತೆಯಾಗಿದ್ದು ಭಾರತದಲ್ಲಿ. ಡೆಲ್ಟಾ ಪ್ರಭೇದದ ವೈರಸ್ ವಿಜ್ಞಾನಿಗಳಲ್ಲಿ ಎಚ್ಚರಿಕೆಯ ಭಾವನೆ ಮೂಡಿಸಿದೆ. ಡೆಲ್ಟಾ ಪ್ರಭೇದದ ವೈರಸ್ ಜಗತ್ತಿನಾದ್ಯಂತ ಹರಡಿದೆ. ಡೆಲ್ಟಾ ವೈರಸ್ ಗಂಭೀರ ಅಪಾಯ ಒಡ್ಡುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಅಂತಾ ಸಿಡಿಸಿ ಕಳವಳ ವ್ಯಕ್ತಪಡಿಸಿದೆ. ಅಮೆರಿಕದಲ್ಲಿ ಶೇಕಡ 50ರಷ್ಟು ಜನರಿಗೆ 2 ಡೋಸ್ ಲಸಿಕೆ ನೀಡಿದ್ರೂ.. ಪ್ರತಿ ವಾರ ಹೊಸದಾಗಿ 35 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಅಂತಾ ಸಿಡಿಸಿ ಹೇಳಿದೆ.

ಆಲ್ಫಾ ವೈರಸ್​ಗಿಂತಾ ಡೆಲ್ಟಾ ವೈರಸ್ ಹತ್ತು ಪಟ್ಟು ಹೆಚ್ಚು ಡೇಂಜರ್ ಅಂತಾ ಸಿಡಿಸಿ ಹೇಳಿದೆ. ಮೂಲ ವೈರಸ್​ನಿಂದ ಸೋಂಕಿತ ವ್ಯಕ್ತಿಯಲ್ಲಿರೋ ವೈರಾಣುಗಿಂತ ಸಾವಿರ ಪಟ್ಟು ಹೆಚ್ಚಿನ ಪ್ರಮಾಣದ ವೈರಾಣು ಡೆಲ್ಟಾ ಪ್ರಭೇದದ ವೈರಸ್ ಸೋಂಕಿತ ವ್ಯಕ್ತಿಯಲ್ಲಿರುತ್ತೆ ಅಂತಾ ಇತ್ತೀಚಿನ ಅಧ್ಯಯನ ಹೇಳಿದೆ. ಅಮೆರಿಕದ ಮೆಸ್ಯಾಚುವೆಟ್ಸ್ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ಸಿಡಿಸಿ ವರದಿ ಹೇಳಿದೆ.

ಸಿಡಿಸಿ ವರದಿ ಪ್ರಕಾರ ಕೊರೊನಾ ಲಸಿಕೆ ಪಡೆದಿದ್ದವರಿಗೆ ಕೊರೊನಾ ಸೋಂಕು ತಗುಲಿದ್ರೆ, ಲಸಿಕೆ ಪಡೆಯದವರು ಸೋಂಕು ಹರಡುವಷ್ಟೇ ಪ್ರಮಾಣದಲ್ಲಿ ಸೋಂಕು ಹರಡುತ್ತಾರೆ. ಯಾರು ಕೊರೊನಾ ಲಸಿಕೆ ಪಡೆದಿದ್ದಾರೋ ಅವರಿಗೆ ಸೋಂಕು ಹರಡಿದ್ರೂ.. ಗಂಭೀರ ಪರಿಣಾಮಗಳು ಎದುರಾಗಲ್ಲ ಅಂತಾ ಗೊತ್ತಾಗಿದೆ. ಅಲ್ದೆ, ಲಸಿಕೆ ಶೇಕಡ90 ರಷ್ಟು ಜನರಿಗೆ ಸೋಂಕು ತಡೆದುಕೊಳ್ಳವ ಶಕ್ತಿ ಇದೆ ಅಂತಾ ವರದಿ ಹೇಳಿದೆ.

Published On - 9:41 am, Sat, 31 July 21