Diabetes: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿವೆ ಟಿಪ್ಸ್

ಮಧುಮೇಹ ಎಂಬುದು ವ್ಯಕ್ತಿಯ ಜೀವನವನ್ನೇ ನರಕಕ್ಕೆ ತಳ್ಳುವಂಥಾ ಕಾಯಿಲೆ. ಮಧುಮೇಹ ಬಂದರೆ ಸಿಹಿಯನ್ನು ಹೇಗೂ ತಿನ್ನುವಂತಿಲ್ಲ, ಜತೆಗೆ ಹೆಚ್ಚು ಖಾರ, ಹೆಚ್ಚು ಉಪ್ಪನ್ನು ಕೂಡ ಸೇವಿಸುವಂತಿಲ್ಲ.

Diabetes: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿವೆ ಟಿಪ್ಸ್
Diabetes
Follow us
TV9 Web
| Updated By: ನಯನಾ ರಾಜೀವ್

Updated on: Jul 07, 2022 | 10:05 AM

ಮಧುಮೇಹ ಎಂಬುದು ವ್ಯಕ್ತಿಯ ಜೀವನವನ್ನೇ ನರಕಕ್ಕೆ ತಳ್ಳುವಂಥಾ ಕಾಯಿಲೆ. ಮಧುಮೇಹ ಬಂದರೆ ಸಿಹಿಯನ್ನು ಹೇಗೂ ತಿನ್ನುವಂತಿಲ್ಲ, ಜತೆಗೆ ಹೆಚ್ಚು ಖಾರ, ಹೆಚ್ಚು ಉಪ್ಪನ್ನು ಕೂಡ ಸೇವಿಸುವಂತಿಲ್ಲ. ಮಧುಮೇಹವು ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ದೀರ್ಘಕಾಲದ ಆರೋಗ್ಯ ಕಾಯಿಲೆಗಳಲ್ಲಿ ಒಂದಾಗಿದೆ ಮತ್ತು ಇದು ಕಣ್ಣಿನ ಸಮಸ್ಯೆಗಳು, ಮೂತ್ರಪಿಂಡದ ಕಾಯಿಲೆ, ನರ ಹಾನಿ, ಹೃದ್ರೋಗ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಪ್ರಪಂಚದಾದ್ಯಂತ ಸುಮಾರು 400 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. , ನಿರ್ವಹಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ.

ಮೇದೋಜ್ಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದ ಸ್ಥಿತಿಯಲ್ಲಿ, ಸಾಕಷ್ಟು ಇನ್ಸುಲಿನ್ ಬಿಡುಗಡೆಯಾಗುವುದಿಲ್ಲ ಅಥವಾ ದೇಹವು ಇನ್ಸುಲಿನ್ ಅನ್ನು ಸಾಕಷ್ಟು ಬಳಸಲು ಸಾಧ್ಯವಾಗುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಹೇಗೆ? ಆಯುರ್ವೇದ ಜ್ಯೂಸ್​ಗಳು ಗಿಡಮೂಲಿಕೆಗಳಿಂದ ತಯಾರಿಸಿದ ಜ್ಯೂಸ್​ಗಳನ್ನು ಸೇವಿಸಬೇಕು ಆಮ್ಲಾ, ನೇರಳೆ ಹಣ್ಣು ಹಾಗೂ ಹಾಗಲಕಾಯಿ ಜ್ಯೂಸ್ ಸೇವಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದರ ಹೊರತಾಗಿ, ಈ ರಸಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ನೀವು ಆಯುರ್ವೇದ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಇವುಗಳನ್ನು ಸೇವಿಸಿ.

ತೂಕ ನಿಯಂತ್ರಣ ಟೈಪ್ -2 ಮಧುಮೇಹ ಹೊಂದಿದವರು ತೂಕವನ್ನು ನಿಯಂತ್ರಣದಲ್ಲಿಡುವುದು ತುಂಬಾ ಮುಖ್ಯವಾಗಿದೆ. ತೂಕವನ್ನು ಇಳಿಸಿಕೊಳ್ಳುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುವುದು.

ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಟೈಪ್-2 ಮಧುಮೇಹದಿಂದ ಬಳಲುತ್ತಿರುವವರು ನಿದ್ರೆಯ ಸಮಯವನ್ನು ಸರಿ ಪಡಿಸಿಕೊಳ್ಳಬೇಕು, ಒಂದೊಮ್ಮೆ ಮಧುಮೇಹದ ಲಕ್ಷಣಗಳು ಕಂಡುಬಂದಲ್ಲಿ, ತುಂಬಾ ದಿನಗಳವರೆಗೆ ನಿದ್ರೆ ಸರಿಯಾಗಿ ಬಾರದಿದ್ದರೆ ಮಧುಮೇಹ ಬಾಧಿಸುತ್ತಿರಬಹುದು. ನಿತ್ಯ 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡಲೇಬೇಕು.

ಆರೋಗ್ಯಕರ ಡಯೆಟ್​ ಇರಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಡಯೆಟ್ ಮುಖ್ಯವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಮೊಳಕೆಕಾಳುಗಳನ್ನು ಅಳವಡಿಸಿಕೊಳ್ಳಿ, ಸಕ್ಕರೆ ಮಿಶ್ರಿತ ಜ್ಯೂಸ್​ಗಳು, ಕೆಂಪು ಮಾಂಸ ಬಳಕೆ ಕಡಿಮೆ ಮಾಡಿ.

ನಿತ್ಯ ವ್ಯಾಯಾಮ ಮಾಡಿ ನಿತ್ಯ ನೀವು ಕನಿಷ್ಠ 1 ಗಂಟೆಯ ಕಾಲವಾದರೂ ವ್ಯಾಯಾಮ ಮಾಡಬೇಕು, ನಿಮ್ಮ ಮನಸ್ಸಿನಲ್ಲಿರುವ ಒತ್ತಡ, ಖಿನ್ನತೆಯನ್ನು ದೂರ ಮಾಡಿಕೊಳ್ಳಬೇಕು, ಹೈಪರ್​ಟೆನ್ಷನ್, ಹೈ ಕೊಲೆಸ್ಟ್ರಾಲ್ ಮಧುಮೇಹವನ್ನು ಹೆಚ್ಚಳ ಮಾಡಬಹುದು. ಹಾಗಾಗಿ ಜಂಕ್​ಫುಡ್​ಗಳ ಸೇವನೆ ಕಡಿಮೆ ಮಾಡಬೇಕು.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ