ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್​ ಕ್ಯಾನ್ಸರ್​ ಬರುತ್ತದಾ?

ಇತ್ತೀಚೆಗೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಬಹಳ ಹೆಚ್ಚಾಗುತ್ತಿದೆ. ಹಾಗಾದರೆ, ಮಹಿಳೆಯರಲ್ಲೂ ಈ ಪ್ರಾಸ್ಟೇಟ್ ಕ್ಯಾನ್ಸರ್​ ಕಾಣಿಸಿಕೊಳ್ಳುತ್ತದೆಯೇ? ಮಹಿಳೆಯರಿಗೆ ಪ್ರಾಸ್ಟೇಟ್ ಇಲ್ಲದಿರುವಾಗ ಪ್ರಾಸ್ಟೇಟ್ ಕ್ಯಾನ್ಸರ್ ಹೇಗೆ ಬರುತ್ತದೆ? ಎಂಬುದು ಕೆಲವರ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.

ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್​ ಕ್ಯಾನ್ಸರ್​ ಬರುತ್ತದಾ?
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on:Feb 02, 2024 | 11:10 AM

ಪ್ರಾಸ್ಟೇಟ್ ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದೆ. ಅದೃಷ್ಟವಶಾತ್, ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿರುವ ಹೆಚ್ಚಿನ ಜನರಿಗೆ ತಮ್ಮ ಪ್ರಾಸ್ಟೇಟ್ ಗ್ರಂಥಿಯನ್ನು ಮೀರಿ ಈ ಕಾಯಿಲೆ ಹರಡುವ ಮೊದಲು ಇದು ಪತ್ತೆಯಾಗುತ್ತಿದೆ. ಈ ಹಂತದಲ್ಲಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ನಿವಾರಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಾಸ್ಟೇಟ್ ಪುರುಷರಲ್ಲಿ ಮೂತ್ರಕೋಶದ ಕೆಳಗೆ (ಮೂತ್ರವನ್ನು ಸಂಗ್ರಹಿಸುವ ಟೊಳ್ಳಾದ ಅಂಗ) ಮತ್ತು ಗುದನಾಳದ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ಅಂಗ. ಇತ್ತೀಚೆಗೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಬಹಳ ಹೆಚ್ಚಾಗುತ್ತಿದೆ. ಹಾಗಾದರೆ, ಮಹಿಳೆಯರಲ್ಲೂ ಈ ಪ್ರಾಸ್ಟೇಟ್ ಕ್ಯಾನ್ಸರ್​ ಕಾಣಿಸಿಕೊಳ್ಳುತ್ತದೆಯೇ?

ಮಹಿಳೆಯರಿಗೆ ಪ್ರಾಸ್ಟೇಟ್ ಇಲ್ಲದಿರುವಾಗ ಪ್ರಾಸ್ಟೇಟ್ ಕ್ಯಾನ್ಸರ್ ಹೇಗೆ ಬರುತ್ತದೆ? ಎಂಬುದು ಕೆಲವರ ಪ್ರಶ್ನೆ. ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು, ಸ್ಕೆನ್ ಗ್ರಂಥಿಗಳು ಮೂತ್ರನಾಳದ ಕೆಳಗಿನ ತುದಿಯಲ್ಲಿರುವ ಎರಡು ಗ್ರಂಥಿಗಳಾಗಿವೆ. ಈ ಗ್ರಂಥಿಗಳನ್ನು ಸ್ತ್ರೀ ಪ್ರಾಸ್ಟೇಟ್ ಎಂದೂ ಕರೆಯುತ್ತಾರೆ. ಇದು ಪುರುಷ ಪ್ರಾಸ್ಟೇಟ್ ಗ್ರಂಥಿಯಂತೆಯೇ ಅದೇ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ಪ್ರಾಸ್ಟೇಟ್ ಕೋಶಗಳಿಂದ ಉತ್ಪತ್ತಿಯಾಗುವ ದ್ರವಗಳನ್ನು ಸ್ರವಿಸುತ್ತದೆ.

ಇದನ್ನೂ ಓದಿ: Stomach Cancer: ಹೊಟ್ಟೆಯ ಕ್ಯಾನ್ಸರ್ ಯಾಕೆ ಬಹಳ ಅಪಾಯಕಾರಿ?

ಪ್ಯಾರಾಯುರೆಥ್ರಲ್ ಗ್ರಂಥಿಗಳು ಅಥವಾ ಸ್ತ್ರೀ ಪ್ರಾಸ್ಟೇಟ್ ಎಂದೂ ಕರೆಯಲ್ಪಡುವ ಸ್ಕೆನ್ ಗ್ರಂಥಿಗಳು ಮಹಿಳೆಯರಲ್ಲಿ ಮೂತ್ರನಾಳದ ಎರಡೂ ಬದಿಯಲ್ಲಿರುವ ಸಣ್ಣ ಗ್ರಂಥಿಗಳ ಜೋಡಿಯಾಗಿದೆ. ಈ ಗ್ರಂಥಿಗಳು ಪುರುಷ ಪ್ರಾಸ್ಟೇಟ್ ಗ್ರಂಥಿಗೆ ಹೋಮೋಲಾಜಸ್ ಆಗಿದೆ. ಈ ಗ್ರಂಥಿಗಳು ಮೂತ್ರನಾಳದ ತೆರೆಯುವಿಕೆಯನ್ನು ನಯಗೊಳಿಸಲು ಒಂದು ವಸ್ತುವನ್ನು ಸ್ರವಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮೂತ್ರನಾಳದ ಸೋಂಕನ್ನು (UTI) ತಡೆಯುತ್ತದೆ.

ಸ್ಕೆನ್ ಗ್ರಂಥಿಯ ಕಾರ್ಯವು ನಿಖರವಾಗಿ ತಿಳಿದಿಲ್ಲವಾದರೂ, ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಸ್ತ್ರೀ ಸ್ಖಲನಕ್ಕೆ ಇದು ಮುಖ್ಯವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ. ಸ್ಕೆನ್ ಗ್ರಂಥಿಗಳು ಚೀಲಗಳು, ಸೋಂಕುಗಳು ಮತ್ತು ಕ್ಯಾನ್ಸರ್ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ, ಅವು ತೀರಾ ವಿರಳ ಎಂದು ವೈದ್ಯರು ಹೇಳಿದ್ದಾರೆ.

ಪ್ರಾಸ್ಟೇಟ್ ಮನುಷ್ಯನಿಗೆ ವಯಸ್ಸಾದಂತೆ ಬೆಳೆಯುತ್ತಾ ಹೋಗುತ್ತದೆ. ಕಿರಿಯ ವಯಸ್ಸಿನ ಪುರುಷರಲ್ಲಿ ಇದು ಆಕ್ರೋಡು ಗಾತ್ರದಲ್ಲಿರುತ್ತದೆ. ವಯಸ್ಸಾದ ಪುರುಷರಲ್ಲಿ ಇದು ಹೆಚ್ಚು ದೊಡ್ಡದಾಗಿರುತ್ತದೆ. ಈ ಪ್ರಾಸ್ಟೇಟ್ ಕ್ಯಾನ್ಸರ್​ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕೆಲವು ಪ್ರಾಸ್ಟೇಟ್ ಕ್ಯಾನ್ಸರ್​ಗಳು ವೇಗವಾಗಿ ಬೆಳೆಯಬಹುದು ಮತ್ತು ಹರಡಬಹುದು. ಆದರೆ ಹೆಚ್ಚಿನ ವಿಧಗಳು ನಿಧಾನವಾಗಿ ಬೆಳೆಯುತ್ತವೆ.

ಇದನ್ನೂ ಓದಿ: Prostate Cancer: ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?; ಪುರುಷರನ್ನು ಕಾಡುವ ಈ ರೋಗದ ಲಕ್ಷಣಗಳೇನು?

ಮೊದಲನೆಯದಾಗಿ, ಮಹಿಳೆಯರಿಗೆ ಪ್ರಾಸ್ಟೇಟ್ ಗ್ರಂಥಿ ಇಲ್ಲದಿರುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಆದರೆ, ಮಹಿಳೆಯರ ಸ್ಕೆನ್ ಗ್ರಂಥಿಗೆ ಕ್ಯಾನ್ಸರ್ ಬರಬಹುದು. ಇದನ್ನು ಸ್ತ್ರೀ ಮೂತ್ರನಾಳದ ಅಡೆನೊಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಸ್ಕೆನ್ ಗ್ರಂಥಿಯ ಕ್ಯಾನ್ಸರ್ ಅಥವಾ ಸ್ತ್ರೀ ಮೂತ್ರನಾಳದ ಅಡಿನೊಕಾರ್ಸಿನೋಮ ಆರಂಭಿಕ ಹಂತಗಳಲ್ಲಿ ಲಕ್ಷಣರಹಿತವಾಗಿರುತ್ತದೆ. ಕ್ಯಾನ್ಸರ್ ಗೆಡ್ಡೆ ಬೆಳೆದಂತೆ ಆ ಗೆಡ್ಡೆ ಕೈಗೆ ಸಿಗಲಾರಂಭಿಸುತ್ತದೆ.

ಮಹಿಳೆಯರಲ್ಲಿ ಈ ಕ್ಯಾನ್ಸರ್​ನ ಲಕ್ಷಣಗಳೆಂದರೆ,

– ಪೆಲ್ವಿಕ್​ ಪ್ರದೇಶದಲ್ಲಿ ತೀವ್ರವಾದ ನೋವು

– ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ

– ಮೂತ್ರನಾಳದಿಂದ ವಿಸರ್ಜನೆ

– ಜನನಾಂಗದಲ್ಲಿ ಊತ

– ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು

ಸ್ತ್ರೀ ಮೂತ್ರನಾಳದ ಅಡೆನೊಕಾರ್ಸಿನೋಮಾದ ಸಂದರ್ಭದಲ್ಲಿ ಈ ಚಿಕಿತ್ಸೆಯು ಕ್ಯಾನ್ಸರ್ ಹಂತವನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆಯು ಶಸ್ತ್ರಚಿಕಿತ್ಸೆ ಅಥವಾ ವಿಕಿರಣವಾಗಿರಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Sat, 27 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ