ಗರ್ಭಾವಸ್ಥೆಯಲ್ಲಿ ಕೋವಿಡ್-19 ಲಸಿಕೆ ಪಡೆಯುವುದರಿಂದ ನವಜಾತ ಶಿಶುಗಳಿಗೆ ವೈರಸ್ನಿಂದ ರಕ್ಷಣೆ ಸಿಗುತ್ತದೆ -ಹೊಸ ಅಧ್ಯಯನದಿಂದ ಸಾಬೀತು
ಪ್ರೆಗ್ನೆನ್ಸಿ ವೇಳೆ ಕೊರೊನಾ ಲಸಿಕೆ ಪಡೆಯುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಹಾಗೂ ಬಾಣಂತಿಯರು ತಮ್ಮ ಮಕ್ಕಳ ಹಿತಕ್ಕಾಗಿ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕು.
ಗರ್ಭಾವಸ್ಥೆಯಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಂಡರೆ ಅದರಿಂದ ನವಜಾತ ಶಿಶುವಿಗೆ ವೈರಸ್ ವಿರುದ್ಧ ರಕ್ಷಣೆ ಸಿಗುತ್ತದೆ ಎಂದು ಹೊಸ ಅಧ್ಯಯನವೊಂದು ಸಾಬೀತುಪಡಿಸಿದೆ. ಗರ್ಭಾವಸ್ಥೆಯಲ್ಲಿನ ಮಹಿಳೆಯರಿಗೆ ಕೋವಿಡ್-19 ಲಸಿಕೆಯನ್ನು ನೀಡುವುದರಿಂದ ಶಿಶುಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕಡಿಮೆ ಮಾಡಬಹುದು.
ಗರ್ಭಾವಸ್ಥೆಯಲ್ಲಿ ಕೊರೊನಾ ವಿರುದ್ಧ ಹೋರಾಟುವುದು ಅತಿ ಮುಖ್ಯ. ಏಕೆಂದರೆ ಕೊರೊನಾದ ಪರಿಣಾಮವನ್ನು ಮಗು ಎದುರಿಸಬೇಕಾಗುತ್ತದೆ. ಮಗುವಾದ ಬಳಿಕ ಹೆಚ್ಚಿನ ಜಾಗ್ರತೆ ಮುಖ್ಯ. ತಾಯಿ ಮಗುವಿಗೆ ಎದು ಹಾಲು ಕುಡಿಸುತ್ತಾಳೆ. ಹೀಗಾಗಿ ತಾಯಿಯಲ್ಲಿರುವ ಆರೋಗ್ಯ ಸಮಸ್ಯೆ ಮಗುವಿನಲ್ಲೂ ಕಾಣಬಹುದು. ಹೀಗಾಗಿ ತಾಯಿ ಕೊರೊನಾ ಲಸಿಕೆ ಹಾಕಿಸಿಕೊಡರೆ ಇದರಿಂದ ಮಗು ಕೂಡ ಕೊರೊನಾ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆದರೆ ವ್ಯಾಕ್ಸಿನೇಷನ್ ಯುವ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದಕ್ಕೆ ಸಂಶೋಧಕರು ಹೆಚ್ಚುವರಿ ಪುರಾವೆಗಳನ್ನು ಒದಗಿಸಿದ್ದಾರೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಾಯೋಜಿಸಿದ ಹೊಸ ಅಧ್ಯಯನದ ಸಂಶೋಧನೆಗಳನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಡೆಲ್ಟಾ ಅಲೆ (ಜುಲೈ 1 – ಡಿಸೆಂಬರ್ 18, 2021) ಸಮಯದಲ್ಲಿ ಕೊರೊನಾದಿಂದ ಶಿಶುಗಳು ಆಸ್ಪತ್ರೆಗೆ ದಾಖಲಾಗುವ ಅಪಾಯವು 80% ರಷ್ಟು ಕಡಿಮೆಯಾಗಿತ್ತು. ಮತ್ತು ಓಮಿಕ್ರಾನ್ ಅಲೆಯ ಸಮಯದಲ್ಲಿ 40% ರಷ್ಟು ಕಡಿಮೆಯಾಗಿದೆ. ಇದನ್ನೂ ಓದಿ: Relationships: ಪುರುಷರಿಗಿಂತ ಮಹಿಳೆಯರು ಹೆಚ್ಚು ಮೋಸ ಮಾಡುತ್ತಾರೆ, ಯಾಕೆ ಗೊತ್ತಾ?
ಪ್ರೆಗ್ನೆನ್ಸಿ ವೇಳೆ ಕೊರೊನಾ ಲಸಿಕೆ ಪಡೆಯುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಹಾಗೂ ಬಾಣಂತಿಯರು ತಮ್ಮ ಮಕ್ಕಳ ಹಿತಕ್ಕಾಗಿ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕು. ನಮ್ಮ ಅಧ್ಯಯನವು ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರಿಗೆ ಲಸಿಕೆ ಎಷ್ಟು ಮುಖ್ಯ, ತಮ್ಮನ್ನೂ ಹಾಗೂ ತಮ್ಮ ಮಗುವನ್ನು ರಕ್ಷಿಸಲು ಎಂಬ ಬಗ್ಗೆ ಇದೆ ಎಂದು ಚಿಕಾಗೋದ ಆನ್ ಮತ್ತು ರಾಬರ್ಟ್ ಎಚ್. ಲೂರಿ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ವೈದ್ಯ ಬ್ರಿಯಾ ಕೋಟ್ಸ್ ತಿಳಿಸಿದರು. ಮತ್ತು ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿ ಫೀನ್‌ಬರ್ಗ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪೀಡಿಯಾಟ್ರಿಕ್ಸ್‌ನ ಸಹಾಯಕ ಪ್ರೊಫೆಸರ್ ಪ್ರಕಾರ, ” ಡೆಲ್ಟಾ ಅವಧಿಗೆ ಹೋಲಿಸಿದರೆ ಓಮಿಕ್ರಾನ್ ಅವಧಿಯಲ್ಲಿ ಶಿಶುಗಳ ದಾಖಲಾತಿ ಕಡಿಮೆ ಇತ್ತು. ಅಪಾಯದಲ್ಲಿ ಮಧ್ಯಮ ಕಡಿತ ಕೂಡ ಮುಖ್ಯವಾಗಿದೆ, ಏಕೆಂದರೆ ನವಜಾತ ಶಿಶುಗಳಿಗೆ ಕೊರೊನಾ ಲಸಿಕೆಗಳು ಲಭ್ಯವಿಲ್ಲ. ತಾಯಿಯೇ ಲಸಿಕೆ ಪಡೆಯುವುದರಿಂದ ಮಕ್ಕಳಲ್ಲಿ ರಿಸ್ಕ್ ಕಡಿಮೆ ಎಂದಿದ್ದಾರೆ.
ಈ ಅಧ್ಯಯನವು ಜುಲೈ 1, 2021 ರಿಂದ ಮಾರ್ಚ್ 8, 2022 ರವರೆಗೆ 22 ರಾಜ್ಯಗಳಲ್ಲಿ 30 ಮಕ್ಕಳ ಆಸ್ಪತ್ರೆಗಳಿಗೆ ದಾಖಲಾದ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳ ಬಗ್ಗೆಯ ದಾಖಲೆಯನ್ನೂ ಒಳಗೊಂಡಿದೆ. ಡಾ. ಕೋಟ್ಸ್ ಮತ್ತು ಸಹೋದ್ಯೋಗಿಗಳು ಪ್ರಕಾರ, ಹೆಚ್ಚಿನ ಶಿಶುಗಳಿಗೆ (90%) ತೀವ್ರ ನಿಗಾ ಅಗತ್ಯವಿದೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯದ ತಾಯಂದಿರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದ ಶಿಶುಗಳಲ್ಲಿಯೂ ಕೊರೊನಾ ಕಾಣಿಸಿಕೊಳ್ಳಬಹುದು. 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳು ತೀವ್ರವಾದ ಉಸಿರಾಟದ ಸಮಸ್ಯೆ ಸೇರಿದಂತೆ ಕೊರೊನಾ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಮತ್ತು ಶೇಕಡಾವಾರು ನೋಡಿದಾಗ 0-4 ವರ್ಷ ವಯಸ್ಸಿನವರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇದನ್ನೂ ಓದಿ: IND vs ENG: ತಂದೆಯ ಆರೋಗ್ಯದ ಅಪ್‌ಡೇಟ್ ನೀಡಿದ ರೋಹಿತ್ ಶರ್ಮಾ ಮಗಳು ಸಮೈರಾ! ವಿಡಿಯೋ ಸಖತ್ ವೈರಲ್