ಕಪ್ಪು ಚಹಾ ಅಥವಾ ಬ್ಲಾಕ್ ಟೀ ( black tea) ಕುಡಿಯುವುದನ್ನು ಯಾರು ಇಷ್ಟಪಡುವುದಿಲ್ಲ? ಇದು ಪ್ರತಿ ದಿನವನ್ನು ತಾಜಾತನದಿಂದ ಆರಂಭಿಸಲು ಅವಶ್ಯಕವಾಗಿರುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಕೆಲವರು ಈ ಗಾಢವಾದ ಪಾನೀಯವನ್ನು ಸರಳವಾಗಿ ಅಥವಾ ಹಾಲನ್ನು ಬೆರೆಸುವ ಮೂಲಕ ಹೀರುತ್ತಾರೆ. ಇನ್ನು ಕೆಲವರಿಗೆ ಯಾವುದೇ ರೀತಿಯಲ್ಲಾದರೂ ಕೂಡ ಕಪ್ಪು ಚಹಾ ಇಷ್ಟವಾಗುತ್ತದೆ, ಜೊತೆಗೆ ಅದನ್ನೂ ಆಸ್ವಾದಿಸುತ್ತಾರೆ ಕೂಡ. ಚಹಾ ಪ್ರಿಯರು ಇದನ್ನು ಕುಡಿಯುವುದನ್ನು ಆನಂದಿಸಿದರೆ, ಅವರಲ್ಲಿ ಹೆಚ್ಚಿನವರಿಗೆ ಕಪ್ಪು ಚಹಾದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿಲ್ಲ! ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಎಲೆಗಳಿಂದ ತಯಾರಾಗುವ ಈ ಹುಡಿಗಳಿಂದ ಈ ಕಪ್ಪು ಚಹಾ ತಯಾರಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮುಂಬೈನ ಮುಲುಂಡ್ನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಪೌಷ್ಟಿಕಾಂಶ ಚಿಕಿತ್ಸಕ ಮೈತ್ರಿ ಗಾಲಾ ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಕಪ್ಪು ಚಹಾವು ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ಚಹಾಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಹಾಗಾದರೆ ಇದರ ಪ್ರಯೋಜನಗಳ ಬಗ್ಗೆಯೂ ತಿಳಿಯೋಣ.
ಕಪ್ಪು ಚಹಾವು ಆಕ್ಸಿಡೀಕರಣಕ್ಕೆ ಒಳಗಾಗುತ್ತದೆ, ಹಾಗಾಗಿ ಇದು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ, ಗ್ರೀನ್ ಟೀ ಆಕ್ಸಿಡೀಕರಣಕ್ಕೆ ಒಳಗಾಗುವುದಿಲ್ಲ. ಇನ್ನು ಕಪ್ಪು ಚಹಾವು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಪ್ಪು ಚಹಾದಲ್ಲಿ ಪಾಲಿಫಿನಾಲ್ ಎಂಬ ಉತ್ಕರ್ಷಣ ನಿರೋಧಕವು ಸಮೃದ್ಧವಾಗಿದೆ, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು, ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪಾಲಿಫಿನಾಲ್ಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಎಲೆಗಳಿಂದ ಕಪ್ಪು ಚಹಾವನ್ನು ತಯಾರಿಸಲಾಗುತ್ತದೆ. ಇದು ಕ್ಯಾಟೆಚಿನ್ಗಳು ಮತ್ತು ಥಿಯಾಫ್ಲಾವಿನ್ಗಳನ್ನು ಹೊಂದಿರುತ್ತದೆ, ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಪ್ಪು ಚಹಾದಲ್ಲಿರುವ ಫ್ಲೇವನಾಯ್ಡ್ಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಅಂತಿಮವಾಗಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದಿನವಿಡೀ ಎಚ್ಚರವಾಗಿರಲು ನಿಮಗೆ ಕಷ್ಟವಾಗುತ್ತಿದೆಯೇ? ಹಾಗಾದರೆ ಕಪ್ಪು ಚಹಾದೊಂದಿಗೆ ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೀವು ಏಕೆ ಪ್ರಯತ್ನಿಸಬಾರದು? ಇದು ಜಾಗರೂಕತೆ ಮತ್ತು ಗಮನವನ್ನು ಸುಧಾರಿಸುತ್ತದೆ ಜೊತೆಗೆ ಬ್ಲ್ಯಾಕ್ ಟೀಯು ಅಮೈನೋ ಆಮ್ಲದ ಅಂಶವಾದ ಕೆಫೀನ್ ಮತ್ತು ಎಲ್- ಥಿಯಾನೈನ್ ಅನ್ನು ಹೊಂದಿರುತ್ತದೆ.
ಕಡಿಮೆ ಕ್ಯಾಲೊರಿ, ಸಿಹಿಯಾಗದ ಪಾನೀಯವಾದ ಬ್ಲ್ಯಾಕ್ ಟೀ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಪ್ಪು ಚಹಾದಲ್ಲಿ ಫ್ಲೇವೊನ್ ಗಳು ಇರುವುದರಿಂದ, ಅವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕ ಇಳಿಸಲು ಸೂಕ್ತವಾಗಿವೆ, ವಿಶೇಷವಾಗಿ ಸರಿಯಾದ ಆಹಾರ ಮತ್ತು ವ್ಯಾಯಾಮದೊಂದಿಗೆ ಸಂಯೋಜಿಸಿದಾಗ ಇದು ಪ್ರತಿಫಲ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ದಿನನಿತ್ಯ ಕರಿಮೆಣಸಿನ ಚಹಾವನ್ನು ಕುಡಿಯಿರಿ: ಆರೋಗ್ಯವಾಗಿರಿ
ಕಪ್ಪು ಚಹಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಯಿರುವ ಜನರು ಈ ಪಾನೀಯವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ಪೌಷ್ಟಿಕಾಂಶ ಚಿಕಿತ್ಸಕ ಮೈತ್ರಿ ಗಾಲಾ ವಿವರಿಸುತ್ತಾರೆ. ಇದು ಟ್ಯಾನಿನ್ ಗಳನ್ನು ಹೊಂದಿರುತ್ತದೆ, ಇದು ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಈ ಪಾನೀಯವನ್ನು ಊಟದ ನಡುವೆ ಸೇವಿಸಲು ಸಹ ಹೆಚ್ಚು ಶಿಫಾರಸು ಮಾಡಲಾಗಿದೆ. ಗಾಲಾ ವಿವರಿಸಿದಂತೆ ಕಪ್ಪು ಚಹಾ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಇಲ್ಲಿವೆ:
– ಹೆಚ್ಚುವರಿ ಟ್ಯಾನಿನ್ಗಳು ಜೀರ್ಣಾಂಗವ್ಯೂಹವನ್ನು ಕಿರಿಕಿರಿಗೊಳಿಸಬಹುದು, ವಿಶೇಷವಾಗಿ ದುರ್ಬಲ ಕರುಳನ್ನು ಹೊಂದಿರುವವರಿಗೆ, ಹೊಟ್ಟೆ ನೋವು / ವಾಂತಿ / ಉಲ್ಬಣಗೊಂಡ ಅತಿಸಾರ ಇತ್ಯಾದಿಗಳಿಗೆ ಕಾರಣವಾಗಬಹುದು.
– ಕೆಫೀನ್ ನ ಅತಿಯಾದ ಸೇವನೆಯು ಆತಂಕ ಮತ್ತು ಚಡಪಡಿಕೆಯನ್ನು ಹೆಚ್ಚಿಸಬಹುದು.
– ಬ್ಲ್ಯಾಕ್ ಟೀ ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಸುಖ ನಿದ್ರೆಗೆ ಅಡ್ಡಿಯಾಗಬಹುದು.
– ಇದು ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತ ಅಥವಾ ಕಡಿಮೆ ಶಿಶು ಜನನ ತೂಕದಂತಹ ತೊಡಕುಗಳಿಗೆ ಕಾರಣವಾಗಬಹುದು.
– ಅತಿಯಾದ ಕೆಫೀನ್ ಹೃದಯದ ಗಾಯಗಳಿಗೆ ಕಾರಣವಾಗಬಹುದು ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಆಸಿಡ್ ರಿಫ್ಲಕ್ಸ್ ಅನ್ನು ಉಲ್ಬಣಗೊಳಿಸಬಹುದು.
ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಿ ಬ್ಲ್ಯಾಕ್ ಟೀ ನಿಮ್ಮ ಆಹಾರಕ್ಕೆ ಅತ್ಯುತ್ತಮ ಸೇರ್ಪಡೆಯಾಗಿದೆ. ಇದನ್ನು ಕುಡಿಯುವುದು ಸುರಕ್ಷಿತವಾಗಿದ್ದರೂ, ಜನರು ಅದನ್ನು ಮಿತವಾಗಿ ಕುಡಿಯಬೇಕಾಗುತ್ತದೆ. ಜೊತೆಗೆ ಕಪ್ಪು ಚಹಾದಲ್ಲಿ ಕೆಫೀನ್ ಇರುವುದರಿಂದ, ಮಕ್ಕಳು ಕಪ್ಪು ಚಹಾವನ್ನು ತಪ್ಪಿಸಬೇಕು. ವಯಸ್ಕರು ಪ್ರತಿದಿನ 2- 3 ಕಪ್ ಕುಡಿಯಬಹುದು ಮತ್ತು ಪಾನೀಯದ ಅತಿಯಾದ ಸೇವನೆಯನ್ನು ತಪ್ಪಿಸಿ ಏಕೆಂದರೆ ಇದು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಕಪ್ಪು ಚಹಾ ಕುಡಿಯಲು ಸರಿಯಾದ ಸಮಯ ಯಾವಾಗ ಎಂದು ನೀವು ಯೋಚಿಸುತ್ತಿದ್ದರೆ, ಬೆಳಿಗ್ಗೆ ಅದನ್ನು ಕುಡಿಯುವುದು ಉತ್ತಮ ಎಂದು ಗಾಲಾ ಶಿಫಾರಸು ಮಾಡುತ್ತಾರೆ. ಕಪ್ಪು ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ, ಅದು ನಿಮ್ಮ ದಿನವನ್ನು ಉತ್ತಮವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ