COVID mRNA Vaccine: ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಿಗೆ ಹೃದಯಾಘಾತದ ಅಪಾಯ ಹೆಚ್ಚು : ಅಧ್ಯಯನದಿಂದ ಬಹಿರಂಗ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2024 | 5:23 PM

ಇತ್ತೀಚೆಗೆ ಮಕ್ಕಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದ್ದು, ಸಣ್ಣ ವಯಸ್ಸಿನ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಮಕ್ಕಳಲ್ಲಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಇದೀಗ ಕೋವಿಡ್ ಎಂಆರ್‌ಎನ್‌ಎ ಲಸಿಕೆಯೂ ಮಕ್ಕಳ ಹೃದಯದ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಬಾಂಬ್ ಶೆಲ್ ಅಧ್ಯಯನವು ದೃಢಪಡಿಸಿದೆ.

COVID mRNA Vaccine: ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಿಗೆ ಹೃದಯಾಘಾತದ ಅಪಾಯ ಹೆಚ್ಚು : ಅಧ್ಯಯನದಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಪುರುಷರು, ಮಹಿಳೆಯರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿಯೂ ಹತ್ತು ವರ್ಷದೊಳಗಿನ ಮಕ್ಕಳನ್ನು ಸಹ ಹಾರ್ಟ್‌ ಅಟ್ಯಾಕ್ ಕಾಡುತ್ತಿದೆ. ಇದೀಗ ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಬಾಂಬ್ ಶೆಲ್ ಅಧ್ಯಯನವು ದೃಢವಾಗಿ ತಿಳಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕಾಲ್ನಡಿ ಆಂಡ್ಯೂಸ್ ನೇತೃತ್ವದ ಯುಕೆ ಪ್ರಮುಖ ವೈದ್ಯಕೀಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಜೈವಿಕ ಸಂಖ್ಯಾಶಾಸ್ತ್ರಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ತಂಡವು ಈ ಅಧ್ಯಯನವನ್ನು ನಡೆಸಿದೆ. ಈ ಅಧ್ಯಯನಕ್ಕೆ 5 ರಿಂದ 15 ವಯಸ್ಸಿನ 1.7 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಗಿದೆ.

ಸಂಶೋಧನಾ ತಂಡವು ಮಕ್ಕಳನ್ನು ಕೋವಿಡ್ “ಲಸಿಕೆಗಳನ್ನು ಪಡೆದವರು ಹಾಗೂ ಪಡೆಯದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಅಧ್ಯಯನ ನಡೆಸಿದೆ. ಈ ಅಧ್ಯಯನ ವೇಳೆ ಲಸಿಕೆ ಹಾಕದ ಒಂದೇ ಒಂದು ಮಗುವೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಆದರೆ ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅದಲ್ಲದೇ, ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್ ಪ್ರಕರಣಗಳು ಲಸಿಕೆ ಪಡೆದ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ. ಲಸಿಕೆ ಪಡೆಯದ ಮಕ್ಕಳಲ್ಲಿ ಇಂತಹ ಯಾವುದೇ ಹೃದಯ ಸಂಬಂಧಿ ಪ್ರಕರಣಗಳು ಕಂಡು ಬಂದಿಲ್ಲ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ?

ಈ ವೇಳೆಯಲ್ಲಿ ಸಂಶೋಧಕರು ಈ ಗುಂಪಿನ ಲಸಿಕೆ ಪಡೆದ ಅಥವಾ ಲಸಿಕೆ ಪಡೆಯದ ಮಕ್ಕಳು ಕೂಡ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ ಎಂದು ಗಮನಿದ್ದಾರೆ. ಕೋವಿಡ್ ಎಂಆರ್‌ಎನ್ಎ ಲಸಿಕೆಯೂ ಮಕ್ಕಳಿಗೆ ಕಡಿಮೆ ರಕ್ಷಣೆಯನ್ನು ನೀಡಿದೆ. ಹೀಗಾಗಿ ಚುಚ್ಚುಮದ್ದನ್ನು ಸ್ವೀಕರಿಸಿದ ಕೇವಲ 14 ರಿಂದ 15 ವಾರಗಳ ನಂತರ ಅನೇಕರು ಸೋಂಕಿಗೆ ಒಳಗಾಗಿದ್ದಾರೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:21 pm, Mon, 16 December 24