ನಿಮ್ಮ ಮಗುವಿನಲ್ಲಿ ಹಸಿವು ಕಡಿಮೆಯಾಗುವುದಕ್ಕೆ ನೀವು ಹೇಳಿಕೊಟ್ಟ ಈ ಅಭ್ಯಾಸವೇ ಕಾರಣ!

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆಯಾಗುತ್ತಿದ್ದಂತೆ ಚಹಾ ಮತ್ತು ಕಾಫಿ ಕುಡಿಯುವುದು ಸಾಮಾನ್ಯ. ದೊಡ್ಡವರು ಚಹಾ ಅಥವಾ ಕಾಫಿ ಕುಡಿಯುವುದಲ್ಲದೆ ಮಕ್ಕಳಿಗೂ ಕುಡಿಯಲು ಕೊಡುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಇಂತಹ ಅಭ್ಯಾಸ ತುಂಬಾ ಹಾನಿಕಾರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಾದರೆ ಮಕ್ಕಳು ಯಾಕೆ ಕಾಫಿ ಸೇವನೆ ಮಾಡಬಾರದು, ಒಂದು ಕಪ್ ಕಾಫಿ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮ್ಮ ಮಗುವಿನಲ್ಲಿ ಹಸಿವು ಕಡಿಮೆಯಾಗುವುದಕ್ಕೆ ನೀವು ಹೇಳಿಕೊಟ್ಟ ಈ ಅಭ್ಯಾಸವೇ ಕಾರಣ!
ಮಕ್ಕಳು ಕಾಫಿ ಕುಡಿಯುವ ಅಭ್ಯಾಸದಿಂದ ಉಂಟಾಗುವ ಅಡ್ಡಪರಿಣಾಮಗಳು

Updated on: Dec 30, 2025 | 4:15 PM

ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆ ಸಮಯದಲ್ಲಿ ಚಹಾ ಅಥವಾ ಕಾಫಿ (Coffee) ಕುಡಿಯುವ ಅಭ್ಯಾಸ ಹಲವರಿಗಿರುತ್ತದೆ. ಈ ಅಭ್ಯಾಸ ಅಷ್ಟಾಗಿ ಆರೋಗ್ಯಕರವಲ್ಲ ಎಂದು ತಿಳಿದಿದ್ದರೂ ಸಹ ಅದನ್ನು ಬಿಡಲು ಮನಸ್ಸು ಒಪ್ಪುವುದಿಲ್ಲ. ಅದರಲ್ಲಿಯೂ ಕೆಲವು ಮನೆಗಳಲ್ಲಿ ದೊಡ್ಡವರು ಚಹಾ ಅಥವಾ ಕಾಫಿ ಕುಡಿಯುವುದಲ್ಲದೆ ಮಕ್ಕಳಿಗೂ ಕುಡಿಯಲು ಕೊಡುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಇಂತಹ ಅಭ್ಯಾಸ ತುಂಬಾ ಹಾನಿಕಾರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಕಾಫಿ ಸೇವನೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಮಕ್ಕಳು ಯಾಕೆ ಕಾಫಿ ಸೇವನೆ ಮಾಡಬಾರದು, ಒಂದು ಕಪ್ ಕಾಫಿ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಬ್ಬಿಣದ ಕೊರತೆಯಾಗುತ್ತೆ:

ಮಕ್ಕಳು ಬೆಳವಣಿಗೆಯ ಹಂತದಲ್ಲಿರುವಾಗ ಅವರಿಗೆ ಪ್ರತಿನಿತ್ಯ ತರಕಾರಿ, ಸೊಪ್ಪು ಮತ್ತು ಮೊಟ್ಟೆಗಳಂತಹ ಪೋಷಕಾಂಶಗಳಿಂದ ಭರಿತವಾಗಿರುವ ಆಹಾರವನ್ನು ನೀಡಬೇಕು. ಅದರ ಬದಲಾಗಿ ಒಂದು ಕಪ್ ಚಹಾ ಅಥವಾ ಕಾಫಿ ಕೊಟ್ಟರೆ ಪೋಷಕಾಂಶಗಳು ಸರಿಯಾಗಿ ದೇಹವನ್ನು ತಲುಪುವುದಿಲ್ಲ. ಈ ಪಾನೀಯಗಳಲ್ಲಿರುವ ಕೆಲವು ರಾಸಾಯನಿಕಗಳು ಆಹಾರದಲ್ಲಿರುವ ಕಬ್ಬಿಣದ ಅಂಶ ರಕ್ತ ಹೀರಿಕೊಳ್ಳುವುದನ್ನು ತಡೆಯುತ್ತವೆ. ಪರಿಣಾಮವಾಗಿ, ಮಕ್ಕಳು ಎಷ್ಟೇ ತಿಂದರೂ ಅವರು ತೆಳ್ಳಗಿರುತ್ತಾರೆ ಅಥವಾ ರಕ್ತಹೀನತೆಯ ಸಮಸ್ಯೆ ಕಾಡುತ್ತದೆ.

ಇದನ್ನೂ ಓದಿ: ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವ ಒಂದು ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಬಹುದು ಎಚ್ಚರ!

ಕೆಫೀನ್ ಮೆದುಳಿಗೆ ಅಪಾಯಕಾರಿ:

ಕೆಲಸಗಳಲ್ಲಿ ನಿರತರಾಗಿರುವ ವಯಸ್ಕರು ಮೈಂಡ್ ಫ್ರೆಶ್ ಆಗಲು ಅಥವಾ ನಿದ್ದೆಯಿಂದ ಮುಕ್ತಿ ಪಡೆಯಲು ಕಾಫಿ ಅಥವಾ ಚಹಾ ಕುಡಿಯುತ್ತಾರೆ. ಆದರೆ ಮಕ್ಕಳಿಗೆ, ಕಾಫಿ ಮತ್ತು ಚಹಾದಲ್ಲಿರುವ ಕೆಫೀನ್ ನರಮಂಡಲವನ್ನು ಅತಿಯಾಗಿ ಪ್ರಚೋದಿಸುತ್ತದೆ. ಇದು ಅವರಲ್ಲಿ ಆತಂಕ ಉಂಟುಮಾಡುತ್ತದೆ. ಅಷ್ಟೇ ಅಲ್ಲ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಅಥವಾ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಕೆಫೀನ್ ಅವರ ನಿದ್ರೆಗೂ ಅಡ್ಡಿಪಡಿಸುತ್ತದೆ. ನಡವಳಿಕೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿ ಪದೇ ಪದೇ ಕೋಪಗೊಳ್ಳುವಂತೆ ಮಾಡುತ್ತದೆ.

ಹಸಿವು ಕಡಿಮೆಯಾಗುತ್ತೆ

ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂಬುದು ಹಲವು ಪೋಷಕರ ಚಿಂತೆಯಾಗಿರುತ್ತೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು. ಇದು ಹಸಿವನ್ನು ಉತ್ತೇಜಿಸುವ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ. ಹೆಚ್ಚುವರಿಯಾಗಿ, ಇದು ಕರುಳಿನಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿ, ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮಕ್ಕಳಿಗೆ ಹಸಿವಿಲ್ಲದಿದ್ದರೆ, ಅವರು ತಿನ್ನುವುದಿಲ್ಲ, ತಿನ್ನದಿದ್ದರೆ, ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಸಕ್ಕರೆ ಮಕ್ಕಳಿಗೆ ಹಾನಿಕಾರಕ

ಮಕ್ಕಳು ಇಷ್ಟ ಪಟ್ಟು ಕುಡಿಯುವ ಚಹಾ, ಕಾಫಿಯಲ್ಲಿ ಸಕ್ಕರೆ ಇರುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮಕ್ಕಳಿಗೆ ಹಾನಿಯಾಗಬಹುದು. ಅಷ್ಟೇ ಅಲ್ಲ ಹಲ್ಲು ಹುಳುಕಿಗೆ ಬೊಜ್ಜಿಗೆ ಕಾರಣವಾಗಬಹುದು. ಹಾಗಾಗಿ ಹತ್ತು ವರ್ಷದೊಳಗಿನ ಮಕ್ಕಳಿಗೆ, ಹಾಲು, ಗಂಜಿ ಅಥವಾ ಹಣ್ಣಿನ ರಸವನ್ನು ನೀಡುವುದು ಹೆಚ್ಚು ಉತ್ತಮ. ಅಲ್ಲದೆ ಅತಿಯಾದ ಸಕ್ಕರೆ ಸೇವನೆಯು ಮಕ್ಕಳನ್ನು ಹೈಪರ್ಆಕ್ಟಿವ್ ಆಗಿ ಮಾಡಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾಗಿ ಮಕ್ಕಳಿಗೆ ಚಹಾ, ಕಾಫಿ ಕೊಡುವ ಮುನ್ನ ಎಚ್ಚರವಹಿಸಿ. ಆರೋಗ್ಯಕ್ಕಿಂತ ಯಾವುದು ದೊಡ್ಡದಲ್ಲ ಎಂಬುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ