ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ

ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ

Egg White Side effect: ಮೊಟ್ಟೆಯ ಬಿಳಿಭಾಗವನ್ನು ಸೇವಿಸುವುದರಿಂದ ಅವರು ಆರೋಗ್ಯವಂತರಾಗಲು ಸಾಧ್ಯವಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಅನೇಕ ವಿಧಗಳಲ್ಲಿ ಇದು ಹಾನಿಕಾರಕವೆಂದು ಸಾಬೀತುಪಡಿಸಬಹುದು. ಈ ಸಮಸ್ಯೆಗಳ ಬಗ್ಗೆ ನಾವು ತಿಳಿಯಲೇಬೇಕು.

TV9kannada Web Team

| Edited By: preethi shettigar

Feb 21, 2022 | 1:57 PM

ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಮೊಟ್ಟೆಗಳನ್ನು(Egg) ಸೇವಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಏಕೆಂದರೆ ಇದರಲ್ಲಿ ಪ್ರೋಟೀನ್, ವಿಟಮಿನ್, ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿ ಲಭ್ಯವಿವೆ. ಮನೆಯಲ್ಲಿ ಜಿಮ್, ರನ್ನಿಂಗ್ ಅಥವಾ ವ್ಯಾಯಾಮ ಮಾಡುವ ಹೆಚ್ಚಿನ ಜನರು ಪ್ರತಿದಿನ ಮೊಟ್ಟೆಗಳನ್ನು ಸೇವಿಸುತ್ತಾರೆ. ತಜ್ಞರ ಪ್ರಕಾರ, ಹೆಚ್ಚಿನವರು ಮೊಟ್ಟೆಯ ಬಿಳಿಭಾಗವನ್ನು(Egg White) ಮಾತ್ರ ಸೇವಿಸುತ್ತಾರೆ. ಮೊಟ್ಟೆಯ ಬಿಳಿ ಭಾಗ ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಮೊಟ್ಟೆಯ ಬಿಳಿ ಭಾಗ ಕೊಬ್ಬು ಮುಕ್ತ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಸರಿ. ಅದೇ ಸಮಯದಲ್ಲಿ ಅನೇಕ ದುಷ್ಪರಿಣಾಮಗಳನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿಭಾಗವು ಫಿಟ್ ಆಗಿರಲು ಸಹಕಾರಿಯಾಗಿದ್ದರೂ, ಇದರ ಸೇವನೆಯು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮೊಟ್ಟೆಯ ಬಿಳಿಭಾಗವನ್ನು ಸೇವಿಸುವುದರಿಂದ ಅವರು ಆರೋಗ್ಯವಂತರಾಗಲು(Health) ಸಾಧ್ಯವಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಅನೇಕ ವಿಧಗಳಲ್ಲಿ ಇದು ಹಾನಿಕಾರಕವೆಂದು ಸಾಬೀತುಪಡಿಸಬಹುದು. ಈ ಸಮಸ್ಯೆಗಳ ಬಗ್ಗೆ ನಾವು ತಿಳಿಯಲೇಬೇಕು.

ಅಲರ್ಜಿ

ಮೊಟ್ಟೆಯ ಬಿಳಿ ಭಾಗವನ್ನು ಅತಿಯಾಗಿ ಸೇವಿಸಿದರೆ ಅದು ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಚರ್ಮದ ಮೇಲಿನ ಅಲರ್ಜಿಗಳು ದೀರ್ಘಕಾಲದವರೆಗೆ ನಿಮ್ಮನ್ನು ಕಾಡಬಹುದು. ಈ ಕಾರಣದಿಂದಾಗಿಯೇ, ಚಿಕ್ಕ ಮಕ್ಕಳಲ್ಲಿ ಅಲರ್ಜಿಯ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಈ ಅಲರ್ಜಿಯು ತೀವ್ರ ಸ್ವರೂಪವನ್ನು ಪಡೆದರೆ, ಅದನ್ನು ಅನಾಫಿಲ್ಯಾಕ್ಟಿಕ್ ಆಘಾತ ಎಂದು ಕರೆಯಲಾಗುತ್ತದೆ.

ವಿಷಯುಕ್ತ ಆಹಾರ

ಅನೇಕ ಬಾರಿ ಜನರು ದೇಹವನ್ನು ಫಿಟ್ ಆಗಿರುವಂತೆ ಮಾಡಲು ಹಸಿ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ. ಇದರಿಂದ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ಇದು ಆಹಾರ ವಿಷಕ್ಕೆ ಕಾರಣವಾಗಬಹುದು. ಅಂದಹಾಗೆ, ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು. ಏಕೆಂದರೆ ಅದನ್ನು ಕುದಿಸುವುದರಿಂದ ಅದರಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊರಹಾಕಲಾಗುತ್ತದೆ.

ಮೂತ್ರಪಿಂಡದ ಸಮಸ್ಯೆ

ಆರೋಗ್ಯಕರವಾಗಿರಲು ಪ್ರೋಟೀನ್ ಭರಿತ ವಸ್ತುಗಳನ್ನು ಸೇವಿಸಬೇಕು. ಆದರೆ ದೇಹದಲ್ಲಿ ಪ್ರೋಟೀನ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದರೆ, ಮೂತ್ರಪಿಂಡದ ಆರೋಗ್ಯವು ಪರಿಣಾಮ ಬೀರಬಹುದು. ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು, ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಮೊಟ್ಟೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಲಭ್ಯವಿದ್ದು, ನೀವು ಅದನ್ನು ಹೆಚ್ಚು ಸೇವಿಸಿದರೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಆವರಿಸಬಹುದು.

ಮಲಬದ್ಧತೆ

ಮೊಟ್ಟೆಯ ಬಿಳಿ ಭಾಗದಲ್ಲಿ ದೇಹಕ್ಕೆ ಅಗತ್ಯವೆಂದು ಪರಿಗಣಿಸಲಾದ ಪ್ರೋಟೀನ್ ಮತ್ತು ವಿಟಮಿನ್‌ಗಳು ಇದ್ದರೂ, ಹೊಟ್ಟೆಯನ್ನು ಆರೋಗ್ಯಕರವಾಗಿಡುವ ಫೈಬರ್ ಅದರಲ್ಲಿ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊಟ್ಟೆಯನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಮಲಬದ್ಧತೆಯಂತಹ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.

ಇದನ್ನೂ ಓದಿ:

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ದಾಲ್ಚಿನ್ನಿ; ಇದನ್ನು ಆರೋಗ್ಯಕ್ಕೆ ಪೂರಕವಾಗಿ ಬಳಸುವ ಕ್ರಮ ಹೇಗೆ ಗೊತ್ತಾ?

ಮೂತ್ರ ವಿಸರ್ಜನೆಯನ್ನು ಹೆಚ್ಚು ಹೊತ್ತು ತಡೆಯುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು?

Follow us on

Related Stories

Most Read Stories

Click on your DTH Provider to Add TV9 Kannada