ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವ ಒಂದು ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಬಹುದು ಎಚ್ಚರ!
ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಚಹಾ ಕುಡಿಯುವುದು ಹಲವರ ಅಭ್ಯಾಸ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಭಾವನೆ. ಆದರೆ ಚಹಾ ತಣ್ಣಗಾಯ್ತು ಅಂತಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಈ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದರೆ ನೀವೆಂದೂ ಈ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಚಹಾ (Tea) ಕುಡಿಯುವುದು ಹಲವರ ಅಭ್ಯಾಸ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಭಾವನೆ. ಆದರೆ ಈ ಚಹಾವೇ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗುತ್ತಿದೆ ಎಂದು ತಜ್ಞರು ಈಗ ಎಚ್ಚರಿಸುತ್ತಿದ್ದಾರೆ. ಹೌದು, ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ ಅಧ್ಯಯನಗಳು ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ ಸೇವಿಸಬೇಕು. ಅದರ ನಂತರ ಚಹಾ ಕುಡಿಯುವುದರಿಂದ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಹೇಳುತ್ತವೆ. ನೀವು ಕೂಡ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ… ಈ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದರೆ ನೀವೆಂದೂ ಈ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಒಮ್ಮೆ ಚಹಾ ಮಾಡಿದ ನಂತರ ಉಳಿದದ್ದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಜಪಾನ್ ಮತ್ತು ಚೀನಾದಂತಹ ದೇಶಗಳಲ್ಲಿ, ಸಂಗ್ರಹಿಸಿದ ಚಹಾವನ್ನು ವಿಷದಷ್ಟೇ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಹೌದು, ಜಪಾನಿನ ಜನ 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಚಹಾ ಸೇವನೆ ಹಾವು ಕಡಿತಕ್ಕಿಂತ ಅಪಾಯಕಾರಿ ಎಂದು ಹೇಳುತ್ತಾರೆ. ಚೀನಾದಲ್ಲಿಯೂ ಸಂಗ್ರಹಿಸಿಟ್ಟ ಚಹಾವನ್ನು ಸೇವನೆ ಮಾಡುವುದಿಲ್ಲ.
ಹಾಲು ಬೆರೆಸಿದ ಚಹಾ ಒಳ್ಳೆಯದಲ್ಲ:
ಸಾಮಾನ್ಯವಾಗಿ ಹಾಲು ಬೇಗನೆ ಹಾಳಾಗುತ್ತದೆ. ಹಾಲಿನಿಂದ ಮಾಡಿದ ಚಹಾವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಫ್ರಿಜ್‌ನಲ್ಲಿ ಇರಿಸಿದರೆ, ಅದನ್ನು ಒಂದರಿಂದ ಮೂರು ದಿನಗಳವರೆಗೆ ಸಂಗ್ರಹಿಸಬಹುದು, ಆದರೆ ಅದನ್ನು ಮತ್ತೆ ಬಿಸಿ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಇದು ಆಮ್ಲೀಯತೆಯನ್ನು ಕೂಡ ಹೆಚ್ಚಿಸುತ್ತದೆ.
ಶುಂಠಿ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಹುದೇ?
ಹಾಲಿಲ್ಲದೆ ಶುಂಠಿ ಚಹಾ ಸೇವನೆ ಮಾಡುವುದು ಸುರಕ್ಷಿತ. ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟರೆ, ಅದು ಮೂರರಿಂದ ಐದು ದಿನಗಳವರೆಗೆ ಇರುತ್ತದೆ. ಆದರೆ ಅದನ್ನು ಕುಡಿಯುವ ಮೊದಲು ಚೆನ್ನಾಗಿ ಕುದಿಸಬೇಕು. ಚಹಾ ಬಣ್ಣ ಬದಲಾದರೆ ಅಥವಾ ವಾಸನೆ ಬಂದರೆ, ಅದನ್ನು ಕುಡಿಯಬಾರದು. ಆದರೆ ದಿನಕ್ಕೆ 4 ರಿಂದ 5 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ಕೆಲವರಲ್ಲಿ ಎದೆಯುರಿ ಉಂಟಾಗುತ್ತದೆ.
ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!
ಆಯುರ್ವೇದದಲ್ಲಿ ಹೇಳಿರುವುದೇನು?
ಸಂಗ್ರಹಿಸಿದ ಅಥವಾ ಮತ್ತೆ ಬಿಸಿ ಮಾಡಿದ ಚಹಾವು ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಚಹಾವನ್ನು ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪ್ರೋಟೀನ್‌ಗಳು ನಾಶವಾಗುತ್ತದೆ, ಹಾಗಾಗಿ ಆಮ್ಲೀಯತೆ ಮತ್ತು ಸುಡುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಚಹಾ ಕುಡಿಯುವ ಮನಸ್ಸಾದರೆ ಪ್ರತಿ ಬಾರಿಯೂ ತಾಜಾವಾಗಿ ಚಹಾ ತಯಾರಿಸಿ ಕುಡಿಯುವುದು ಬಹಳ ಆರೋಗ್ಯಕರ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




