ಬದಲಾಗುತ್ತಿದೆ ಆರ್​​ಬಿಐ ನಿಯಮ… ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ…

RBI new norms for Bank cash pay-out and pay-in: ಆನ್ಲೈನ್ ವಂಚಕರು ಬ್ಯಾಂಕುಗಳಲ್ಲಿ ನಗದು ವಹಿವಾಟು ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆಗಳನ್ನು ತಡೆಯಲು ಆರ್​ಬಿಐ ಒಂದಷ್ಟು ನಿಯಮ ಬಿಗಿಗೊಳಿಸಿದೆ. ಬ್ಯಾಂಕುಗಳಲ್ಲಿನ ಕ್ಯಾಷ್ ಪೇ ಇನ್ ಮತ್ತು ಕ್ಯಾಷ್ ಪೇ ಔಟ್ ಕ್ರಮದಲ್ಲಿ ಮಾರ್ಪಾಡು ಮಾಡಿದ್ದು, ಹಣ ಸ್ವೀಕರಿಸುವವರ ಮತ್ತು ಹಣ ಡೆಪಾಸಿಟ್ ಮಾಡುವವರ ದಾಖಲೆಗಳನ್ನು ಬ್ಯಾಂಕುಗಳು ಪ್ರತ್ಯೇಕ ಕಡತದಲ್ಲಿ ಇಟ್ಟುಕೊಳ್ಳಬೇಕು ಎಂದು ಆರ್​ಬಿಐ ನಿರ್ದೇಶಿಸಿದೆ. ನವೆಂಬರ್ 1ರಿಂದ ಹೊಸ ಕಾನೂನು ಜಾರಿಗೆ ಬರಲಿದೆ.

ಬದಲಾಗುತ್ತಿದೆ ಆರ್​​ಬಿಐ ನಿಯಮ... ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ...
ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2024 | 4:33 PM

ನವದೆಹಲಿ, ಜುಲೈ 25: ಬ್ಯಾಂಕಿಗೆ ಹೋಗಿ ಕ್ಯಾಷ್ ಪೇ ಔಟ್ ಪಡೆಯಲು ಅಥವಾ ಬ್ಯಾಂಕ್ ಖಾತೆಯೊಂದಕ್ಕೆ ನಗದು ಹಣ ಜಮೆ ಮಾಡಲು ಇರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಬ್ಯಾಂಕ್​ಗಳು ನಗದು ಹಣ ಸ್ವೀಕರಿಸುವ ವ್ಯಕ್ತಿಯ ಕೆವೈಸಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಕ್ಯಾಷ್ ಡೆಪಾಸಿಟ್ ಮಾಡುವವರ ವಿವರವನ್ನೂ ಬ್ಯಾಂಕುಗಳು ಪಡೆಯುವುದು ಅವಶ್ಯಕವಾಗಿದೆ. ಇವರೆಲ್ಲರ ವಿವರಗಳನ್ನು ಬ್ಯಾಂಕುಗಳು ಪ್ರತ್ಯೇಕ ದಾಖಲೆಯಲ್ಲಿ ಇಟ್ಟುಕೊಂಡಿರಬೇಕು. ಹಾಗಂತ ಆರ್​ಬಿಐ ನಿನ್ನೆ (ಜುಲೈ 24) ನಿಯಮ ಹೊರಡಿಸಿದೆ.

ಕ್ಯಾಷ್ ಪೇ ಔಟ್ ಕೊಡುವ ಬ್ಯಾಂಕುಗಳು ಹಣ ಸ್ವೀಕರಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಪಡೆಯುವುದು ಕಡ್ಡಾಯ. ಹಾಗೆಯೇ, ಕ್ಯಾಷ್ ಪೇ ಇನ್ ಸಂದರ್ಭದಲ್ಲಿ ನಗದು ಹಣವನ್ನು ಡೆಪಾಸಿಟ್ ಮಾಡುವ ವ್ಯಕ್ತಿಯ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ನೊಂದಣಿ ಮಾಡಬೇಕಾಗುತ್ತದೆ. 2016ರಲ್ಲಿ ರೂಪಿಸಲಾದ ಕೆವೈಸಿ ಮಾರ್ಗಸೂಚಿ ಪ್ರಕಾರ ಸ್ವ ಘೋಷಿತ ಒವಿಡಿ ಅಥವಾ ಅಧಿಕೃತ ದಾಖಲೆಯನ್ನೂ ಈ ನೊಂದಣಿಯಲ್ಲಿ ಬಳಸಬೇಕಾಗುತ್ತದೆ.

ಇದರ ಜೊತೆಗೆ, ಬ್ಯಾಂಕ್ ಖಾತೆಯೊಂದಕ್ಕೆ ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯಿಂದ ಹೆಚ್ಚುವರಿ ದೃಢೀಕರಣ ಪಡೆಯಬೇಕಾಗುತ್ತದೆ. ಇವೆಲ್ಲಾ ಪರಿಷ್ಕೃತ ನಿಯಮಗಳು ನವೆಂಬರ್​ನಿಂದ ಚಾಲನೆಗೆ ಬರಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ

ಯಾಕಾಗಿ ಈ ಬಿಗಿ ನಿಯಮಗಳು?

ಇತ್ತೀಚೆಗೆ ಹೆಚ್ಚಿರುವ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆನ್​ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಪುಸಲಾಯಿಸಿ ಥರ್ಡ್ ಪಾರ್ಟಿ ಅಕೌಂಟ್​ಗಳಿಗೆ ಹಣ ವರ್ಗಾಯಿಸಿಕೊಂಡು, ಬಳಿಕ ಆ ಖಾತೆಗಳಿಂದ ವಂಚಕರು ಕ್ಯಾಷ್ ವಿತ್​ಡ್ರಾ ಮಾಡಿಕೊಳ್ಳುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರ್​​ಬಿಐ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಇಲ್ಲಿ ಕ್ಯಾಷ್ ಪಡೆಯುವ ವ್ಯಕ್ತಿಯ ವಿವರಗಳು, ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯ ವಿವರಗಳನ್ನು ಬ್ಯಾಂಕ್​ಗಳು ಪಡೆದಿಟ್ಟುಕೊಳ್ಳುವುದರಿಂದ ಕ್ಯಾಷ್ ವಹಿವಾಟು ದುರ್ಬಳಕೆಯನ್ನು ತಡೆಯಬಹುದು.

ಇದನ್ನೂ ಓದಿ: ಬೆಂಗಳೂರಿನ ಸ್ಟಾರ್ಟಪ್ ಬ್ಲೂಲರ್ನ್ ಅಂತ್ಯ; ಹೂಡಿಕೆದಾರರಿಗೆ ಶೇ. 70 ಹಣ ಮರಳಿಸಿದ ಸಂಸ್ಥಾಪಕರು; ಕಂಪನಿ ಮುಚ್ಚಿದರೂ ಯುವಕರಿಗೆ ಕುಂದದ ಉತ್ಸಾಹ

ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನು ಟ್ರ್ಯಾಕ್ ಮಾಡಬಹುದು. ಆದರೆ, ಕ್ಯಾಷ್ ಪೇಔಟ್​ಗಳ ಮೇಲೆ ನಿಗಾ ಇಡಲಾಗುವುದಿಲ್ಲ. ಈಗಾಗಲೇ ಈ ವಿಚಾರದಲ್ಲಿ ನಿಯಮಗಳಿವೆ. 50,000 ರೂಗಿಂತ ಹೆಚ್ಚು ನಗದು ಹಣವನ್ನು ಸೇವಿಂಗ್ಸ್ ಅಕೌಂಟ್​ಗೆ ಹಾಕುವವರು ಪ್ಯಾನ್ ಕಾರ್ಡ್ ಸಲ್ಲಿಸಬೇಕು. ಒಂದು ವರ್ಷದಲ್ಲಿ ಒಂದು ಉಳಿತಾಯ ಖಾತೆಗೆ ಜಮೆ ಮಾಡಲಾಗುವ ನಗದು ಹಣದ ಮಿತಿ 10 ಲಕ್ಷ ರೂ ಇದೆ. ಇದಕ್ಕಿಂತ ಹೆಚ್ಚು ಹಣವನ್ನು ಕ್ಯಾಷ್ ರೂಪದಲ್ಲಿ ವಿತ್​ಡ್ರಾ ಮಾಡಿದಲ್ಲಿ ಅಥವಾ ಡೆಪಾಸಿಟ್ ಮಾಡಿದಲ್ಲಿ ಆದಾಯ ತೆರಿಗೆಗೆ ಮಾಹಿತಿ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ