ಕಳೆದ ಎರಡು ವರ್ಷಗಳಿಂದ ಕೊರೊನಾ ವಿಶ್ವದೆಲ್ಲೇಡೆ ಹಬ್ಬಿದು. ಸಾವು, ನೋವು ಸಂಭವಿಸಿದೆ. ಮೊದಲನೇ ಅಲೆ, ಎರಡನೇ ಅಲೆ, ಮೂರನೇ ಅಲೆ, ಅಷ್ಟೇ ಅಲ್ಲದೆ ನಾಲ್ಕನೇ ಅಲೆ ಕೂಡ ವಕ್ಕರಿಸಿದೆ ಎಂಬುವುದು ತಿಳಿದಿರುವ ವಿಚಾರ. ಸದ್ಯಕ್ಕೆ ಸುದ್ದಿಯಲ್ಲಿರುವುದು ಕೊರೊನಾ ರೂಪಾಂತರಿ ಒಮಿಕ್ರಾನ್(Omicron). ಜನರು ಮಾಸ್ಕ್, ಸ್ಯಾನಿಟೈಜರ್ ಜತೆಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿರುವ ಸಂದರ್ಭದಲ್ಲಿಯೇ ಯುಕೆ ಸಂಶೋಧಕರು ಎಚ್ಚರಿಕೆಯನ್ನು ನೀಡಿದ್ದಾರೆ. ಗಂಟಲು ನೋವು, ಶೀತ, ನೆಗಡಿ, ಜ್ವರ ಮತ್ತು ತಲೆನೋವು ಇದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇಂತಹ ಪ್ರಕರಣಗಳಲ್ಲಿ ಅರ್ಧದಷ್ಟು ಕೊರೊನಾ ಸೋಂಕು ಆಗಿರುತ್ತದೆ ಎಂದು ಯುಕೆ ಸಂಶೋಧಕರು ತಿಳಿಸಿದ್ದಾರೆ.
ಜೊಯಿ ಕೊವಿಡ್ ಅಧ್ಯಯನ ತಂಡವು ಸಾರ್ವಜನಿಕರಿಂದ ಈ ಕುರಿತು ಪ್ರತಿಕ್ರಿಯೆಯನ್ನು ಕಲೆಹಾಕಿದ್ದು, ಸಾಂಕ್ರಾಮಿಕ ರೋಗವನ್ನು ಪತ್ತೆಹಚ್ಚಲು ಮುಂದಾಗಿದೆ. ಶೀತದಂತಹ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಅರ್ಧದಷ್ಟು ಜನರು ಕೂಡ ವಾಸ್ತವವಾಗಿ ಕೊವಿಡ್ ಸೋಂಕಿತರಾಗಿರುತ್ತಾರೆ ಎಂದು ಈ ಅಧ್ಯಯನ ಅಂದಾಜಿಸಿದೆ.
ಹೊಸ ಕೊರೊನಾ ರೂಪಾಂತರಿ ಒಮಿಕ್ರಾನ್ ಸದ್ಯ ಎಲ್ಲೆಡೆ ಹೆಚ್ಚಾಗುತ್ತಿದ್ದು, ವೇಗವಾಗಿ ಸೋಂಕು ಹರಡುತ್ತಿದೆ. ದಿನಕ್ಕೆ ಸುಮಾರು 144,000 ಜನರು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಿನವರಿಗೆ ಪ್ರಾರಂಭದಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಕೊನೆಗೆ ಒಮಿಕ್ರಾನ್ ಇರುವುದು ಧೃಡವಾಗುತ್ತಿದೆ. ಆದರೆ ಲಸಿಕೆ ಹಾಕದವರೂ ಸೇರಿದಂತೆ ಕೆಲವು ಜನರಲ್ಲಿ ಇದು ಗಂಭೀರವಾದ ಅನಾರೋಗ್ಯವಾಗಿ ಪರಿಣಮಿಸುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಬರೀ ನೆಗಡಿ ಅಥವಾ ಶೀತ ಎಂದು ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸುವುದು ಅಗತ್ಯ. ನಿಮಗೆ ಶೀತದ ಲಕ್ಷಣಗಳು ಕಂಡುಬಂದರೆ, ಕೊವಿಡ್ ಪರೀಕ್ಷೆ ಮಾಡಿಸಿ ಎಂದು ವಿಜ್ಞಾನಿ ಪ್ರೊ ಟಿಮ್ ಸ್ಪೆಕ್ಟರ್ ಹೇಳಿದ್ದಾರೆ.
ಒಮಿಕ್ರಾನ್ ಪಾಸಿಟಿವ್ ಬಂದ ಅನೇಕರಲ್ಲಿ ಗಂಟಲು ನೋವು, ಶೀತ ಮತ್ತು ತಲೆನೋವು ಕಾಣಿಸಿಕೊಂಡಿದೆ. ಪ್ರಾರಂಭದ ಹಂತದಲ್ಲಿ ಅನೇಕರಿಗೆ ಈ ರೀತಿಯ ಸೌಮ್ಯ ಲಕ್ಷಣಗಳು ಕಂಡುಬಂದಿದೆ. ನಂತರ ಕೊವಿಡ್ ಪರೀಕ್ಷೆ ಮಾಡಿದ್ದು, ಈ ವೇಳೆ ಸೋಂಕು ಇರುವುದು ಧೃಡಪಟ್ಟಿದೆ ಎಂದು ವಿಜ್ಞಾನಿ ಪ್ರೊ ಟಿಮ್ ಸ್ಪೆಕ್ಟರ್ ತಿಳಿಸಿದ್ದಾರೆ.
ಯುಕೆ ಬುಧವಾರ 106,122 ಹೊಸ ಕೊವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಮೊದಲ ಬಾರಿಗೆ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 100,000 ಮೀರಿದೆ. ಪ್ರತಿ ಎರಡರಿಂದ ಮೂರು ದಿನಗಳಿಗೊಮ್ಮೆ ಸೋಂಕು ದ್ವಿಗುಣಗೊಳ್ಳುತ್ತಿದೆ ರಾಷ್ಟ್ರೀಯ ಆರೋಗ್ಯ ಸೇವೆ ಮೇಲೆ ಬೀರಬಹುದಾದ ಒತ್ತಡದ ಬಗ್ಗೆ ಆರೋಗ್ಯ ಅಧಿಕಾರಿಗಳು ಕಾಳಜಿ ವಹಿಸುವುದು ಅಗತ್ಯ ಎಂದು ಯುಕೆ ಸಂಶೋದಕರು ಹೇಳಿದ್ದಾರೆ.
ಪ್ರಾಥಮಿಕ ಅಧ್ಯಯನದ ಪ್ರಕಾರ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಾರಂಭದಲ್ಲಿ ಸೌಮ್ಯವಾಗಿರುತ್ತದೆ. ಇತರ ರೂಪಾಂತರಗಳಿಗಿಂತ ಕಡಿಮೆ ಜನರು ಈ ಹೊಸ ರೂಪಾಂತರಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದರೆ ಸೋಂಕಿನ ತೀವೃತೆಗೆ ಒಳಗಾಗಿರುವವರಿಗೆ ಹೆಚ್ಚಿನ ಆರೈಕೆ ಅಗತ್ಯ. ಕ್ರಿಸ್‌ಮಸ್ ಸಂದರ್ಭದಲ್ಲಿ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡಿದ ಜನರು ಮೊದಲು ಕೊವಿಡ್ ಪರೀಕ್ಷೆ ಮಾಡಿಸಿ ಎಂದು ಯುಕೆ ಸಂಶೋಧಕರು ಸಲಹೆ ನೀಡಿದ್ದಾರೆ.
ಡಿಸೆಂಬರ್ 16 ಕ್ಕೆ ಕೊನೆಗೊಳ್ಳುವ ವಾರದಲ್ಲಿ ಯುಕೆಯಲ್ಲಿ 1.3 ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಸಮೀಕ್ಷೆ ಪ್ರಾರಂಭವಾದಾಗಿನಿಂದ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ONS) ದಾಖಲಿಸಿದ ಅತ್ಯಧಿಕ ಮಟ್ಟದ ಸೋಂಕು ಇದಾಗಿದೆ.
ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಿದೆ. ಕಳೆದ ಏಳು ದಿನಗಳ ಅವಧಿಯಲ್ಲಿ ಯುಕೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯನ್ನು ಅಂದಾಜು ಮಾಡಿ ವರದಿ ಮಾಡಲಾಗಿದೆ.
ಇಂಗ್ಲೆಂಡ್‌ನಲ್ಲಿ 45 ರಲ್ಲಿ ಒಬ್ಬರು
ವೇಲ್ಸ್‌ನಲ್ಲಿ 55 ರಲ್ಲಿ ಒಬ್ಬರು
ಉತ್ತರ ಐರ್ಲೆಂಡ್‌ನಲ್ಲಿ 50 ರಲ್ಲಿ ಒಬ್ಬರು
ಸ್ಕಾಟ್ಲೆಂಡ್‌ನಲ್ಲಿ 70 ರಲ್ಲಿ ಒಬ್ಬರು
ಇದನ್ನೂ ಓದಿ:
ಒಮಿಕ್ರಾನ್, ಕೊರೊನಾ ಭೀತಿ ನಡುವೆ ಮತ್ತೊಂದು ಆತಂಕ; ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲುತಿವೆ ನವಜಾತ ಶಿಶುಗಳು
ಕುಶಾಲನಗರ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಒಮಿಕ್ರಾನ್ ಆತಂಕ ಹಿನ್ನೆಲೆ ಭಾನುವಾರ ಸಿಎಂ ಸಭೆ
Published On - 12:39 pm, Mon, 27 December 21