ಈ ಆಹಾರಗಳ ಸೇವನೆ ಮಾಡಿದ ತಕ್ಷಣ ಯಾವುದೇ ಕಾರಣಕ್ಕೂ ನೀರು ಕುಡಿಯಬೇಡಿ! ಯಾಕೆ ಗೊತ್ತಾ?

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಅತ್ಯಗತ್ಯವಾದರೂ, ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಪಪ್ಪಾಯಿ, ಬಾಳೆಹಣ್ಣು ಸೇರಿದಂತೆ ಐದು ಸಾಮಾನ್ಯ ಆಹಾರ ಪದಾರ್ಥಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಅಜೀರ್ಣ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆ ನಿಧಾನವಾಗುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ತಡೆಯಲು ಆಹಾರ ಸೇವನೆ ಮಾಡಿದ ನಂತರ ಕೆಲವು ನಿಮಿಷ ಕಾಯುವುದು ಬಹಳ ಉತ್ತಮ. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ? ಯಾಕೆ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯಬಾರದು? ನೀರಿಗೂ ಆ ಆಹಾರಕ್ಕೂ ಏನು ಸಂಬಂಧ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಆಹಾರಗಳ ಸೇವನೆ ಮಾಡಿದ ತಕ್ಷಣ ಯಾವುದೇ ಕಾರಣಕ್ಕೂ ನೀರು ಕುಡಿಯಬೇಡಿ! ಯಾಕೆ ಗೊತ್ತಾ?
Digestion Tips

Updated on: Oct 27, 2025 | 6:48 PM

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೀರು (water) ಅತ್ಯಗತ್ಯವಾದರೂ, ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು, ನೀರು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆದರೂ ಕೂಡ ಕೆಲವೊಮ್ಮೆ ಇವು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ವಿಷಯ ಕೆಲವರಿಗೆ ತಿಳಿದಿರಬಹುದು. ಇನ್ನು ಅನೇಕರು ಇದನ್ನು ಪಾಲನೆ ಮಾಡುತ್ತಿರಬಹುದು. ಆದರೆ ಕೆಲವರಿಗೆ ಈ ಬಗ್ಗೆ ತಿಳಿದಿಲ್ಲ. ಹಾಗಾಗಿಯೇ ಬೇಕಾದಾಗೆಲ್ಲಾ ನೀರು ಕುಡಿಯುತ್ತಾರೆ. ಆದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಿ ಮಲಬದ್ದತೆಗೆ ಕಾರಣವಾದೀತು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾಕೆ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯಬಾರದು, ನೀರಿಗೂ ಆ ಆಹಾರಕ್ಕೂ ಏನು ಸಂಬಂಧ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀವ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಊಟದ ನಂತರ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತವೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿದ್ದು ಆರೋಗ್ಯ ಹಾಳಾಗಬಾರದು ಎಂದರೆ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಯ ಅನುಸಾರ, ಊಟದ ನಂತರ ಕನಿಷ್ಠ 30 ನಿಮಿಷಗಳ ಕಾಲ ಏನನ್ನೂ ಸೇವಿಸಬಾರದು ಯಾವ ರೀತಿಯ ಪಾನೀಯಗಳನ್ನು ಕೂಡ ಕುಡಿಯಬಾರದು. ಮಾತ್ರವಲ್ಲ ಇದರ ಜೊತೆಗೆ ಕೆಲವು ಆಹಾರಗಳ ಸೇವನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು.

ಪಪ್ಪಾಯಿ: ಈ ಹಣ್ಣು 96% ನೀರಿನಿಂದ ಕೂಡಿದ್ದು ಇದನ್ನು ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿನ ದ್ರವ ಹೆಚ್ಚು ದುರ್ಬಲಗೊಳ್ಳುತ್ತವೆ, ಜೀರ್ಣಕಾರಿ ರಸಗಳ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಆಹಾರದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಪಪ್ಪಾಯಿ ತಿಂದ ನಂತರ ಕನಿಷ್ಠ 40 ರಿಂದ 50 ನಿಮಿಷಗಳವಾದರೂ ನೀರು ಕುಡಿಯಬಾರದು. ಜೊತೆಗೆ ಮತ್ತಿತರ ಪಾನೀಯಗಳನ್ನು ಕೂಡ ಸೇವನೆ ಮಾಡಬಾರದು.

ಇದನ್ನೂ ಓದಿ
ಮಕ್ಕಳ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯವಹಿಸದಿರಿ!
ನಿಂತು ನೀರು ಕುಡಿದರೆ ದೇಹದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಾಗುತ್ತೆ ಗೊತ್ತಾ?
ಜೀರ್ಣಕ್ರಿಯೆ, ಮಲಬದ್ಧತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಹೀಗೆ ಮಾಡಿ
ಬಾಯಾರಿಕೆ ಆಗದಿದ್ದರೂ ನೀರು ಕುಡಿಯುವವರು ತಪ್ಪದೆ ಈ ಸ್ಟೋರಿ ಓದಿ

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶ ಸಮೃದ್ಧವಾಗಿದೆ. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಉಂಟಾಗುತ್ತದೆ. ಸಾಮಾನ್ಯವಾಗಿ ಈ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಹೊಟ್ಟೆಯಲ್ಲಿರುವ ಕಿಣ್ವಗಳು ಬೇಕಾಗುತ್ತವೆ. ತುಂಬಾ ಬೇಗನೆ ನೀರು ಕುಡಿಯುವುದರಿಂದ ಈ ಕಿಣ್ವಗಳು ದುರ್ಬಲಗೊಳ್ಳಬಹುದು. ಹಾಗಾಗಿ ಬಾಳೆಹಣ್ಣು ತಿಂದ ನಂತರ 30 ನಿಮಿಷವಾದರೂ ಕಾದು ಆ ಬಳಿಕ ನೀರು ಕುಡಿಯಬಹುದು.

ಸಿಟ್ರಸ್ ಹಣ್ಣುಗಳು: ಈ ಹುಳಿ ಹಣ್ಣುಗಳು ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಹಾಗಾಗಿ ತಕ್ಷಣ ನೀರು ಕುಡಿಯುವುದರಿಂದ ಈ ಆಮ್ಲಗಳು ದುರ್ಬಲಗೊಳ್ಳಬಹುದು, ಪಿಎಚ್ ಸಮತೋಲನವನ್ನು ಅಡ್ಡಿಪಡಿಸಬಹುದು ಮತ್ತು ಅನಿಲ ಅಥವಾ ಅಜೀರ್ಣಕ್ಕೆ ಕಾರಣವಾಗಬಹುದು. ಹಾಗಾಗಿ ಸಿಟ್ರಸ್ ಹಣ್ಣುಗಳನ್ನು ತಿಂದ ನಂತರ 30 ನಿಮಿಷವಾದರೂ ಕಾದು ಆ ಬಳಿಕ ನೀರು ಕುಡಿಯಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯವಹಿಸದಿರಿ, ಅವರ ಜೀವಕ್ಕೆ ಅಪಾಯ ತರಬಹುದು

ಕಡಲೆಕಾಯಿ: ಸಾಮಾನ್ಯವಾಗಿ ಕಡಲೆಕಾಯಿಯಲ್ಲಿ ಕೊಬ್ಬು ಮತ್ತು ಪ್ರೋಟೀನ್‌ಗಳು ಅಧಿಕವಾಗಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದು ಅಜೀರ್ಣ ಅಥವಾ ಹೊಟ್ಟೆ ಭಾರವಾದಂತೆ ಅನಿಸಬಹುದು. ಅದರಲ್ಲಿಯೂ ವಿಶೇಷವಾಗಿ ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಕಡಲೆಕಾಯಿ ತಿಂದ ನಂತರ 20 ರಿಂದ 30 ನಿಮಿಷ ವಿರಾಮ ತೆಗೆದುಕೊಳ್ಳಬೇಕು.

ಹಾಲು: ಬೆಚ್ಚಗಿರುವ ಹಾಲನ್ನು ಕುಡಿದ ತಕ್ಷಣ ನೀರು ಕುಡಿಯುವುದರಿಂದ ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಪಡೆಯಲು ಹೊಟ್ಟೆಯ ಆಮ್ಲಗಳು ದುರ್ಬಲಗೊಳ್ಳುತ್ತವೆ. ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಾತ್ರವಲ್ಲ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣಕ್ರಿಯೆಯ ಸಮಸ್ಯೆ ಬರದೆ ಆರೋಗ್ಯ ಚೆನ್ನಾಗಿರಲು ಹಾಲು ಕುಡಿದ ನಂತರ ನೀರು ಕುಡಿಯಬೇಕಾದಲ್ಲಿ 30 ನಿಮಿಷದಿಂದ ಒಂದು ಗಂಟೆಯ ವರೆಗೆ ಕಾಯುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ