ದ್ರವ ಪದಾರ್ಥಗಳು ನಮ್ಮ ದೇಹದಲ್ಲಿ ಬಹಳ ಬೇಗ ಜೀರ್ಣವಾಗುತ್ತದೆ. ದಕ್ಷಿಣ ಭಾರತೀಯರಿಗೆ ಊಟದಲ್ಲಿ ಮೊಸರು (Curd) ಬೇಕೇ ಬೇಕು. ಕೊನೆಯಲ್ಲಿ ಮೊಸರನ್ನ ತಿನ್ನದಿದ್ದರೆ ಅದೆಷ್ಟೋ ಜನರಿಗೆ ತೃಪ್ತಿಯೇ ಆಗುವುದಿಲ್ಲ. ಆದರೆ, ಎಲ್ಲ ಸಮಯದಲ್ಲೂ ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೀಗ ಬೇಸಿಗೆ ಶುರುವಾಗಿದೆ. ಹೀಗಾಗಿ, ಮೊಸರು, ಮಜ್ಜಿಗೆಯ ಬಳಕೆಯೂ ಹೆಚ್ಚಾಗುತ್ತದೆ. ಡಯಟ್ ಮಾಡುವವರು ಮೊಸರಿನಿಂದ ಆದಷ್ಟು ದೂರವಿರುತ್ತಾರೆ. ಆಯುರ್ವೇದದ (Ayurveda) ಪ್ರಕಾರ, ರಾತ್ರಿ ಮೊಸರು ತಿನ್ನುವುದರಿಂದ ಕಫ, ಅಸ್ತಮಾ ಸಮಸ್ಯೆ ಇರುವವರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಮೊಸರು ಹುಳಿ ಮತ್ತು ಸಿಹಿಯಿಂದ ಕೂಡಿರುವುದರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ.
ಮೊಸರನ್ನು ರಾತ್ರಿ ವೇಳೆ ಸೇವಿಸುತ್ತಿದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆ. ಇದರಿಂದ ರಾತ್ರಿ ಸಮಯದಲ್ಲಿ ಮೊಸರಿನ ಬಳಕೆ ಮಾಡದಿರುವುದು ಉತ್ತಮ ಎಂದು ಆಯುರ್ವೇದ ತಿಳಿಸಿದೆ.
ಮೊಸರು ದೇಹಕ್ಕೆ ಒಳ್ಳೆಯದಾದರೂ ಇದನ್ನು ಎಲ್ಲಾ ಸಮಯದಲ್ಲೂ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಕಫ ಪ್ರವೃತ್ತಿ ಇರುವಂತಹ ಜನರು ರಾತ್ರಿ ಮೊಸರು ಸೇವನೆ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಅಸ್ತಮಾ ಮತ್ತು ಮೂಳೆ ಸಮಸ್ಯೆ ಇರುವ ಜನರು ಮೊಸರನ್ನು ರಾತ್ರಿ ವೇಳೆ ಸೇವಿಸಲೇಬಾರದು. ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿ ಬೇಕು. ಆದರೆ, ರಾತ್ರಿಗಿಂತಲೂ ಹಗಲು ಹೊತ್ತಿನಲ್ಲಿ ಮೊಸರು ಸೇವಿಸುವುದು ಉತ್ತಮ.
ಮೊಸರು ಹಲವಾರು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ ಮತ್ತು ಚರ್ಮ ಮತ್ತು ಕೂದಲಿನ ಮೇಲೆ ಸಾಮಯಿಕ ಅಪ್ಲಿಕೇಶನ್‌ಗೆ ಸಹ ಉತ್ತಮವಾಗಿದೆ. ಮೊಸರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೂಳೆಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಾವಸರ್ ಸವಲಿಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ‘ಆಯುರ್ವೇದಿಕ್ ಲೆನ್ಸ್’ ಮೂಲಕ ಮೊಸರನ್ನು ಹೇಗೆ ನೋಡುತ್ತಾರೆ ಎಂಬುದನ್ನು ವಿವರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ಮೊಸರು ರುಚಿಯಲ್ಲಿ ಹುಳಿ, ಸ್ವಭಾವತಃ ಬಿಸಿಯಾಗಿರುತ್ತದೆ. ಅದನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ. ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು. ಹಾಗೆ ಮಾಡಿದರೆ ಮೊಸರು ತನ್ನ ಗುಣಗಳನ್ನು ಕಳೆದುಕೊಳ್ಳುತ್ತದೆ.
ನೀವು ಮೊಸರನ್ನು ಇಷ್ಟ ಪಡುವವರಾದರೆ ಮೊಸರಿನ ಬಗ್ಗೆ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ.
– ಸ್ಥೂಲಕಾಯತೆ, ಕಫ, ರಕ್ತಸ್ರಾವದ ಅಸ್ವಸ್ಥತೆಗಳು ಮತ್ತು ಉರಿಯೂತದ ಪರಿಸ್ಥಿತಿಗಳಿರುವ ಜನರು ಮೊಸರನ್ನು ಸೇವಿಸದಿರುವುದು ಉತ್ತಮ.
– ಮೊಸರನ್ನು ರಾತ್ರಿಯಲ್ಲಿ ಸೇವಿಸಬಾರದು.
– ಮೊಸರನ್ನು ಪ್ರತಿನಿತ್ಯ ಸೇವಿಸಬಾರದು. ಕಲ್ಲು ಉಪ್ಪು, ಕರಿಮೆಣಸು ಮತ್ತು ಜೀರಿಗೆಯಂತಹ ಮಸಾಲೆಗಳನ್ನು ಸೇರಿಸಿದ ಮಜ್ಜಿಗೆಯನ್ನು ನಿಯಮಿತವಾಗಿ ಸೇವಿಸಬಹುದಾದ ಏಕೈಕ ವ್ಯತ್ಯಾಸವಾಗಿದೆ.
– ನಿಮ್ಮ ಮೊಸರನ್ನು ಹಣ್ಣುಗಳೊಂದಿಗೆ ಬೆರೆಸಬೇಡಿ. ಏಕೆಂದರೆ ಇದು ಚಾನಲ್ ಬ್ಲಾಕರ್ ಹೊಂದಿಕೆಯಾಗದ ಆಹಾರವಾಗಿದೆ.
– ಮೊಸರು ಮಾಂಸ ಮತ್ತು ಮೀನಿಗೆ ಹೊಂದಿಕೆಯಾಗುವುದಿಲ್ಲ. ಚಿಕನ್, ಮಟನ್ ಅಥವಾ ಮೀನಿನಂತಹ ಮಾಂಸದ ಜೊತೆಗೆ ಬೇಯಿಸಿದ ಆಹಾರ ಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಿದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
(ಸೂಚನೆ: ಈ ಮೇಲಿನ ಸಲಹೆಗಳಿಗೂ ಟಿವಿ9ಗೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಆಯುರ್ವೇದ ತಜ್ಞರು ನೀಡಿರುವ ಸಲಹೆಯಾಗಿದ್ದು, ಸಂಪೂರ್ಣವಾಗಿ ಅವರ ವೈಯಕ್ತಿಯ ಅಭಿಪ್ರಾಯವಾಗಿರುತ್ತದೆ)
ಇದನ್ನೂ ಓದಿ: Women Health: ಮುಟ್ಟಿನ ಸಮಯದಲ್ಲಿ ಮೊಸರು ತಿನ್ನುವುದು ಸುರಕ್ಷಿತವೇ? ಇಲ್ಲಿದೆ ಸಂಪೂರ್ಣ ಮಾಹಿತಿ