ಗರ್ಭಿಣಿಯರು ಥಿಯೇಟರ್ ನಲ್ಲಿ ಸಿನಿಮಾ ನೋಡಬಹುದಾ… ಅಪಾಯಕಾರಿಯಾ? ವೈದ್ಯರು ಹೇಳೋದೇನು?

ಥಿಯೇಟರ್ ನಲ್ಲಿ ಕೇಳಿಬರುವ ಕರ್ಕಶ ಶಬ್ಧದಿಂದ ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಂಭವವಿದೆ

ಗರ್ಭಿಣಿಯರು ಥಿಯೇಟರ್ ನಲ್ಲಿ ಸಿನಿಮಾ ನೋಡಬಹುದಾ... ಅಪಾಯಕಾರಿಯಾ? ವೈದ್ಯರು ಹೇಳೋದೇನು?
ಥಿಯೇಟರ್ ನಲ್ಲಿ ಕೇಳಿಬರುವ ಕರ್ಕಶ ಶಬ್ಧದಿಂದ ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಂಭವವಿದೆ
Edited By:

Updated on: Apr 22, 2023 | 2:28 PM

ವೈದ್ಯರು ಸಾಮಾನ್ಯವಾಗಿ ಗರ್ಭಿಣಿಯರಿಗೆ (Pregnant Woman) ತುಂಬಾ ಜಾಗರೂಕರಾಗಿರಿ ಎಂದು ಹೇಳುತ್ತಾರೆ. ವಿಶೇಷವಾಗಿ ದೈಹಿಕ ಚಟುವಟಿಕೆಗಳನ್ನು ಮಾಡಬಾರದು ಮತ್ತು ಮಾನಸಿಕವಾಗಿ ತುಂಬಾ ಶಾಂತವಾಗಿರಬೇಕು ಎಂದು ಹೇಳಲಾಗುತ್ತದೆ. ಅದರಲ್ಲೂ ತಿಂಗಳುಗಳು ತುಂಬುತ್ತಾ ಬಂದಾಗ ವಿಶೇಷ ಕಾಳಜಿ ವಹಿಸಬೇಕು. ಇದಲ್ಲದೆ, ಗರ್ಭಧಾರಣೆಯ ಆರು ತಿಂಗಳ ನಂತರ, ಕೊನೆಯ ತ್ರೈಮಾಸಿಕದಲ್ಲಿ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ತಾಯಿ ಹಾಗೂ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಗರ್ಭಿಣಿಯರು ಆಹಾರ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಹೆರಿಗೆ ಸಮಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮತ್ತು ಮಗುವಿನ ಆರೋಗ್ಯದ (Health) ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ನಮ್ಮ ಹಿರಿಯರು ಹೇಳುವ ಪ್ರಕಾರ ಗರ್ಭಿಣಿಯರು ಕೊನೆಯ ಮೂರು ತಿಂಗಳಲ್ಲಿ ಹೆಚ್ಚು ಮನೆಯಿಂದ ಹೊರಗೆ ಹೋಗಬಾರದು. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುವಾಗ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು, ತೂಕವನ್ನು ಹೊರಬಾರದು ಮತ್ತು ಅದೇ ಸಮಯದಲ್ಲಿ ಪೌಷ್ಟಿಕಾಂಶವನ್ನು ಚೆನ್ನಾಗಿ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ.

ಗರ್ಭಿಣಿ ಮಹಿಳೆಯ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ. ಅದರಲ್ಲೂ ಅವರ ಹಾರ್ಮೋನ್ ಗಳಲ್ಲಿ ಹಲವು ವ್ಯತ್ಯಾಸಗಳಿವೆ. ಹಾಗಾಗಿ ಹುಷಾರಾಗಿರಬೇಕು. ಇಲ್ಲದಿದ್ದರೆ ಮಗುವಿಗೆ ಅಪಾಯವಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಅನೇಕ ಗರ್ಭಿಣಿಯರಿಗೆ ತಾವು ಗರ್ಭಿಣಿಯಾಗಿದ್ದಾಗ ಚಿತ್ರಮಂದಿರದಲ್ಲಿ ಸಿನಿಮಾ ನೋಡಬಹುದೇ ಎಂಬ ಅನುಮಾನ ಮೂಡುತ್ತದೆ. ಆದರೆ ಈ ಬಗ್ಗೆ ವಿಭಿನ್ನ ವಾದಗಳಿವೆ. ಕೆಲವರು ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ರೆ ಅಪಾಯ ಇಲ್ಲ ಅಂತಾರೆ. ಇನ್ನು ಕೆಲವರು ನಾಟಕ/ ಸಿನಿಮಾ ನೋಡುವುದು ತುಂಬಾ ಅಪಾಯಕಾರಿ ಎಂದು ಹೇಳುತ್ತಾರೆ.

ವಾಸ್ತವವಾಗಿ, ಥಿಯೇಟರ್‌ನಲ್ಲಿ ಚಲನಚಿತ್ರವನ್ನು ನೋಡುವುದು ಗರ್ಭಿಣಿಯರಿಗೆ ಅಪಾಯಕಾರಿ ಎಂದು ಯಾವುದೇ ವೈಜ್ಞಾನಿಕ ಅಧ್ಯಯನಗಳು ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ. ಥಿಯೇಟರ್ ನಲ್ಲಿ ಸಿನಿಮಾ ನೋಡುವುದರಿಂದ ಗರ್ಭದಲ್ಲಿರುವ ಭ್ರೂಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯಾರು ಹೇಳುವುದಿಲ್ಲ. ಆದರೆ ಗರ್ಭಿಣಿಯರು ಕತ್ತಲಲ್ಲಿ ಸಿನಿಮಾ ನೋಡುವುದರಿಂದ ಕಣ್ಣಿಗೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಗರ್ಭಿಣಿ ಮಹಿಳೆಯ ದೇಹದಲ್ಲಿ ಹಾರ್ಮೋನುಗಳು ನಿಯಮಿತವಾಗಿರದೇ ಇರುವುದರಿಂದ ಕಣ್ಣಿನ ನರಗಳಿಗೆ ಹಾನಿಯಾಗುವ ಅಪಾಯವಿದೆ. ಹಾಗಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡದಿರುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಇದೇ ವೇಳೆ ಥಿಯೇಟರ್ ನಲ್ಲಿ ಕೇಳಿಬರುವ ಕರ್ಕಶ ಶಬ್ಧದಿಂದ ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಂಭವವಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡುವಾಗ ಜೋರಾಗಿ ಶಬ್ದ ಕೇಳುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಸಭಾಂಗಣದಲ್ಲಿ ಉತ್ತಮ ಸಂಗೀತ, ನೃತ್ಯ ಮತ್ತು ಉತ್ತಮ ಹಾಸ್ಯದೊಂದಿಗೆ ನಾಟಕಗಳು ಮಾನಸಿಕ ಉತ್ಸಾಹವನ್ನು ತರುತ್ತವೆ. ಗರ್ಭಿಣಿಯರು ಬಯಸಿದ ಮಾನಸಿಕ ಶಾಂತಿಯನ್ನು ಪಡೆಯುತ್ತಾರೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Sat, 22 April 23