ಹೆರಿಗೆ ಬಳಿಕ ಕಾಣಿಸಿಕೊಳ್ಳುವ ಬೆನ್ನು ನೋವಿನ ಪರಿಹಾರಕ್ಕೆ ಹೀಗೆ ಮಾಡಿ

ಹೆರಿಗೆಯ ಬಳಿಕ ಸ್ತನ್ಯಪಾನ ಮಾಡಿಸುವ ವೇಳೆ ಸಾಕಷ್ಟು ಸಮಯ ಕುಳಿತುಕೊಳ್ಳಬೇಕು. ಹೀಗಾಗಿ ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಬೆನ್ನಿಗೆ ದಿಂಬು ಅಥವಾ ಮೆತ್ತನೆಯ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ.

ಹೆರಿಗೆ ಬಳಿಕ ಕಾಣಿಸಿಕೊಳ್ಳುವ ಬೆನ್ನು ನೋವಿನ ಪರಿಹಾರಕ್ಕೆ ಹೀಗೆ ಮಾಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 22, 2022 | 11:43 AM

ತಾಯ್ತನ ಪ್ರತೀ ಮಹಿಳೆಯ ಜೀವನದ ಬಹುಮುಖ್ಯ ಭಾಗ. ಮಗುವನ್ನು ಪಡೆಯುವ ಖುಷಿಯ ಜತೆಗೆ  ಒಂದಷ್ಟು ಕಷ್ಟದ, ನೋವಿನ ಸಂದರ್ಭಗಳನ್ನು ಆಕೆ ಎದುರಿಸಲೇಬೇಕು. ಮಗುವಿನ ಜನನ ಪ್ರತೀ ಹೆಣ್ಣಿನ ಪುನರ್ಜನ್ಮ ಎಂದೇ ಹೇಳುತ್ತಾರೆ. ತನ್ನ ಜೀವನದ ಮೂಲಕ ಇನ್ನೊಂದು ಜೀವಕ್ಕೆ ಉಸಿರು ನೀಡುವ ಆಗ ಆಕೆ ಅನುಭವಿಸುವ ನೋವು ಅವಳಿಗೆ ಮಾತ್ರ ಗೊತ್ತು.  ಜೀವ ಹಿಂಡುವ ನೋವಿನಲ್ಲಿಯೂ ಸಂತೋಷ ಕಾಣುವವಳು ಹೆಣ್ಣು, ಪ್ರಸವದ ಮೊದಲು ಒಂದಷ್ಟು ನೋವು, ಕಿರಿಕಿರಿಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಹೆರಿಗೆಯ ಬಳಿಕವೂ ಹೆಣ್ಣಿನ ದೇಹ ಸೂಕ್ಷ್ಮವಾಗಿಯೇ ಇರುತ್ತದೆ ಹೀಗಾಗಿ, ಕಾಲು, ಸೊಂಟ, ಬೆನ್ನು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮೊದಲ ಬಾರಿಗೆ ತಾಯಿಯಾದವರಲ್ಲಿ ಎಲ್ಲವೂ ಹೊಸತು. ಹೆರಿಗೆಯ ನಂತರದಲ್ಲಿ ಕಾಣಿಸಿಕೊಳ್ಳುವ ಬೆನ್ನುನೋವನ್ನು ನಿಭಾಯಿಸುವುದು ಹೇಗೆ ಎಂದು ಕ್ಲೌಡ್​ನೈನ್​ ಗ್ರುಪ್​ ಆಫ್​ ಹಾಸ್ಪಿಟಲ್ಸ್​ನ ಎಕ್ಸಿಕ್ಯುಟಿವ್ ಫಿಸಿಯೋಥೆರಪಿಸ್ಟ್ ಶಿಖಾ ಕುಮಾರಿ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಇಲ್ಲಿದೆ ಮಾಹಿತಿ.

ಕುಳಿತುಕೊಳ್ಳುವ ಭಂಗಿ: ಹೆರಿಗೆಯ ಬಳಿಕ ಸ್ತನ್ಯಪಾನ ಮಾಡಿಸುವ ವೇಳೆ ಸಾಕಷ್ಟು ಸಮಯ ಕುಳಿತುಕೊಳ್ಳಬೇಕು. ಹೀಗಾಗಿ ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಬೆನ್ನಿಗೆ ದಿಂಬು ಅಥವಾ ಮೆತ್ತನೆಯ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ. ಇದರಿಂದ ನೆನಿಗೆ ಸರಿಯಾದ ಆದಾರ ಸಿಕ್ಕಿ ಬೆನ್ನು ನೋವು ನಿವಾರಣೆಯಾಗುತ್ತದೆ.

ನೇರವಾಗಿ ಕುಳಿತುಕೊಳ್ಳಿ: ಸ್ತನ್ಯಪಾನದ ವೇಳೆ ಬೆನ್ನನ್ನು ನೇರವಾಗಿ ಇರಿಸಿ ಕುಳಿತುಕೊಳ್ಳಿ. ಪ್ರಸವದ ಬಳಿಕ ದೇಹ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಕುಳಿತುಕೊಳ್ಳುವ ಭಂಗಿಯಿಂದ ಹೀಡಿದು ಪ್ರತಿಯೊಂದು ಅಂಗದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯ. ಆದ್ದರಿಂದ ಮಗುವನ್ನು ಎತ್ತಿಕೊಂಡಾಗ ಮುಂದಕ್ಕೆ ಬಾಗಿ ಕುಳಿತುಕೊಳ್ಳಬೇಡಿ.

ಬೆನ್ನಿಗೆ ಸರಿಯಾದ ಆಧಾರವಿಟ್ಟುಕೊಳ್ಳಿ: ನಾರ್ಮಲ್​ ಡೆಲಿವರಿ ಆದ ಸಂದರ್ಭದಲ್ಲಿ ನೋವನ್ನು ನಿಯಂತ್ರಿಸಲು ಬೆನ್ನು ಬಾಗಿಸಿ ಬಗ್ಗಿ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಹೀಗೆ ಮಾಡಿದರೆ ಬೇಗನೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಕುಳಿತುಕೊಳ್ಳುವ ವೇಳೆ ಬೆನ್ನಿನ ಹಿಂಬಾಗದಲ್ಲಿ ಸರಿಯಾಗಿ ಆನಿಸಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ದಿಂಬನ್ನುಇರಿಸಿಕೊಳ್ಳಿ.

ವ್ಯಾಯಾಮ ಮಾಡಿ: ಮೊದಲ ಬಾರಿ ತಾಯಿಯಾದ ವೇಳೆ  ಬೆನ್ನು ನೋವು ಕಾಣಿಸಿಕೊಂಡರೆ ಲಘು ವ್ಯಾಯಾಮ ಮಾಡಿ. ದೇಹಕ್ಕೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳಿ. ಉದಾಹರಣೆಗೆ ಪೆಲ್ವಿಕ್​ ಬ್ರಿಡ್ಜಿಂಗ್​ ಆಸನಗಳು,  ಬೆಳಗ್ಗೆ ಮತ್ತು ಸಂಜೆ ನಿಧಾನವಾಗಿ ನಡೆದಾಡಿ.  ಇದರಿಂದ ದೇಹದ ಭಾಗಗಳಿಗೆ ಚಲನೆ ಉಂಟಾಗಿ ಬೆನ್ನು ನೋವು ಕೂಡ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ