ಬೆಂಗಳೂರು, ಜುಲೈ 26: ಭಾರತದ ಆರೋಗ್ಯಪಾಲನೆ ಕ್ಷೇತ್ರ ಸಾಕಷ್ಟು ಪರಿವರ್ತನೆ ಕಾಣುತ್ತಿದೆ. ಹೊಸ ಆವಿಷ್ಕಾರಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬೆಳವಣಿಗೆ ಇವು ವಿಫುಲ ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ಸೃಷ್ಟಿಸಿವೆ. ಜೊತೆಗೆ ಕೆಲ ಪ್ರಮುಖ ಸಮಸ್ಯೆ, ಸವಾಲುಗಳನ್ನೂ ಹೊತ್ತು ಹೋಗುತ್ತಿವೆ. ಈ ಕ್ಷೇತ್ರದ ಸಾಮರ್ಥ್ಯ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ದಕ್ಷಿಣ್ ಹೆಲ್ತ್ಕೇರ್ ಶೃಂಗಸಭೆ 2024 ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್ ಸಂಸ್ಥೆಗಳು ಈ ಸಮಿಟ್ಗೆ ಆರೋಗ್ಯಕ್ಷೇತ್ರದ ದಿಗ್ಗಜರನ್ನು ಒಟ್ಟು ಸೇರಿಸುತ್ತಿದೆ. ಹೈದರಾಬಾದ್ನಲ್ಲಿ ಆಗಸ್ಟ್ 3ರಂದು ಈ ಕಾರ್ಯಕ್ರಮ ನಡೆಯಲಿದೆ.
ಈ ಬಹುನಿರೀಕ್ಷಿತ ದಕ್ಷಿಣ್ ಹೆಲ್ತ್ಕೇರ್ ಸಮಿಟ್ 2024 ಕಾರ್ಯಕ್ರಮದ ಮೂಲಕ ಅಗ್ರಮಾನ್ಯ ವೈದ್ಯಕೀಯ ಪರಿಣಿತರು, ನೀತಿ ರೂಪಕರು, ಉದ್ಯಮ ಪರಿಣಿತರು ಮೊದಲಾದ ದಿಗ್ಗಜರು ಒಂದೇ ವೇದಿಕೆಗೆ ಬರಲಿದ್ದಾರೆ. ಹೆಲ್ತ್ಕೇರ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಆವಿಷ್ಕಾರಗಳು ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿವೆ. ಆ ಸಂಬಂಧ ಚರ್ಚೆ, ಸಂವಾದಗಳೂ ನಡೆಯಲಿವೆ.
ಅಪೋಲೊ ಹಾಸ್ಪಿಟಲ್ಸ್ನ ಜಂಟಿ ಎಂಡಿ ಡಾ. ಸಂಗೀತಾ ರೆಡ್ಡಿ ಅವರು ಆಗಸ್ಟ್ 3ರಂದು ದಕ್ಷಿಣ್ ಹೆಲ್ತ್ಕೇರ್ ಸಮಿಟ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಬಿಜೆಪಿ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: Mudra loan details: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ
ಮೇದಾಂತ ಸಂಸ್ಥೆಯ ಡಾ. ಅರವಿಂದರ್ ಸಿಂಗ್ ಸೋಯಿನ್, ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಮತ್ತು ಎಂಡಿ ಪ್ರಶಾಂತ್ ಪ್ರಕಾಶ್, ಫೋರ್ಟಿಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ಸ್ನ ಪ್ರೋಗ್ರಾಮ್ ಹೆಡ್ ಡಾ. ವೃತ್ತಿ ಲುಂಬ, ನ್ಯೂರಾಲಜಿ ಅಂಡ್ ಸ್ಲೀಪ್ ಸೆಂಟರ್ನ ಸಂಸ್ಥಾಪಕ ಡಾ. ಮನವೀರ್ ಭಾಟಿಯಾ, ಲಂಡನ್ನ ಹೂಕ್ನ ಕ್ಲಿನಿಕಲ್ ಪ್ರೋಸಸ್ ಲೀಡ್ ಫಿಸಿಶಿಯನ್ ಆಗಿರುವ ಉಮರ್ ಖಾದೀರ್, ಐಐಎಸ್ಸಿಯ ಲಾಂಗೆವಿಟಿ ಇನ್ಸ್ಟಿಟ್ಯೂಟ್ನ ಪ್ರೊಫೆಸರ್ ಡಾ. ದೀಪಕ್ ಸೈನಿ, SOHFIT ಸಂಸ್ಥಾಪಕ ಡಾ. ಸೊಹ್ರಬ್ ಕುಶ್ರುಶಾಹಿ, ಎಐಜಿ ಹಾಸ್ಪಿಟಲ್ಸ್ನ ಡಾ. ಡಿ ನಾಗೇಶ್ವರ್ ರೆಡ್ಡಿ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನ ಗ್ಲೋಬಲ್ ಹೆಲ್ತ್ ಡೈರೆಕ್ಟರ್ ಡಾ. ಗಗನದೀಪ್ ಕಾಂಗ್, ಸ್ಟ್ರಾಂಡ್ ಲೈಫ್ ಸೈನ್ಸ್ ಸಂಸ್ಥಾಪಕ ಡಾ. ವಿಜಯ್ ಚಂದ್ರು, ಎಚ್ಸಿಜಿ ಸಂಸ್ಥೆಯ ಸರ್ಜಿಕಲ್ ಆನ್ಕಾಲಜಿ ವಿಭಾಗದ ನಿರ್ದೇಶಕ ಡಾ. ವಿಶಾಲ್ ರಾವ್, ಆಕೃತಿ ಆಫ್ತಾಲ್ಮಿಕ್ನ ಸಿಇಒ ಡಾ ಕುಲದೀಪ್ ರಾಯ್ಜಾದ, ಎಐಎನ್ಯು ಇಂಡಿಯಾದ ರೋಬೋಟಿಕ್ ಸರ್ಜನ್ ಕನ್ಸಲ್ಟೆಂಟ್ ಡಾ. ಸಯದ್ ಮೊಹಮ್ಮದ್ ಘೌಸ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ದಿಗ್ಗಜರು.
ಎಚ್ಸಿಜಿ ಸಂಸ್ಥೆ ಡಾ. ಎಸ್ತರ್ ಸತ್ಯರಾಜ್, ಎಐಜಿ ಹಾಸ್ಪಿಟಲ್ಸ್ನ ಡಾ. ರೂಪಾ ಬ್ಯಾನರ್ಜಿ, ಮದುಮೇಹ ತಜ್ಞೆ ಡಾ. ಸುನೀತಾ ಸಾಯಮ್ಮಗಾರು, ಅನು ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ನ ಎಂಡಿ ಡಾ. ಅನುರಾಧಾ ಕಾಟ್ರಗಡ್ಡ, ಡಿಲೈಫ್ ಡಾಟ್ ಇನ್ನ ಸಹ-ಸಂಸ್ಥಾ;ಕ ಶಶಿಕಾಂತ್ ಅಯ್ಯಂಗಾರ್, ಬ್ರ್ಯಾಂಡ್ ಗುರು ಹರೀಶ್ ಬಿಜೂರು, ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಮೊದಲಾದವರೂ ಕೂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
ಇದನ್ನೂ ಓದಿ: ಬದಲಾಗುತ್ತಿದೆ ಆರ್ಬಿಐ ನಿಯಮ… ಬ್ಯಾಂಕ್ಗೆ ಹೋಗಿ ಕ್ಯಾಷ್ ವಿತ್ಡ್ರಾ ಮಾಡುವ ಮುನ್ನ ಇದು ತಿಳಿದಿರಿ…
ಈ ಅಪರೂಪದ ಮತ್ತು ಉಪಯುಕ್ತ ಮತ್ತು ಸಕಾಲಿಕ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ತಂತ್ರಜ್ಞಾನ ಬದಲಾವಣೆಗಳನ್ನು ಮತ್ತು ಭವಿಷ್ಯದ ಸಾಧ್ಯಾ ಸಾಧ್ಯತೆಗಳನ್ನು ಬಿಚ್ಚಿಡಲಿದೆ. ಟಿವಿ9 ನೆಟ್ವರ್ಕ್ನ ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ ಈ ಕಾರ್ಯಕ್ರಮದ ಕವರೇಜ್ ಇರುತ್ತದೆ. ವಿಶ್ವದ ಮೊದಲ ಒಟಿಟಿ ನ್ಯೂಸ್ ಪ್ಲಾಟ್ಫಾರ್ಮ್ ಆಗಿರುವ ನ್ಯೂಸ್9 ಪ್ಲಸ್ ಆ್ಯಪ್ನಲ್ಲೂ ಈ ಇವೆಂಟ್ ನೋಡಬಹುದು. ನ್ಯೂಸ್9 ಲೈವ್ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ತಪ್ಪದೇ ವೀಕ್ಷಿಸಿ, ಆರೋಗ್ಯ ಕ್ಷೇತ್ರದ ಹೊಸ ತಂತ್ರಜ್ಞಾನದ ಬಗ್ಗೆ ಅಪ್ಡೇಟ್ ಆಗಿರಿ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ