ಕಾಂಗ್ರೆಸ್ ನಾಯಕರಿಗೆ ಭಾರತೀಯ ಸೇನೆಯ ಸಾಹಸ ಶೌರ್ಯದ ಬಗ್ಗೆ ಹೆಮ್ಮೆಯೇ ಇಲ್ಲ: ಡಾ ಸಿಎನ್ ಅಶ್ವಥ್ ನಾರಾಯಣ
ನಮ್ಮ ಸೈನಿಕರ ಧೈರ್ಯ ಶೌರ್ಯಗಳ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಅಭಿಮಾನ ಮತ್ತು ಹೆಮ್ಮೆ ಇದ್ದಂತಿಲ್ಲ, ಸೈನಿಕರು ಭಯೋತ್ಪಾದನೆಯನ್ನು ಮಟ್ಟಹಾಕಿ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದ್ದಾರೆ, ಇಡೀ ವಿಶ್ವವೇ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ, ಆದರೆ ಕಾಂಗ್ರೆಸ್ ಮಾತ್ರ ಮತ್ತೇನನ್ನೋ ಮಾಡುತ್ತಿದೆ, ಭಾರತೀಯ ಸೈನಿಕರ ಸಾಹಸ ಅವರಿಗೆ ಅರ್ಥವಾಗಿಲ್ಲವಾದರೆ ಅರ್ಥಮಾಡಿಸುವ ಕೆಲಸ ಮಾಡಬೇಕಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.
ಬೆಂಗಳೂರು, ಮೇ 13: ಭಾರತ ಮತ್ತು ಪಾಕಿಸ್ತಾನದ ನಡುವೆ ಶುರುವಾಗಿದ್ದ ಯುದ್ಧ ನಿಂತುಹೋಗಿ, ಕದನ ವಿರಾಮ ಘೋಷಣೆಯಾಗಿರುವಾಗ ಯುವಕ ಕಾಂಗ್ರೆಸ್ ನಾಯಕರು ಭಾರತೀಯ ಸೇನೆಯ ಸಾಹಸವನ್ನು ಕೊಂಡಾಡುವ ಬದಲು ಇಂದಿರಾಗಾಂಧಿ 1971 ರಲ್ಲಿ ಏನು ಮಾಡಿದರು ಅಂತ ಹೇಳುವ ಪೋಸ್ಟರ್ ಗಳನ್ನು ಬೀದಿಗಳಲ್ಲಿ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಹೇಳಿದರು. ಕೂಡಲೇ ಈ ಪೋಸ್ಟರ್ಗಳನ್ನು ತೆಗೆಸಬೇಕೆಂದು ತಾನು ಬಿಬಿಎಂಪಿ ಆಯುಕ್ತರನ್ನು ಆಗ್ರಹಿಸುತ್ತೇನೆ, ಹೀಗೆ ಹೋರ್ಡಿಂಗ್ ಗಳನ್ನು ಹಾಕುವುದು ಕಾನೂನುಬಾಹಿರ ಅಂತ ಗೊತ್ತಿದ್ದರೂ ಅನುಮತಿ ಯಾಕೆ ನೀಡಲಾಯಿತು ಎಂದು ತಾನು ಪ್ರಶ್ನಿಸುವುದಾಗಿ ಅಶ್ವಥ್ ನಾರಾಯಣ ಹೇಳಿದರು.
ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮದ ಬಳಿಕ, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಟ್ರೋಲ್ ಆಗಿದ್ದೇಕೆ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ