ಪರ್ಫ್ಯೂಮ್ ಪುರುಷರ ಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು; ಸಂಶೋಧನೆ
ಸುಗಂಧ ದ್ರವ್ಯಗಳು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸುಗಂಧ ದ್ರವ್ಯಗಳು, ಏರ್ ಫ್ರೆಶ್ನರ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಥಾಲೇಟ್ಗಳು ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನವನ್ನು ಉಂಟುಮಾಡಬಹುದು.

ಸುಗಂಧ ದ್ರವ್ಯಗಳಲ್ಲಿ ಬಳಸುವ ರಾಸಾಯನಿಕಗಳಿಂದ ಚರ್ಮದ ಅಲರ್ಜಿಗಳು ಮತ್ತು ಹಾರ್ಮೋನುಗಳ ಅಸಮತೋಲನ ಸಾಮಾನ್ಯವಾಗಿದೆ. ಆದರೆ ಅತಿಯಾಗಿ ಪರ್ಫ್ಯೂಮ್ ಬಳಸುವ ಪುರುಷರಿಗೆ ಸಂತಾನೋತ್ಪತ್ತಿಯ ಸಮಸ್ಯೆ ಇನ್ನೂ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಡ್ರೆಸ್ಸಿಂಗ್ ಟೇಬಲ್, ವಾಶ್‌ರೂಮ್ ಅಥವಾ ಡ್ರಾಯಿಂಗ್ ರೂಮ್ ಆಗಿರಲಿ , ಪರ್ಫ್ಯೂಮ್ ಬಾಟಲ್‌ಗಳಿಂದ ಹಿಡಿದು ಬಾಡಿ ವಾಶ್‌ವರೆಗೆ, ಎಲ್ಲೆಡೆ ಸುಗಂಧ ದ್ರವ್ಯಗಳಿಂದಲೇ ಕೂಡಿರುತ್ತದೆ. ಆಕರ್ಷಕ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿದ ಸುಗಂಧ ದ್ರವ್ಯದಲ್ಲಿ ಇರುವ ರಾಸಾಯನಿಕಗಳು ನಿಮಗೆ ಅಪಾಯಕಾರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಹೌದು, ಸುಗಂಧವು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸುಗಂಧ ದ್ರವ್ಯಗಳು, ಏರ್ ಫ್ರೆಶ್ನರ್ಗಳು ಮತ್ತು ಮಾರ್ಜಕಗಳಲ್ಲಿ ಸಾಮಾನ್ಯವಾಗಿ ಬಳಸುವ ಥಾಲೇಟ್ಗಳು ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನವನ್ನು ಉಂಟುಮಾಡಬಹುದು.
ಸಂಶೋಧನೆ ಹೇಳುವುದೇನು?
USA, ಚಿಕಾಗೋದಲ್ಲಿ ENDO 2023 ರಲ್ಲಿ ಪ್ರಸ್ತಾಪಿಸಲಾದ ಅಧ್ಯಯನದ ಪ್ರಕಾರ , ಥಾಲೇಟ್‌ಗಳು ಟೆಸ್ಟೋಸ್ಟೆರಾನ್ ಹಾರ್ಮೋನ್‌ನ ಸಮತೋಲನವನ್ನು ಅಡ್ಡಿಪಡಿಸಬಹುದು . ಇದು ಪುರುಷರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದೇಹದಲ್ಲಿ ಥಾಲೇಟ್ಸ್ ರಾಸಾಯನಿಕ ಹೆಚ್ಚಾದರೆ ಅದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಯ ಹಿರಿಯ ನಿವಾಸಿ ಡಾ.ದೀಪಕ್ ಕುಮಾರ್ ಸುಮನ್. ಕೆಲವು ರಾಸಾಯನಿಕಗಳು ತುಂಬಾ ಅಪಾಯಕಾರಿಯಾಗಿದ್ದು, ಅವುಗಳು ಚರ್ಮದ ದದ್ದುಗಳು ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್ ಕ್ಯಾನ್ಸರ್ ಬರುತ್ತದಾ?
ಕಲೋನ್, ಡಿಯೋಡರೆಂಟ್ ಮತ್ತು ಶಾಂಪೂ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಥಾಲೇಟ್‌ಗಳನ್ನು ಸುಗಂಧವಾಗಿ ಬಳಸಲಾಗುತ್ತದೆ.ಥಾಲೇಟ್‌ಗಳು ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ