AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Curd Rice Benefits: ಚಳಿಗಾಲದಲ್ಲೂ ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ?

ಚಳಿಗಾಲದಲ್ಲಿ ಮೊಸರನ್ನ ತಿನ್ನುವುದರಿಂದ ಏನೂ ತೊಂದರೆಯಿಲ್ಲ. ಅನೇಕ ಜನರು ಚಳಿಗಾಲದಲ್ಲಿ ಮೊಸರನ್ನ ತಿಂದರೆ ಶೀತವಾಗುತ್ತದೆ ಎಂದು ಈ ಸಮಯದಲ್ಲಿ ಮೊಸರನ್ನ ತಿನ್ನಲು ಹಿಂದೇಟು ಹಾಕುತ್ತಾರೆ. ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಇಲ್ಲಿವೆ.

Curd Rice Benefits: ಚಳಿಗಾಲದಲ್ಲೂ ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ?
ಮೊಸರನ್ನ
ಸುಷ್ಮಾ ಚಕ್ರೆ
|

Updated on: Jan 27, 2024 | 7:15 PM

Share

ಏನೇ ಆಹಾರ ಸೇವಿಸಿದರೂ ಕೊನೆಯಲ್ಲಿ ಒಂದು ನಾಲ್ಕು ತುತ್ತು ಮೊಸರನ್ನ ತಿಂದರೆ ತೃಪ್ತಿಯಾಗುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಬಳಸಲಾಗುವ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ಆದರೆ, ಚಳಿಗಾಲದಲ್ಲಿ ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಅದರಿಂದ ಆರೋಗ್ಯಕ್ಕೆ ಏನಾದರೂ ತೊಂದರೆಗಳಿವೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಮೊಸರನ್ನ ತಿನ್ನುವುದರಿಂದ ಏನೂ ತೊಂದರೆಯಿಲ್ಲ. ಅನೇಕ ಜನರು ಚಳಿಗಾಲದಲ್ಲಿ ಮೊಸರನ್ನ ತಿಂದರೆ ಶೀತವಾಗುತ್ತದೆ ಎಂದು ಈ ಸಮಯದಲ್ಲಿ ಮೊಸರನ್ನ ತಿನ್ನಲು ಹಿಂದೇಟು ಹಾಕುತ್ತಾರೆ. ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಇಲ್ಲಿವೆ.

ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ:

ಮೊಸರನ್ನ ಪ್ರೋಬಯಾಟಿಕ್ ಸಮೃದ್ಧವಾದ ಆಹಾರವಾಗಿದೆ. ಮೊಸರಿನಲ್ಲಿರುವ ಅಂಶಗಳು ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚುವರಿ ಬೆಂಬಲದ ಅಗತ್ಯವಿರುವಾಗ ಚಳಿಗಾಲದಲ್ಲಿ ಇದು ವಿಶೇಷವಾಗಿ ಮುಖ್ಯವಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ದಿನವೂ ಸ್ನಾನ ಮಾಡುವುದು ಒಳ್ಳೆಯದಾ?

ಪೌಷ್ಠಿಕಾಂಶ ಸಮೃದ್ಧವಾಗಿದೆ:

ಅನ್ನ ಮತ್ತು ಮೊಸರಿನ ರುಚಿ ಸೇರಿಕೊಂಡು ಮೊಸರನ್ನದ ಪೌಷ್ಟಿಕಾಂಶ ಇನ್ನಷ್ಟು ಹೆಚ್ಚಾಗುತ್ತದೆ. ಇದು ಕ್ಯಾಲ್ಸಿಯಂನಂತಹ ಪ್ರಮುಖ ಅಂಶಗಳಿಂದ ತುಂಬಿದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಸುಲಭ ಜೀರ್ಣಕ್ರಿಯೆಯಿಂದಾಗಿ ಇದು ಹೊಟ್ಟೆ ಸಂಬಂಧಿತ ಸಮಸ್ಯೆ ಇರುವವರಿಗೆ ಬಹಳ ಸೂಕ್ತವಾಗಿದೆ.

ತಂಪಾದ ಆಹಾರ:

ಚಳಿಗಾಲದ ಖಾದ್ಯವಾಗಿದ್ದರೂ ಮೊಸರನ್ನವು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ವಿಶೇಷವಾಗಿ ಚಳಿಗಾಲದಲ್ಲಿ ಅಜೀರ್ಣವನ್ನು ಅನುಭವಿಸುವವರಿಗೆ ಹಿತಕರವಾಗಿರುತ್ತದೆ.

ತೂಕ ನಿರ್ವಹಣೆ:

ನೀವು ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಮೊಸರನ್ನವು ಬಹಳ ಉಪಯುಕ್ತವಾದ ಆಯ್ಕೆಯಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಇದು ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನೈಸರ್ಗಿಕವಾಗಿ ಹೊಳೆಯುವ ತ್ವಚೆ ಪಡೆಯುವುದು ಹೇಗೆ?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಮೊಸರನ್ನದಲ್ಲಿ ವಿಟಮಿನ್ ಡಿ ಮತ್ತು ಪ್ರೋಬಯಾಟಿಕ್‌ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ