ನಿಮಗೆ ತಿಳಿದಿರಬಹುದು ಜನವರಿ 26, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ. ಈ ದಿನ ಸವಿನೆನಪಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಗಣರಾಜ್ಯೋತ್ಸವ ಸಂದರ್ಭ ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶಭಕ್ತಿ ಹೆಚ್ಚಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದನ್ನು ನೋಡಲು ಸಾವಿರಾರು ಜನ ಬೇರೆ ಬೇರೆ ಊರುಗಳಿಂದ ದಿಲ್ಲಿಗೆ ಹೋಗುತ್ತಾರೆ. ಇದು ಒಂದು ರೀತಿಯ ಚಿಕ್ಕ ಪ್ರವಾಸ ಇದ್ದಂತೆ. ನೀವು ಕೂಡ ದಿಲ್ಲಿಗೆ ಹೋಗುವವರಾಗಿದ್ದರೆ ಅಲ್ಲಿಂದ ಬರುವಾಗ ದಿಲ್ಲಿಯ ಪ್ರಸಿದ್ಧ ಬೀದಿ ಆಹಾರಗಳನ್ನು ತಿಂದು ಬನ್ನಿ. ಪ್ರಯಾಣ ಎಲ್ಲಿಗೆ ಇರಲಿ ಆ ಜನರ ಭಾಷೆಯಾ ಬಗ್ಗೆ ತಿಳಿದು, ಅಲ್ಲಿನ ಆಹಾರಗಳನ್ನು ಸವಿಯಲೇ ಬೇಕು. ಹಾಗಾಗಿ ಗಣರಾಜ್ಯೋತ್ಸವ ನೋಡಲು ದಿಲ್ಲಿಗೆ ಪ್ರಯಾಣ ಬೆಳೆಸುವವರು ನಾವು ಹೇಳುವ ಈ ಆಹಾರಗಳ ರುಚಿ ನೋಡಿ ಬನ್ನಿ.
ಸಾಮಾನ್ಯವಾಗಿ ಊರು ದೊಡ್ಡದಿರಲಿ, ಚಿಕ್ಕದಿರಲಿ ಅಲ್ಲಿನ ಸ್ಥಳೀಯ ಖಾದ್ಯಗಳು ವಿಭಿನ್ನ ರುಚಿಯನ್ನು ನೀಡುತ್ತವೆ. ಊರು ಬದಲಾದಂತೆ ಅಲ್ಲಿನ ಆಹಾರ ಪದ್ಧತಿಗಳು ಕೂಡ ಬದಲಾಗುತ್ತದೆ. ಇನ್ನು ದೆಹಲಿಯಲ್ಲಿ ಪ್ರಸಿದ್ಧವಾಗಿರುವ ಸ್ಥಳೀಯ ಆಹಾರಗಳಿವೆ. ಇವು ನಿಮಗೆ ಅಲ್ಲಿನ ಸೊಗಡನ್ನು ತಿಳಿಸುತ್ತದೆ. ನಿಮಗೆ ತಿಳಿದಿರಬಹುದು ದಿಲ್ಲಿಯಲ್ಲಿ ಚಾಟ್ ಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಅಲ್ಲಿಂದ ಬಂದಂತಹ ಎಷ್ಟೋ ಜನ ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಚಾಟ್ ಗಳನ್ನು ಮಾಡುವುದನ್ನು ನೀವು ನೋಡಿರಬಹುದು. ಹಾಗಾಗಿ ದಿಲ್ಲಿಗೆ ಹೋದಾಗ ವಿವಿಧ ರೀತಿಯ ಚಾಟ್ ಗಳ ರುಚಿ ನೋಡಿ ಬನ್ನಿ. ಅದರಲ್ಲಿಯೂ ಗರಿಗರಿಯಾದ ಆಲೂ ಟಿಕ್ಕಿ, ಪಾನಿ ಪುರಿ ಮತ್ತು ಪಾಪಡಿ ಚಾಟ್, ಚಾಂದನಿ ಚೌಕ್ ನ ನಟರಾಜ್ ಚಾಟ್ ಭಂಡಾರ್ ಅಥವಾ ಬಂಗಾಳಿ ಮಾರುಕಟ್ಟೆಯ ನಾಥುಸ್ ಸ್ವೀಟ್ಸ್ ಗೆ ಹೋಗಿ ಬರುವುದನ್ನು ಮರೆಯಬೇಡಿ.
ಇದನ್ನೂ ಓದಿ: ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ಏನಾಗುತ್ತೆ?
ಉತ್ತರ ಭಾರತದ ಉಪಾಹಾರವೆಂದೇ ಪ್ರಸಿದ್ಧಿಯಾಗಿರುವ ಚೋಲೆ ಬಟೂರವನ್ನು ನೀವು ದಿಲ್ಲಿಗೆ ಹೋದಾಗ ಕಡ್ಡಾಯವಾಗಿ ಸವಿಯಬೇಕು. ಪಹರ್ಗಂಜ್ನಲ್ಲಿರುವ ಸೀತಾ ರಾಮ್ ದಿವಾನ್ ಚಂದ್ ಅವರು ರುಚಿ ರುಚಿಯಾದ ಚೋಲೆ ಬಟೂರ ನೀಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ದಿಲ್ಲಿಗೆ ಹೋಗುವವರು ಅಲ್ಲಿಗೊಮ್ಮೆ ಹೋಗಿ ಆ ಖಾದ್ಯವನ್ನು ಸವಿಯಬೇಕು.
ಇವುಗಳನ್ನು ನೀವು ದಿಲ್ಲಿಯಲ್ಲಿ ಟ್ರೈ ಮಾಡಲೇಬೇಕು. ಏಕೆಂದರೆ ಇವು ಅಲ್ಲಿನ ವಿಶೇಷ ತಿಂಡಿಗಳಾಗಿವೆ. ಅದರಲ್ಲಿಯೂ ಕೊನಾಟ್ ಪ್ಲೇಸ್ ನಲ್ಲಿರುವ ಖಾನ್ ಚಾಚಾ ಬಾಯಿಗೆ ನೀರೂರಿಸುವ ಕಥಿ ರೋಲ್ ಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಜೊತೆಗೆ ಚಾಂದನಿ ಚೌಕ್ ನಲ್ಲಿಯೂ ಕಥಿ ರೋಲ್ಸ್ ತುಂಬಾ ಚೆನ್ನಾಗಿ ಸಿಗುತ್ತದೆ.
ತಂಪಾದ ಮತ್ತು ದೇಹಕ್ಕೆ ಉಲ್ಲಾಸ ನೀಡುವ ಖಾದ್ಯವಾದ ದಹಿ ಭಲ್ಲಾ, ಮೊಸರಿನಲ್ಲಿ ಬೇಳೆಕಾಳು ಕುಂಬಳಕಾಯಿಯನ್ನು ನೆನೆಸಿ ಮಾಡುವಂತಹ ಭಕ್ಷ್ಯವಾಗಿದೆ. ಚಾಂದನಿ ಚೌಕ್ ನ ನಟರಾಜ್ ದಹಿ ಭಲ್ಲೆ ವಾಲಾದಲ್ಲಿ ಇದನ್ನು ಪ್ರಯತ್ನಿಸಿ. ಪ್ರತಿ ಬೈಟಿಗೂ ಒಳ್ಳೆಯ ರುಚಿ ನೀಡುವುದರಲ್ಲಿ ಸಂಶಯವಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ