Hair Care: ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆಗಳು ಉತ್ತಮ
ಕರಿಬೇವಿನ ಎಲೆಗಳ ಸಹಾಯದಿಂದ ಪ್ರತಿಯೊಬ್ಬ ಮಹಿಳೆ ಬಯಸುವ ಆರೋಗ್ಯಕರ ಕೂದಲನ್ನು ಬೆಳೆಸಬಹುದು. ಹೇಗೆ? ಜೊತೆಗೆ ಕೆಲವು ನಂಬಲಾಗದ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕರಿಬೇವಿನ ಎಲೆಗಳು ಭಾರತ, ಶ್ರೀಲಂಕಾದ ಸ್ಥಳೀಯ ಆಹಾರಗಳಲ್ಲಿ ಮತ್ತು ದಕ್ಷಿಣ ಭಾರತದ ಅಡುಗೆಗಳಲ್ಲಿ ಬಳಸುವ ಪ್ರಮುಖ ವಸ್ತು ಅಥವಾ ಪದಾರ್ಥಗಳಲ್ಲಿ ಒಂದಾಗಿದೆ. ಆಯುರ್ವೇದ ವೈದ್ಯರಿಂದ ಕಡಿ ಪಟ್ಟಾ ಅಥವಾ ಮೀಥಾ ಬೇವು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಹೆಸರು ನಿಮಗೆ ಬಾಯಲ್ಲಿ ನೀರೂರಿಸುವ ಪರಿಮಳವನ್ನು ನೀಡುತ್ತದೆ. ಇದನ್ನು ನಾವು ಆಡು ಮಾತಿನಲ್ಲಿ ಒಗ್ಗರಣೆ ಸೊಪ್ಪು ಅಥವಾ ಕರಿಬೇವಿನ ಸೊಪ್ಪು ಎನ್ನುತ್ತೇವೆ ಇದಲ್ಲದೆ, ಈ ಘಟಕಾಂಶವು ಆಹಾರದಲ್ಲಿ ಎಷ್ಟು ಅವಶ್ಯಕವಾಗಿದೆ, ಕರಿಬೇವಿನ ಎಲೆಗಳ ಇತರ ಕೆಲವು ಆರೋಗ್ಯ ಪ್ರಯೋಜನಗಳೇನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕರಿಬೇವಿನ ಎಲೆಗಳು ಕೂದಲಿನ ಬೆಳವಣಿಗೆಗೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇದರ ಸಹಾಯದಿಂದ ಪ್ರತಿಯೊಬ್ಬ ಮಹಿಳೆ ಬಯಸುವ ಆರೋಗ್ಯಕರ ಕೂದಲನ್ನು ಬೆಳೆಸಲು ಇದು ಸಹಕಾರಿಯಾಗಿದೆ. ಈ ಎಲೆಗಳಲ್ಲಿ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ, ಇದು ನಿಮ್ಮ ನೆತ್ತಿಯಲ್ಲಿ ಹೊಸದಾಗಿ ಕೂದಲು ಬೆಳೆಯುವ ಪ್ರಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಕರಿಬೇವಿನ ಈ ಪ್ರಮುಖ ಪೋಷಕಾಂಶಗಳು ನಿಮ್ಮ ಕೂದಲಿನ ಬೆಳವಣಿಗೆಗೆ ಮುಖ್ಯವಾಗಿದೆ. ಪೌಷ್ಟಿಕ ತಜ್ಞ ಕಿರಣ್ ಕುಕ್ರೇಜಾ ಅವರ ಪ್ರಕಾರ ಕರಿ ಬೇವಿನ ಎಲೆಗಳಿಂದ ಕೂದಲಿಗೆ ಇನ್ನೂ ಕೆಲವು ಪ್ರಯೋಜನಗಳನ್ನು ಸೂಚಿಸುತ್ತಾರೆ.
ನೆತ್ತಿಯನ್ನು ಪೋಷಿಸುತ್ತದೆ: ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ಗಳು ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ, ಇದು ನೆತ್ತಿಯನ್ನು ಪೋಷಿಸಲು ಸಹಾಯ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ಒಟ್ಟಾರೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ನೆತ್ತಿ ಬಹಳ ಮುಖ್ಯವಾಗಿರುತ್ತದೆ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಕರಿಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಅವು ಬೀಟಾ-ಕ್ಯಾರೋಟಿನ್ ಅನ್ನು ಸಹ ಹೊಂದಿರುತ್ತವೆ, ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ.
ಇದನ್ನೂ ಓದಿ: Hair Care Tips: ಬೇಸಿಗೆಯಲ್ಲಿ ನಿಮ್ಮ ಕೂದಲನ್ನು ಪೋಷಿಸಲು ನೈಸರ್ಗಿಕ ಹೇರ್ ಕಂಡೀಷನರ್ ಇಲ್ಲಿದೆ
ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ: ಕರಿಬೇವಿನ ಎಲೆಗಳು ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಸೆಲೆನಿಯಂನಂತಹ ಖನಿಜಗಳನ್ನು ಹೊಂದಿರುತ್ತವೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಮತ್ತು ರೂಟ್ ನಿಂದ ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಬಲವಾದ ಬೇರುಗಳು ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕೂದಲು ಅಕಾಲಿಕ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ: ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತವೆ. ಇದು ಕೂದಲಿನ ಮೇಲೆ ವಯಸ್ಸಾಗುವಿಕೆ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಿದೆ. ಭಾರತೀಯ ಪಾಕ ಪದ್ಧತಿಯಲ್ಲಿ ಬೆಳೆ ಮತ್ತು ಪಲ್ಯಗಳಿಗೆ ಕರಿಬೇವಿನ ಎಲೆಗಳನ್ನು ಸೇರಿಸುವ ಸಂಪ್ರದಾಯವು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ, ಅವುಗಳ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗಾಗಿಯೂ ಬಳಸಲಾಗುತ್ತದೆ.
ಕೂದಲನ್ನು ಸರಿಪಡಿಸುವುದು: ಅನಾರೋಗ್ಯಕರ ಆಹಾರ ಅಥವಾ ಅತ್ಯಂತ ಕಲುಷಿತ ವಾತಾವರಣವಾಗಿರಲಿ, ನಿಮ್ಮ ಕೂದಲಿನ ಮೇಲೆ ಹೆಚ್ಚಿನ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಕರಿಬೇವಿನ ಎಲೆಗಳು ಮಾಲಿನ್ಯಕಾರಕಗಳು ಮತ್ತು ಫ್ರೀ ರ್ಯಾಡಿಕಲ್ಗಳ ನಕಾರಾತ್ಮಕ ಪರಿಣಾಮಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಈ ಎಲೆಗಳು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿರಲು ಅನುವು ಮಾಡಿಕೊಡುತ್ತದೆ.