ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?

ಸಣ್ಣದಾಗಿ ಮೈ ಸುಡುವುದು, ತಲೆ ನೋವು ಕಂಡಾಕ್ಷಣ ನೀವು ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ ಈ ಕೂಡಲೇ ಬಿಟ್ಟು ಬಿಡಿ. ಇದು ಕಾಲ ಕ್ರಮೇಣ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು

ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?
ಸಾಂದರ್ಭಿಕ ಚಿತ್ರ
Image Credit source: Cleveland Clinic
Updated By: ಅಕ್ಷತಾ ವರ್ಕಾಡಿ

Updated on: Dec 21, 2022 | 5:00 PM

ಹವಾಮಾನ ಬದಲಾವಣೆ(Climate change) ಯಿಂದಾಗಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ ಯಾವುದು ಎಂಬುದೇ ತಿಳಿಯದಾಗಿದೆ. ಇದರಿಂದಾಗಿ ಜ್ವರ, ಶೀತ ,ಕೆಮ್ಮು ಪ್ರತಿಯೊಬ್ಬರಲ್ಲಿಯೂ ಈಗೀಗಾ ಸಾಮಾನ್ಯವಾಗಿ ಬಿಟ್ಟಿದೆ. ಇದಲ್ಲದೇ ಒಬ್ಬ ವ್ಯಕ್ತಿಯು ಒತ್ತಡದ ಜೀವನದ ನಡುವೆ ತುಂಬಾ ದಣಿದಿದ್ದರೆ ಸೌಮ್ಯವಾದ ಜ್ವರದ ಲಕ್ಷಣವೂ ಕಂಡುಬರುತ್ತದೆ. ಇಂತಹ ಸಮಯದಲ್ಲಿ ಜ್ವರ ತಕ್ಷಣ ಕಡಿಮೆಯಾಗಲು ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ ಎಚ್ಚರ ವಹಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಜ್ವರವು ಎರಡು ದಿನಗಳಿಗಿಂತ ಹೆಚ್ಚು ಕಾಲ ಉಳಿಯದಿದ್ದರೆ, ಯಾವುದೇ ವೈದ್ಯರ ಸಮಾಲೋಚನೆಯಿಲ್ಲದೆ ನೀವು ಔಷಧಿಗಳನ್ನು ತೆಗೆದುಕೊಳ್ಳಬಾರದು ಎಂದು ಲುಧಿಯಾನಾದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಡಾ ಎರಿಕ್ ವಿಲಿಯಮ್ಸ್ ಹೇಳುತ್ತಾರೆ.
ಡೆಂಗ್ಯೂ, ಟೈಫಾಯಿಡ್ ಅಥವಾ ಮಲೇರಿಯಾದಂತಹ ಪ್ರಮುಖ ಕಾಯಿಲೆಗಳ ಹೊರತಾಗಿ ಜ್ವರವು ನೂರಾರು ಕಾರಣಗಳನ್ನು ಹೊಂದಿದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೆಲವೊಮ್ಮೆ, ಸುದೀರ್ಘ ಪ್ರವಾಸದ ನಂತರ ಒಬ್ಬ ವ್ಯಕ್ತಿಯು ಜ್ವರವನ್ನು ಹೊಂದಿರಬಹುದು. ಈ ರೀತಿಯ ಆಯಾಸದ ಸಂದರ್ಭಗಳಲ್ಲಿ, ದೀರ್ಘಾವಧಿಯಲ್ಲಿ ದೇಹಕ್ಕೆ ಹಾನಿಯಾಗಬಹುದು ಎಂದು ವ್ಯಕ್ತಿಯು ಸ್ವಯಂ-ಔಷಧಿ ಮಾಡದಂತೆ ಸಲಹೆ ನೀಡಲಾಗುತ್ತದೆ ಎಂದು ಹೇಳುತ್ತಾರೆ.

ಸಣ್ಣದಾಗಿ ಮೈ ಸುಡುವುದು, ತಲೆ ನೋವು ಕಂಡಾಕ್ಷಣ ನೀವು ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ ಈ ಕೂಡಲೇ ಬಿಟ್ಟು ಬಿಡಿ. ಇದು ಕಾಲ ಕ್ರಮೇಣ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಂತಾನೋತ್ಪತ್ತಿಗೆ ಸಹಾಯಕವಾಗುವ ಯೋಗಾಸನದ ಭಂಗಿಗಳು ಇಲ್ಲಿವೆ

ನೀವು ಪ್ಯಾರೆಸಿಟಮಾಲ್ ಅತಿಯಾಗಿ ತೆಗೆದುಕೊಂಡರೆ ಇದು ನಿಮ್ಮ ದೇಹದ ಮೇಲೆ ಕಾಲಕ್ರಮೇಣ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ಸರಿಯಾದ ಮಾರ್ಗದರ್ಶನವಿಲ್ಲದೆ ಔಷಧವನ್ನು ತೆಗೆದುಕೊಳ್ಳುವುದು ನಿಮ್ಮ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ನವದೆಹಲಿಯ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ ಮನೋಜ್ ಶರ್ಮಾ ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: