
ದಿನಪೂರ್ತಿ ಕೆಲಸ ಮಾಡಿ ಬಂದವರಿಗೆ ರಾತ್ರಿ ಒಳ್ಳೆ ನಿದ್ರೆ (Sleep) ಬಂದರೆ ಸಾಕಾಗಿರುತ್ತೆ. ದಣಿದ ದೇಹಕ್ಕೆ ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಆರೋಗ್ಯ (Health) ಹಾಳಾಗುತ್ತೆ. ಆದ್ರೆ ನಮ್ಮ ನಿದ್ರೆಯೇ ಮುಂದೆ ಬರುವ ದೊಡ್ಡ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಸೂಚನೆ ನೀಡುತ್ತಿದ್ದರೆ? ಹೌದು. ನಮ್ಮ ದೇಹವನ್ನು ಸ್ವಚ್ಛವಾಗಿಡಲು ಸದ್ದಿಲ್ಲದೆ ಕೆಲಸ ಮಾಡುವ ನಮ್ಮ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅದು ರಾತ್ರಿ ಸಮಯದಲ್ಲಿ ಗೋಚರಿಸುತ್ತವೆ. ಹಾಗಾಗಿ ಈ ರೀತಿಯ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಈ ರೀತಿ ಆದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಹಾಗಾದರೆ ರಾತ್ರಿ ಸಮಯದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡು ಬಂದಾಗ ನಾವು ಎಚ್ಛೆತ್ತುಕೊಳ್ಳಬೇಕು? ಕಿಡ್ನಿ (Kidney) ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ನಮ್ಮ ದೇಹದಲ್ಲಿ ಕಂಡು ಬರುವ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ ಅಥವಾ ಮಧ್ಯದಲ್ಲಿ ನಿಮಗೆ ಎಚ್ಚರವಾದಾಗ ನಿಮ್ಮ ಕಾಲುಗಳು ಊದಿಕೊಳ್ಳುತ್ತಿದ್ದರೆ ಜಾಗರೂಕರಾಗಿರಿ. ಈ ರೀತಿ ಆಗುವುದು ಮೂತ್ರಪಿಂಡಗಳು ನೀರನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ, ದೇಹದಲ್ಲಿ ಅದರಲ್ಲಿಯೂ ಕಾಲುಗಳಲ್ಲಿ ದ್ರವ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಈ ರೀತಿ ಲಕ್ಷಣ ಕಂಡು ಬರುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ.
ರಾತ್ರಿ ನಿದ್ದೆಯಿಂದ ಎದ್ದು ಆಗಾಗ ಶೌಚಾಲಯಕ್ಕೆ ಹೋಗಬೇಕು ಎನಿಸುವುದು ಸಾಮಾನ್ಯವಲ್ಲ. ನೀವು ಪ್ರತಿ ಎರಡರಿಂದ ಮೂರು ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸಲು ಎದ್ದೇಳುತ್ತಿದ್ದರೆ, ನಿಮ್ಮ ಮೂತ್ರಪಿಂಡಗಳು ತಮ್ಮ ಶೋಧಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ ಎಂಬುದರ ಸ್ಪಷ್ಟ ಸೂಚನೆಯಾಗಿರಬಹುದು. ಹಾಗಾಗಿ ಈ ರೀತಿ ಲಕ್ಷಣ ಕಂಡು ಬಂದಾಗ ಅದನ್ನು ನಿರ್ಲಕ್ಷಿಸಬೇಡಿ.
ಮೂತ್ರಪಿಂಡಗಳು ತನ್ನ ಕೆಲಸ ಮಾಡಲು ವಿಫಲವಾದಾಗ, ದೇಹದಲ್ಲಿ ದ್ರವವು ಸಂಗ್ರಹವಾಗಬಹುದು, ಇದು ಶ್ವಾಸಕೋಶವನ್ನು ತಲುಪಬಹುದು. ಈ ಸಮಸ್ಯೆ ನಿದ್ರೆ ಮಾಡುವಾಗ ಗಮನಕ್ಕೆ ಬರುತ್ತದೆ. ಹೇಗೆಂದರೆ ನಾವು ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯಾಗುವುದು ಮೂತ್ರಪಿಂಡಗಳು ನಮಗೆ ನೀಡುವ ಒಂದು ಎಚ್ಚರಿಕೆಯ ಸಂಕೇತವಾಗಿರುತ್ತದೆ. ಹಾಗಾಗಿ ರಾತ್ರಿ ಉಸಿರಾಟಕ್ಕೆ ಸಮಸ್ಯೆಯಾದರೆ ಅದ್ಕಕೆ ಕಿಡ್ನಿಯ ಆರೋಗ್ಯ ಹದಗೆಟ್ಟಿರುವುದು ಕಾರಣವಾಗಿರಬಹುದು.
ನೀವು ರಾತ್ರಿ ಮಲುಗಿದ ಮೇಲೆ ಸರಿಯಾಗಿ ನಿದ್ರೆ ಬರದಿರುವುದು, ಅಂದರೆ ರಾತ್ರಿ ಸಮಯದಲ್ಲಿ ಕಂಡು ಬರುವ ಚಡಪಡಿಕೆ ಮತ್ತು ಚೆನ್ನಾಗಿ ನಿದ್ರೆ ಮಾಡಲು ಆಗದಿರುವುದು, ಪದೇ ಪದೇ ಎಚ್ಚರವಾಗುವುದು, ಹೀಗೆ ನಿದ್ರೆ ಸರಿಯಾಗಿ ಆಗದಿರುವುದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಯ ಸಂಕೇತವಾಗಿರಬಹುದು.
ಇದನ್ನೂ ಓದಿ: Kidney Disease: ಬೆಳಗ್ಗಿನ ಸಮಯದಲ್ಲಿ ಈ ರೀತಿಯಾಗುವುದು ಕಿಡ್ನಿ ಸಮಸ್ಯೆಯ ಲಕ್ಷಣ
ನಿದ್ರೆ ಮಾಡುವ ಸಮಯದಲ್ಲಿ ಆಗಾಗ ಸ್ನಾಯುಗಳು ಬಿಗಿಯಾಗುವುದು ಅಥವಾ ಹಠಾತ್ ಜರ್ಕ್ ಉಂಟಾಗುವುದು ಕೇವಲ ಆಯಾಸವಲ್ಲ. ಇದು ಕ್ಯಾಲ್ಸಿಯಂ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನವನ್ನು ಸೂಚಿಸುತ್ತದೆ, ಇದು ಮೂತ್ರಪಿಂಡ ವೈಫಲ್ಯದಿಂದ ಉಂಟಾಗಬಹುದು.
ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರವೂ ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ತಲೆ ಭಾರವಾಗಿದ್ದರೆ, ನಿರಂತರವಾಗಿ ದಣಿವಾದ ಅನುಭವವಾಗುತ್ತಿದ್ದರೆ ಜೊತೆಗೆ ದಿನವಿಡೀ ಆಲಸ್ಯದಿಂದ ಕೂಡಿದ್ದರೆ, ನಿಮ್ಮ ಮೂತ್ರಪಿಂಡಗಳು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕಲು ಅಸಮರ್ಥವಾಗಿದೆ ಎಂದರ್ಥ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ